ಬೆಂಗಳೂರು,ಅ.7– ಪ್ರತ್ಯೇಕ ಧರ್ಮ ಕುರಿತು ವೀರಶೈವ ಲಿಂಗಾಯಿತರಿಗೆ ಇಲ್ಲದ ಉಸಾಬರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಏಕೆ ಬೇಕು ಎಂದು ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾ ಯಣಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಶೈವ ಲಿಂಗಾಯಿತ ಸಮುದಾಯದಲ್ಲಿ ಪ್ರತ್ಯೇಕ ಧರ್ಮ ಸ್ಥಾಪನೆ ಮಾಡುವ ಕುರಿತು ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಆ ಸಮುದಾಯಕ್ಕೆ ಇಲ್ಲದ ಉಸಾಬರಿ ಸಿದ್ದರಾಮಯ್ಯನವರಿಗೆ ಏಕೆ ಬೇಕು ಎಂದು ಪ್ರಶ್ನೆ ಮಾಡಿದರು.
ಸಿದ್ದರಾಮಯ್ಯ ಜಾತಿಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಲಿಂಗಾಯತರಿಗೆ ಇಲ್ಲದ ಉಸಾಬರಿ ಯಾಕೆ? ಅವರೇನು ಧರ್ಮಗುರುಗಳಾ? ಎಂದು ಕಿಡಿಕಾರಿದರು. ಬೌದ್ಧ ಧರ್ಮಕ್ಕೆ ಮತಾಂತರಗೊಂಡವರಿಗೆ ಮೀಸಲಾತಿ ನೀಡುವುದಾಗಿ ಸಿಎಂ ಹೇಳಿದ್ದಾರೆ. ಈಗಾಗಲೇ ಕೇಂದ್ರದ ಪ್ರಧಾನಿ ಮೋದಿ ಸರ್ಕಾರವೇ ಮೀಸಲಾತಿ ಕೊಟ್ಟಿದೆ. ಈಗ ನಾವು ಕೊಟ್ಟಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದರಲ್ಲಿ ಹೊಸದೇನಿದೆ ಎಂದು ಪ್ರಶ್ನೆ ಮಾಡಿದರು.
ಕೇಂದ್ರ ಸರ್ಕಾರದಡಿ ಯಾರು ಪರಿಶಿಷ್ಟರಿದ್ದಾರೆ ಅವರು ಬೌದ್ಧ ಧರ್ಮದಲ್ಲಿದ್ದರೆ ಅವರಿಗೆ ಮೀಸಲಾತಿ ಸಿಗಲಿದೆ ಎಂದು ಹೇಳಿದೆ. ಮೊದಲಿಂದಲೂ ಕೇಂದ್ರ ಕೊಡುತ್ತಿದೆ, ರಾಜ್ಯ ಸರ್ಕಾರ ಹೊಸದಾಗಿ ಏನೂ ಮಾಡಿಲ್ಲ ಎಂದು ಆಕ್ಷೇಪಿಸಿದರು.
ಹಿಂದಿನ ಬಿಜೆಪಿ ಸರ್ಕಾರ ಎಸ್ಟಿಗಳಿಗೆ 3%-7%ಗೆ ಮೀಸಲಾತಿ ಹೆಚ್ಚಳ ಮಾಡಿತ್ತು. ಸಿದ್ದರಾಮಯ್ಯ ಇದನ್ನು ನಂಬಬೇಡಿ ಎಂದು ಹೇಳಿದ್ದರು. ಈಗ 7% ಮೀಸಲಾತಿ ನಡೆಯುತ್ತಿದೆ. ಈಗ ಸಿದ್ದರಾಮಯ್ಯ ಸುಳ್ಳು ಹೇಳ್ತಿಲ್ಲವಾ.? ಎಂದು ಪ್ರಶ್ನಿಸಿದರು. ಈಗ ಎಸ್ಟಿಗಳಿಗೆ 7% ಕೊಟ್ಟು, ಬೇರೆ ಜಾತಿಗಳನ್ನು ಸೇರಿಸಲು ಹೊರಟಿದ್ದಾರೆ. ಅವರಿಗೆ ಅನ್ಯಾಯ ಮಾಡಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು ಜನಗಣತಿ ಗೊಂದಲದ ಗೂಡಾಗಿದೆ. ಕೊಟ್ಟಿರುವ ಸಾಫ್್ಟವೇರ್ ಕೈ ಕೊಟ್ಟಿದೆ. 60 ಪ್ರಶ್ನೆ ತುಂಬಲು ಒಂದು ಗಂಟೆ ಬೇಕಿದೆ. ಬೆಂಗಳೂರಿನಲ್ಲಿ ಯಾರ ಮನೆಲ್ಲೂ ಆರಂಭವಾಗಿಲ್ಲ. ಅಪಾರ್ಟೆಂಟ್ನಲ್ಲಿ ಈಗ ಶುರು ಮಾಡುತ್ತಾರಂತೆ.
ಇಂದು ವಾಲೀಕಿ ಜಯಂತಿ ನಡೆಯುತ್ತಿದೆ. ಪ್ರಸನ್ನಾನಂದ ಗುರೂಜಿ ಬಂದಿಲ್ಲ. ಯಾಕಂದರೆ ಪ್ರಕರಣದಲ್ಲಿ ಸಿದ್ದರಾಮಯ್ಯ ಕೈವಾಡವಿದೆ ಎಂದು. ಮೂನ್ನೂರಕ್ಕೂ ಹೆಚ್ಚು ಕೋಟಿ ಎಸ್ಸಿ-ಎಸ್ಪಿ-ಎಸ್ಪಿಪಿ ಹಣ ವ್ಯಯ ಮಾಡಿರುವುದದಾಗಿ ಹೇಳಿದ್ದಾರೆ. ಚುನಾವಣೆ ಸಂಧರ್ಭದಲ್ಲಿ 7% ರಿಸರ್ವೇಷನ್ ಇಲ್ಲ ಎಂದೇಳಿ ಮೋಸ ಮಾಡಿದ್ದಾರೆ. ಆ ಸಮುದಾಯಗಳ ನಾಯಕ ರಾಜಣ್ಣ ಅವರನ್ನ ಉಚ್ಚಾಟನೆ ಮಾಡಿದ್ದಾರೆ. ಈಗ ಇಡೀ ಸಮುದಾಯ ನಿಮ ವಿರುದ್ಧ ತಿರುಗಿಬಿದ್ದಿದೆ. ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಪ್ರಮಾಣವನ್ನು ಶೇ.7ಕ್ಕೆ ಹೆಚ್ಚಿಸಿದ್ದು, ಬಿಜೆಪಿಯೇ ಹೊರತು ಕಾಂಗ್ರೆಸ್ ಅಲ್ಲ ಎಂದು ತಿರುಗೇಟು ನೀಡಿದರು.
ಖಂಡನೆ: ಈ ರಾಷ್ಟ್ರದ ಸಿಜೆ ಬಿ.ಆರ್ ಗವಾಯಿ ಅವರ ಮೇಲೆ ಕೋರ್ಟ್ ಆವರಣದಲ್ಲಿ ಶೂ ಎಸೆಯುವ ಕೃತ್ಯ ಖಂಡನೀಯ. ಇದು ಬಾಬಾ ಸಾಹೇಬ್ ಅಂಬೇಡ್ಕರ್ ಬರೆದಿರುವ ಸಂವಿಧಾನಕ್ಕೆ ಅಪಚಾರ.ಪ್ರಜಾಪ್ರಭುತ್ವ, ನ್ಯಾಯಾಂಗ ವ್ಯವಸ್ಥೆಗೆ ಆದ ಅಪಚಾರ. ಈ ರೀತಿಯ ಯಾವುಕೇ ಕೆಲಸ ಬುದ್ದಿವಂತರು ಯಾರೂ ಮಾಡುವುದಿಲ್ಲ. ಆದರೆ ವಕೀಲರೊಬ್ಬರು ಮಾಡಿದ್ದಾರೆ. ನಾನೂ ಈ ಘಟನೆ ಖಂಡಿಸುತ್ತೇನೆ. ಮುಖ್ಯ ನ್ಯಾಯಾಧೀಶರು ಯಾರೇ ಇದ್ದರೂ ಆ ಸ್ಥಾನಕ್ಕೆ ಗೌರವ ಕೊಡಬೇಕು. ಶೂ ಎಸೆದ ವ್ಯಕ್ತಿಗೆ ಕಾನೂನು ಕ್ರಮ ಆಗಬೇಕು ಎಂದು ಒತ್ತಾಯಿಸಿದರು.