ನವದೆಹಲಿ, ಸೆ. ಹಿಂದಿನ 26/11 ಮುಂಬೈ ದಾಳಿಯ ನಂತರ ಭಾರತ ಪಾಕಿಸ್ತಾನದ ವಿರುದ್ಧ ಮಿಲಿಟರಿ ಪ್ರತೀಕಾರದ ಬಗ್ಗೆ ಯೋಚಿಸಿತ್ತು. ಆದರೆ ಅಮೆರಿಕ ಸೇರಿದಂತೆ ಅಂತರರಾಷ್ಟ್ರೀಯ ಸಮುದಾಯದ ಒತ್ತಡ ಮತ್ತು ಹಿರಿಯ ರಾಜತಾಂತ್ರಿಕರ ಸಲಹೆಯ ಮೇರೆಗೆ ದಾಳಿ ನಡೆಸಿರಲಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಹೇಳಿದ್ದಾರೆ.
ಪಹಲ್ಗಾಮ್ ದಾಳಿ ನಂತರ ಭಾರತ ಆರಂಭಿಸಿದ ಅಪರೇಷನ್ ಸಿಂಧೂರ ಕಾರ್ಯಚರಣೆಯನ್ನು ನಿಲ್ಲಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದೆಹಲಿ ಮತ್ತು ಇಸ್ಲಾಮಾಬಾದ್ಗೆ ಮನವಿ ಮಾಡಿಕೊಂಡ ನಂತರ ಯುದ್ಧ ನಿಲ್ಲಿಸಲಾಯಿತು ಎಂಬ ಹೇಳಿಕೆಯನ್ನು ಮೋದಿ ಸರ್ಕಾರ ನಿರಾಕರಿಸಿರುವ ಬೆನ್ನಲ್ಲೆ ಚಿದು ಅವರ ಈ ಹೇಳಿಕೆ ಬಂದಿದೆ.
ಆಗಿನ ಆಡಳಿತಾರೂಢ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಚಿದಂಬರಂ ಹಿಂದಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮುಂಬೈ ದಾಳಿ ನಂತರ ಇಡೀ ಜಗತ್ತು ಯುದ್ಧ ಪ್ರಾರಂಭಿಸಬೇಡಿ ಎಂದು ಹೇಳಿತು. ಇದರಲ್ಲಿ ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಕಾಂಡೋಲೀಜಾ ರೈಸ್ ಅವರೊಂದಿಗಿನ ಸಂಭಾಷಣೆಯೂ ಸೇರಿತ್ತು ಮತ್ತು ಸರ್ಕಾರವು ಸಶಸ್ತ್ರ ಪ್ರತಿಕ್ರಿಯೆಯನ್ನು ಮರುಪರಿಶೀಲಿಸುವಂತೆ ಮನವೊಲಿಸಿತು ಎಂದು ಕಾಂಗ್ರೆಸ್ ನಾಯಕ ಹೇಳಿಕೊಂಡಿದ್ದಾರೆ.
ನಾನು ಅಧಿಕಾರ ವಹಿಸಿಕೊಂಡ ಎರಡು ಅಥವಾ ಮೂರು ದಿನಗಳ ನಂತರ (ಕೊಂಡೋಲೀಜಾ ರೈಸ್ ಬಂದರು) ನನ್ನನ್ನು ಮತ್ತು ಪ್ರಧಾನಿಯನ್ನು (ಆಗ ಡಾ. ಮನಮೋಹನ್ ಸಿಂಗ್) ಭೇಟಿ ಮಾಡಿ. ದಯವಿಟ್ಟು ಪ್ರತಿಕ್ರಿಯಿಸಬೇಡಿ ಎಂದು ಹೇಳಿದರು. ಇದು ಸರ್ಕಾರ ತೆಗೆದುಕೊಳ್ಳುವ ನಿರ್ಧಾರ ಎಂದು ನಾನು ಹೇಳಿದೆ. (ಆದರೆ). ಅವರು ಪ್ರತೀಕಾರದ ಕ್ರಮ ಬೇಡ ಎಂದರು ಹೀಗಾಗಿ ಯುದ್ಧ ಕೈ ಬಿಡಲಾಯಿತು ಎಂದು ಹೇಳಿಕೊಂಡಿದ್ದಾರೆ.