ಕುಣಿಗಲ್, ಅ.8- ಬೈಕ್ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಸುಗ್ಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಅಮೃತ್ತೂರು ಹೋಬಳಿ ಉಂಗ್ರ ಗ್ರಾಮದ ಹುಚ್ಚೇಗೌಡ (55), ಮೊಮಗ ಪ್ರೀತಮ್ ಗೌಡ (10) ವೃದ್ಧೆ ಲಿಂಗಮ ಸ್ಥಳದಲ್ಲೇ ಮೃತಪಟ್ಟ ದುರ್ದೈವಿಗಳು.
ಹುಚ್ಚೇಗೌಡ ಹಾಗೂ ಆತನ ಮಗಳ ಮಗ ಪ್ರೀತಮ್ ಗೌಡ, ಇದೇ ಗ್ರಾಮದ ಲಿಂಗಮ ಬೈಕ್ನಲ್ಲಿ ಉಂಗ್ರ ಗ್ರಾಮದಿಂದ ಹುಲಿಯೂರುದುರ್ಗಕ್ಕೆ ಹೋಗುತ್ತಿದ್ದ ವೇಳೆ ಹುಲಿಯೂರುದುರ್ಗ ಕಡೆಯಿಂದ ಯಡವಾಣಿ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಲಾರಿ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ. ಹುಲಿಯೂರುದುರ್ಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.