ಪೋರ್ಟ್ ಬ್ಲೇರ್,ಅ.6- ಅಂಡಮಾನ್ನ ಪೋರ್ಟ್ ಬ್ಲೇರ್ ಮೂಲದ ಹೋಟೆಲ್ ಉದ್ಯಮಿಯ ಹತ್ಯೆಗೆ ಸಂಬಂಧಿಸಿದಂತೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮೂವರು ಆರೋಪಿಗಳನ್ನು ತಮಿಳುನಾಡಿನಲ್ಲಿ ಪೊಲೀಸರು ಬಂಧಿಸಿದ್ದಾರೆ.ಪೋರ್ಟ್ ಬ್ಲೇರ್ನ ಶಾದಿಪುರ ಪ್ರದೇಶದ ಹೋಟೆಲ್ನ ಸಹ-ಮಾಲೀಕ ನಿಯಾಮತ್ ಅಲಿ (49) ಅವರನ್ನು ಕಳೆದ ಜುಲೈನಲ್ಲಿ ಚೆನ್ನೈನಲ್ಲಿ ಕೊಲೆ ಮಾಡಲಾಗಿತ್ತು.
ಕಳೆದ ಅ.3 ರಂದು ತಮಿಳುನಾಡಿನ ತಾಂಬರಂ ಜಿಲ್ಲೆಯ ಖಿಲಂಬಥಮ್ ಪೊಲೀಸ್ ಠಾಣೆಯ ಅಧಿಕಾರಿಗಳು ಅಂಡಮಾನ್ ಮತ್ತು ನಿಕೋಬಾರ್ ಪೊಲೀಸರ ಸಹಾಯದಿಂದ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪೊಲೀಸ್ ತನಿಖೆಯ ಪ್ರಕಾರ, ಅಲಿ ಅವರು ಜುಲೈ 27 ರಂದು ವ್ಯವಹಾರ ಪ್ರವಾಸದ ನಿಮಿತ್ತ ಚೆನ್ನೈಗೆ ಪ್ರಯಾಣ ಬೆಳೆಸಿದರು ಮತ್ತು ಅದೇ ದಿನ ನಾಪತ್ತೆಯಾಗಿದ್ದರು.
ಅವರ ಕುಟುಂಬ ಸದಸ್ಯರು ಪೋರ್ಟ್ ಬ್ಲೇರ್ನ ಅಬರ್ಡೀನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು ಇದರ ಬಗ್ಗೆ ತನಿಖೆಗಾಗಿ ವಿಶೇಷ ಪೊಲೀಸ್ ತಂಡ ಚೆನ್ನೈಗೆ
ಆಗಮಿಸಿತ್ತು.ಚೆನ್ನೈನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳ ವಿಶ್ಲೇಷಣೆಯಲ್ಲಿ ಅಲಿ ಚೆನ್ನೈ ವಿಮಾನ ನಿಲ್ದಾಣದಿಂದ ವಂಡಲೂರು ಪ್ರದೇಶಕ್ಕೆ ಪ್ರಯಾಣಿಸಿದ್ದು, ಅಲ್ಲಿ ಅವರು ಕೊನೆಯ ಬಾರಿಗೆ ವಿದ್ಯಾರ್ಥಿಯೊಂದಿಗೆ ಕಾಣಿಸಿಕೊಂಡಿದ್ದರು ಎಂದು ದೃಢಪಡಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಂತರ ಆತನನ್ನು ಪತ್ತೆ ಮಾಡಿ ವಿಚಾರಿಸಿದಾಗ ಪ್ರಮುಖ ಸುಳಿವು ಸಿಕ್ಕಿದೆ.್ತ ತಾಂತ್ರಿಕ ಮತ್ತು ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಅಲಿ ಅವರನ್ನು ಆರೋಪಿಗಳು ಕಾರಿನಲ್ಲಿ ಕೊಂದು, ಮೃತದೇಹವನ್ನು ಆಂಧ್ರಪ್ರದೇಶ-ಒಡಿಶಾ ಗಡಿಯಲ್ಲಿ ಶವ ಎಸೆದಿದ್ದರು.ಕೊಲೆಯ ಹಿಂದೆ ವ್ಯಾಪಾರ ವೈಷಮ್ಯವಿದೆ ಎಂದು ಪೊಲೀಸರು ಶಂಕಿಸಿದ್ದಾರೆ.