ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಪ್ರೀತಿ ಬಗ್ಗೆ ಗುಸಗುಸು ಇಂದು ನಿನ್ನೆಯದ್ದಲ್ಲ. ಇವರು ಪ್ರೀತಿಯಲ್ಲಿದ್ದಾರೆ ಎಂಬುದು ಬಹು ವರ್ಷಗಳಿಂದ ಕೇಳಿಬರುತ್ತಿರುವ ಅಂತೆ-ಕಂತೆಗಳು. ಈ ಪ್ರೇಮಪಕ್ಷಿಗಳೂ ಕೂಡಾ ಆಗಾಗ್ಗೆ ವದಂತಿಗಳಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದರು. ಹಬ್ಬ ಹರಿದಿನಗಳಿಗೆ ರಶ್ಮಿಕಾ, ವಿಜಯ್ ಮನೆಗೆ ಹೋಗ್ತಾ ಇದ್ದದ್ದು, ಬರ್ತ್ ಡೇ, ನ್ಯೂ ಇಯರ್ ಇಬ್ಬರು ಒಟ್ಟಾಗಿ ಟ್ರಿಪ್ ಹೋಗ್ತಾ ಇದ್ದದ್ದು.
ಅದನ್ನ ಹೈಡ್ ಮಾಡಿ ಸಿಕ್ಕಿ ಬೀಳ್ತಾ ಇದ್ದದ್ದು, ಎಲ್ಲವೂ ಎಲ್ಲರಿಗೂ ಗೊತ್ತಿರುವ ವಿಚಾರವೇ. ಇದೀಗ ಫೈನಲ್ ಒಂದು ಸ್ಪೆಷಲ್ ನ್ಯೂಸ್ ಸಿಕ್ಕಿದೆ. ಟಾಲಿವುಡ್ ಅಂಗಳದಲ್ಲೆಲ್ಲಾ ಅದು ಹರಿದಾಡುತ್ತಿದೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಿಶ್ಚಿತಾರ್ಥವಾಗಿದೆಯಂತೆ. ಶೀಘ್ರದಲ್ಲಿಯೇ ಹಸೆಮಣೆ ಏರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ನಿನ್ನೆ, ಶುಕ್ರವಾರ ಹೈದರಾಬಾದ್ನಲ್ಲಿ ಎರಡೂ ಕುಟುಂಬಗಳು ಮತ್ತ ಆತ್ಮೀಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಡೆದಿದೆ. 2026ರ ಫೆಬ್ರವರಿಯಲ್ಲಿ ವಿವಾಹವಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
2017ರಲ್ಲಿ ನಟ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ನಿಶ್ಚಿತಾರ್ಥವಾಗಿತ್ತು, ಆದ್ರೆ ಕಾರಣಾಂತರಗಳಿಂದ ಇಬ್ಬರ ಮದುವೆ ಮುರಿದುಬಿದ್ದಿತ್ತು.. ರಶ್ಮಿಕಾ ಮಂದಣ್ಣ ಟಾಲಿವುಡ್ಗೆ ಕಾಲಿಟ್ಟ ದಿನದಿಂದ ವಿಜಯ್ ದೇವರಕೊಂಡ ಜೊತೆ ಅವರ ಹೆಸರು ತಳುಕು ಹಾಕಿಕೊಳ್ಳುತ್ತಲೇ ಇತ್ತು. ‘ಗೀತಾ ಗೋವಿಂದಂ’ ಸಿನಿಮಾ ಇಬ್ಬರ ವೃತ್ತಿ ಬದುಕಿಗೆ ಏಳಿಗೆ ಕೊಟ್ಟಿದ್ದಷ್ಟೇ ಅಲ್ಲದೇ.
ವೈಯಕ್ತಿಕ ಬದುಕಲ್ಲೂ ಬೆಳಕು ಮೂಡಿಸಿತ್ತು. ಇದೀಗ ಸದ್ದಿಲ್ಲದೇ ನಿಶ್ಚತಾರ್ಥ ಮಾಡಿಕೊಂಡು ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಈ ಸುದ್ದಿಯನ್ನು ರಶ್ಮಿಕಾ ಮಂದಣ್ಣ ಅವರಾಗಲೀ, ವಿಜಯ್ ದೇವರಕೊಂಡರಾಗಲಿ ಅಧಿಕೃತವಾಗಿ ಅನೌನ್ಸ್ ಮಾಡಿಲ್ಲ.