ಅಹಮದಾಬಾದ್, ಅ. 4 (ಪಿಟಿಐ) ಭಾರತ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 448 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿದೆ. ಮೂರನೇ ದಿನದ ಆರಂಭದಲ್ಲಿ 286 ರನ್‌ಗಳ ಗಮನಾರ್ಹ ಮುನ್ನಡೆಯೊಂದಿಗೆ 5 ವಿಕೆಟ್‌ಗೆ 448 ರನ್‌ಗಳೊಂದಿಗೆ ಆಟ ಆರಂಭಿಸಬೇಕಿದ್ದ ಭಾರತ ಇಂದು ಬೆಳಿಗ್ಗೆ ಏಕಾಏಕಿ ಡಿಕ್ಲೇರ್ ಘೋಷಿಸಿಕೊಂಡಿದೆ.
ಮೊದಲ ಇನ್ನಿಂಗ್ಸ್ ನಲ್ಲಿ ಕನ್ನಡಿಗ ಕೆಎಲ್ ರಾಹುಲ್ (100), ಧ್ರುವ್ ಜುರೆಲ್ (125) ಮತ್ತು ರವೀಂದ್ರ ಜಡೇಜಾ (104 ಅಜೇಯ) ಅವರ ಶತಕಗಳು ಪ್ರಮುಖವಾಗಿದ್ದವು. ಜಡೇಜಾ ಇಂದು ಬೆಳಿಗ್ಗೆ ಆಟ ಆರಂಭಿಸಬೇಕಿತ್ತಾದರೂ ಇಂದು ಏಕಾಏಕಿ ಡಿಕ್ಲೇರ್ ಮಾಡಿಕೊಂಡು ವೆಸ್ಟ್ ಇಂಡೀಸ್ ಎರಡನೇ ಇನಿಂಗ್ಸ್ ಅವಕಾಶ ಕಲ್ಪಿಸಲಾಗಿದೆ. ಸಂಕ್ಷಿಪ್ತ ಸ್ಕೋರ್‌ಗಳು: ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್‌್ಸನಲ್ಲಿ 162 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಭಾರತ 448/5 ಡಿಕ್ಲೇರ್ ಮಾಡಿದೆ.