ಮುಂಬೈ, ಅ.5- ಅಮೃತಸರದಿಂದ ಬ್ರಿಟನ್ನ ಬರ್ಮಿಂಗ್ಹ್ಯಾಮ್ಗೆ ಹೋಗುತ್ತಿದ್ದ ಬೋಯಿಂಗ್ 787 ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್ ಸಮಯದಲ್ಲಿ ಇಂಜಿನ್ ಕೈಕೊಟ್ಟು ಸಂದರ್ಭದಲ್ಲಿ ಪೈಲಟ್ಗಳು ಸಯಂಚಾಲಿತ ವ್ಯವಸ್ಥೆ ಮಾಡಿ ಸುರಕ್ಷಿತವಾಗಿ ವಿಮಾನ ನಿಲ್ದಾಣದಲ್ಲಿ ಇಳಿಸಿದ್ದಾರೆ.
ಎರಡು ಎಂಜಿನ್ ವೈಫಲ್ಯ ಅಥವಾ ಸಂಪೂರ್ಣ ಎಲೆಕ್ಟ್ರಾನಿಕ್ಸ್ ಅಥವಾ ಹೈಡ್ರಾಲಿಕ್ ವೈಫಲ್ಯದ ಸಂದರ್ಭದಲ್ಲಿ ವಿಮಾನವನ್ನು ಸ್ವಯಂಚಾಲಿತಕ್ಕೆ ನಿಯೋಜಿಸಲ್ಪಡುತ್ತದೆ. ಇದು ತುರ್ತು ವಿದ್ಯುತ್ ಉತ್ಪಾದಿಸಲು ಗಾಳಿಯ ವೇಗವನ್ನು ಬಳಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಸಂಜೆ ಅಮೃತಸರದಿಂದ ಬರ್ಮಿಂಗ್ಹ್ಯಾಮ್ಗೆ ತೆರಳಿದ್ದ ವಿಮಾನದ ಅಂತಿಮ ಹಂತದ ಸಮೀಪಿಸುತ್ತಿದಂತೆ ಏರ್ ಟರ್ಬೈನ್ ಚಾಲನೆಗೊಳಿಸಿದಾಗ ವಿದ್ಯುತ್ ಮತ್ತು ಹೈಡ್ರಾಲಿಕ್ ಸಾಮಾನ್ಯವಾಗಿದ್ದವು ಮತ್ತು ವಿಮಾನವು ಬರ್ಮಿಂಗ್ಹ್ಯಾಮ್ನಲ್ಲಿ ಸುರಕ್ಷಿತ ಇಳಿಯಿತು ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.
ಆದಾಗ್ಯೂ, ವಿಮಾನದಲ್ಲಿದ್ದ ಜನರ ಸಂಖ್ಯೆ ಸೇರಿದಂತೆ ನಿರ್ದಿಷ್ಟ ವಿವರಗಳನ್ನು ವಿಮಾನಯಾನ ಸಂಸ್ಥೆ ಹಂಚಿಕೊಂಡಿಲ್ಲ.ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗದಂತೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.ವಿಮಾನವನ್ನು ಸಂಪೂರ್ಣ ತಪಾಸಣೆಗಾಗಿ ಬರ್ಮಿಂಗ್ಹ್ಯಾಮ್ನಿಂದ ನವದೆಹಲಿ ಹಾರಾಟವನ್ನು ರದ್ದುಗೊಳಿಸಲಾಗಿದೆ ಎಂದು ಏರ್ ಇಂಡಿಯಾ ಹೇಳಿದೆ.