Sunday, October 5, 2025
Homeರಾಜಕೀಯ | Politicsಸಚಿವ ಜಮೀರ್‌ ಹೇಳಿಕೆಗೆ ಸಂಸದ ಇ.ತುಕಾರಾಂ ತಿರುಗೇಟು

ಸಚಿವ ಜಮೀರ್‌ ಹೇಳಿಕೆಗೆ ಸಂಸದ ಇ.ತುಕಾರಾಂ ತಿರುಗೇಟು

MP E. Tukaram hits back at Minister Zameer's statement

ಬೆಂಗಳೂರು, ಅ.5– ಸಂಪುಟದಲ್ಲಿ ಸಚಿವರಾಗಲು ಶುದ್ಧ ಚಾರಿತ್ರ್ಯದ ಅಗತ್ಯ ಇದೆ ಎಂದು ಹೇಳುವ ಮೂಲಕ ಸಂಸದ ಇ.ತುಕಾರಾಂ, ಸಚಿವ ಜಮೀರ್‌ ಅಹಮದ್‌ಖಾನ್‌ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಇಂದು ಬೆಂಗಳೂರಿನಲ್ಲಿ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಲ್ಲಿ ಜವಾಹರ್‌ಲಾಲ್‌ ನೆಹರು ಅವರ ಕಾಲದಿಂದಲೂ ಹೈಕಮಾಂಡ್‌ ಸಂಸ್ಕೃತಿಯಿದೆ. ಮನಮೋಹನ್‌ಸಿಂಗ್‌ ಪ್ರಧಾನಿಯಾಗಿದ್ದಾಗಲೂ ಇದು ಜಾರಿಯಲ್ಲಿತ್ತು. ಸಂಪುಟ ಸೇರ್ಪಡೆಯ ಬಗ್ಗೆ ಹಿರಿಯ ವರಿಷ್ಠ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ. ನಮ್ಮ ಹಂತದಲ್ಲಿ ಈ ವಿಚಾರಗಳು ನಿರ್ಧಾರವಾಗುವುದಿಲ್ಲ ಎಂದರು.

ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವಾಗ ಸರ್ಕಾರಕ್ಕೆ ಯಾರಿಂದ ಒಳ್ಳೆಯದಾಗಲಿದೆ. ಯಾರಿಗೆ ಕ್ಲೀನ್‌ ಇಮೇಜಿದೆ, ಪಕ್ಷಕ್ಕೆ ಯಾರು ನಿಷ್ಠರಾಗಿದ್ದಾರೆ ಎಂಬ ವಿಷಯಗಳನ್ನು ಪರಾಮರ್ಶಿಸಲಾಗುತ್ತದೆ ಎಂದರು.

ಪಕ್ಷ ಮತ್ತು ಆಡಳಿತಕ್ಕೆ ಒಳ್ಳೆಯ ಹೆಸರು ಬರಬೇಕು ಎಂದರೆ ತಿರುಪತಿಯ ವೆಂಕಟೇಶ್ವರ ಸ್ವಾಮಿಯ ಕಿರೀಟದಲ್ಲಿರುವ ವಜ್ರದಂತೆ ಶುದ್ಧವಾಗಿರಬೇಕು. ಸಚಿವ ಜಮೀರ್‌ ಅಹಮದ್‌ಖಾನ್‌ ಹೇಳಿಕೆ ನೀಡಿ, ಬಿ.ನಾಗೇಂದ್ರ ಮತ್ತೆ ಸಚಿವರಾಗುತ್ತಾರೆ ಎಂದಿರುವುದು ಸಂಪೂರ್ಣ ವೈಯಕ್ತಿಕ ಹೇಳಿಕೆ. ಅಂತಿಮ ತೀರ್ಮಾನವನ್ನು ಕಾಂಗ್ರೆಸ್‌‍ ಹೈಕಮಾಂಡ್‌ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.
ಬಿ. ನಾಗೇಂದ್ರ ಮಹರ್ಷಿ ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಗಳ ಹಗರಣದ ಆರೋಪಕ್ಕೆ ಗುರಿಯಾಗಿ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರನ್ನು ಮರಳಿ ಸಂಪುಟಕ್ಕೆ ಸೇರಿಸಿಕೊಳ್ಳುವಪ್ರಯತ್ನಗಳು ನಡೆಯುತ್ತಿವೆ.

ಈ ಹಂತದಲ್ಲಿ ಅದೇ ಜಿಲ್ಲೆಯ ಸಂಸದರು ಆಗಿರುವ ತುಕಾರಾಂ, ಸಂಪುಟಕ್ಕೆ ಸೇರಲು ಶುದ್ಧ ಚಾರಿತ್ರ್ಯ ಅಗತ್ಯವಿದೆ ಎಂದು ಹೇಳುವ ಮೂಲಕ ಬಿ. ನಾಗೇಂದ್ರ ಅವರ ಸೇರ್ಪಡೆಗೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.ಸಿದ್ದರಾಮಯ್ಯ ಅವರ ಸರ್ಕಾರ 5 ವರ್ಷಗಳ ಕಾಲ ಹೆಚ್ಚು ಸಕ್ರಿಯವಾಗಿ, ಚುರುಕಾಗಿ ಜನಪರ ಕೆಲಸಗಳನ್ನು ಮುಂದುವರೆಸಲಿ ಎಂದು ಅವರು ಹೇಳಿದರು.

RELATED ARTICLES

Latest News