ಬೆಂಗಳೂರು,ಅ.8– ನಗರ ಪೊಲೀಸರು ಹಾಗೂ ಎಸ್ಒಸಿಒ ತಂಡಗಳು ಕಾರ್ಯಾಚರಣೆ ನಡೆಸಿ ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ ಆರು ಮಂದಿಯನ್ನು ಬಂಧಿಸಿ 23.84 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಸಿಸಿಬಿ ಮಾದಕ ದ್ರವ್ಯ ನಿಗ್ರಹ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ 11.81 ಕೋಟಿ ರೂ. ಮೌಲ್ಯದ 7.176 ಕೆಜಿ ಹೈಡ್ರೋ ಗಾಂಜಾ, 1.399 ಕೆಜಿ ಎಂಡಿಎಂಎ ಕ್ರಿಸ್ಟಲ್, 2.30 ಕೆಜಿ ಅಫೀಮ್ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಉತ್ತರ ಹಾಗೂ ಪೂರ್ವವಿಭಾಗ ಮತ್ತು ಕೊತ್ತನೂರು ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ 12.03 ಕೋಟಿ ಮೌಲ್ಯದ 4.815 ಕೆಜಿ ಎಂಡಿಎಂಎ ಕ್ರಿಸ್ಟಲ್ ವಶಪಡಿಸಿಕೊಂಡಿದ್ದಾರೆ.
ರಾಜಸ್ಥಾನದ ಡ್ರಗ್ ಪೆಡ್ಲರ್ ಬಂಧನ:
ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇದಿತ ಮಾದಕ ವಸ್ತು ಡ್ರಗ್ ಪೆಡ್ಲಿಂಗ್ ಕುರಿತು ಖಚಿತ ಮಾಹಿತಿ ಮೇರೆಗೆ, ಸಿಸಿಬಿ ಯ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸ್ ಇನ್್ಸಪೆಕ್ಟರ್ ಮಂಜಪ್ಪ ರವರು ಪ್ರಕರಣ ದಾಖಲಿಸಿ, ಸಿಬ್ಬಂದಿಯೊಂದಿಗೆ ದಾಳಿ ನಡೆಸಿ, ರಾಜಸ್ಥಾನ ಮೂಲದ ಡ್ರಗ್ ಪೆಡ್ಲರ್ನನ್ನು ಬಂಧಿಸಿದ್ದಾರೆ.
ಕಳೆದ ವರ್ಷ ಬೆಂಗಳೂರಿಗೆ ಬಂದು ಚಾಲಕರಾಗಿ ಕೆಲಸ ಮಾಡುತ್ತಿದ್ದು, ಈ ಆದಾಯದಿಂದ ಖರ್ಚು ನಿರ್ವಹಿಸಲು ಸಾಧ್ಯವಾಗದೇ, ತನ್ನ ಸಂಬಂಧಿಯ ಸಹಾಯದೊಂದಿಗೆ ಕಳೆದ 3 ತಿಂಗಳಿಂದ ನಿಷೇದಿತ ಮಾದಕ ವಸ್ತು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ.
ಆರೋಪಿಯಿಂದ 1 ಕೆ.ಜಿ 399 ಗ್ರಾಂ ಎಂಡಿಎಎಂಎ ಕ್ರಿಸ್ಟಲ್ ಮತ್ತು 2 ಕೆ.ಜಿ 30 ಗ್ರಾಂ ಅಫೀಮ್, ಒಟ್ಟು ಅಂದಾಜು 4 ಕೋಟಿ ಮೌಲ್ಯದ ಮಾದಕ ವಸ್ತುಗಳು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಅಂಚೆ ಕಚೇರಿಗೆ ಬರುತ್ತಿದ್ದ ಪಾರ್ಸೆಲ್:
ಕೆ.ಜಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಿದೇಶಿ ಅಂಚೆ ಕಚೇರಿಗೆ ಶಂಕಾಸ್ಪದ ಪಾರ್ಸೆಲ್ ಬಂದಿರುವ ಬಗ್ಗೆ ಖಚಿತ ಮಾಹಿತಿಯನ್ನು ಸಂಗ್ರಹಿಸಿ ಸ್ನಿಫರ್ ಶ್ವಾನಗಳ ಸಹಾಯದಿಂದ ಕಚೇರಿಗೆ ತೆರಳಿ ಪರಿಶೀಲಿಸಿ 3 ಕೆ.ಜಿ ಹೈಡ್ರೋ ಗಾಂಜಾ ಹಾಗೂ ಇತರೆ ವಸ್ತುಗಳು ವಶಪಡಿಸಿಕೊಳ್ಳಲಾಗಿದ್ದು, ಒಟ್ಟು 3.81 ಕೋಟಿ ರೂ. ಗಳೆಂದು ಅಂದಾಜಿಸಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ, ಕೆಲವು ಅಪರಿಚಿತ ಆರೋಪಿಗಳು ಥೈಲ್ಯಾಂಡ್ ಮತ್ತು ಜರ್ಮನಿ ದೇಶಗಳಿಂದ ನಕಲಿ ಹೆಸರಿನಲ್ಲಿ ಕ್ರಿಪ್ಟೋ ಕರೆನ್ಸಿ ಮೂಲಕ ಹೈಡ್ರೋ ಗಾಂಜಾವನ್ನು ಖರೀದಿಸಿ, ಬೆಂಗಳೂರಿನಲ್ಲಿ ಮಾದಕ ವಸ್ತು ಪೆಡ್ಲಿಂಗ್ ಮಾಡುತ್ತಿದ್ದರೆಂಬುದು ಬೆಳಕಿಗೆ ಬಂದಿದೆ.
ಮಾದಕ ವಸ್ತುಗಳನ್ನು ಆರ್ಡರ್ ಮಾಡಿದ ಇಬ್ಬರು ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ಇದೇ ವ್ಯಾಪ್ತಿಯ ಮತ್ತೊಂದು ಪ್ರಕರಣದಲ್ಲಿ ವಿದೇಶಿ ಅಂಚೆ ಕಚೇರಿಯಲ್ಲಿ ನಿಷೇಧಿತ ಮಾದಕ ವಸ್ತುಗಳು ಇರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಆಧಾರದ ಮೇರೆಗೆ, ಸ್ನಿರ್ ಶ್ವಾನಗಳ ಸಹಾಯದಿಂದ ಸಾಗಾಟು ಸರಕುಗಳಿಂದ ಬಂದ ಶಂಕಾಸ್ಪದ ಪಾರ್ಸೆಲ್ಗಳನ್ನು ಗುರುತಿಸಿ, 4 ಕೆ.ಜಿ. ಹೈಡ್ರೋ ಗಾಂಜಾ ಹಾಗೂ ಪಾರ್ಸೆಲ್ ಪ್ಯಾಕಿಂಗ್ಗೆ ಬಳಸಿದ ವಸ್ತುಗಳು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ಅಂದಾಜು ಮೌಲ್ಯ ಸುಮಾರು 4 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ.
ಇಬ್ಬರು ವಿದೇಶಿ ಮಹಿಳೆ ಸೆರೆ:
ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯ ಎನ್.ಜಿ.ಗೊಲ್ಲಹಳ್ಳಿ ಗ್ರಾಮದ ಬಳಿ ಇರುವ ಅಪಾರ್ಟ್ಮೆಂಟ್ನಲ್ಲಿ, ವಿದೇಶಿ ಮೂಲದ ಮಹಿಳೆಯರಿಬ್ಬರು ಡ್ರಗ್ ಪೆಂಡ್ಲಿಂಗ್ನಲ್ಲಿ ತೊಡಗಿರುತ್ತಾರೆಂಬ ಮಾಹಿತಿ ಮೇರೆಗೆ ಸ್ಥಳದ ಮೇಲೆ ದಾಳಿ ಮಾಡಿ ಮಹಿಳೆಯರಿಬ್ಬರನ್ನು ವಶಕ್ಕೆ ಪಡೆದು 12.03 ಕೋಟಿ ರೂ. ಮೌಲ್ಯದ 4 ಕೆ.ಜಿ 815 ಗ್ರಾಂ ಎಂಡಿಎಎಂಎ ಕ್ರಿಸ್ಟಲ್ನ್ನು ವಶಪಡಿಸಿಕೊಳ್ಳಲಾಗಿದೆ.
ನಗರ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ದಕ್ಷಿಣ, ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿ ಮತ್ತು ಸಿಸಿಬಿ ತಂಡಗಳು ಕಾರ್ಯನಿರ್ವಹಿಸಿರುತ್ತಾರೆ.
35 ವಿದೇಶಿ ಪ್ರಜೆಗಳು ಸೇರಿ 1048 ಡ್ರಗ್ ಪೆಡ್ಲರ್ಗಳ ಬಂಧನ :
ಬೆಂಗಳೂರು,ಅ.8- ಪ್ರಸಕ್ತ ವರ್ಷದ ಜನವರಿ 1 ರಿಂದ ಈ ದಿನದ ವರೆಗೆ ಬೆಂಗಳೂರು ನಗರ ಪೊಲೀಸರು 35 ವಿದೇಶಿ ಪ್ರಜೆಗಳು ಸೇರಿದಂತೆ 1048 ಆರೋಪಿಗಳನ್ನು ಬಂಧಿಸಿ 81.21 ಕೋಟಿರೂ. ಮೌಲ್ಯದ ನಿಷೇದಿತ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಒಟ್ಟು 771 ಪ್ರಕರಣಗಳಲ್ಲಿ 1486.55 ಕೆಜಿ ವಿವಿಧ ಮಾದಕ ವಸ್ತು ಗಳನ್ನು ವಶಪಡಿಸಿಕೊಳ್ಳಲಾಗಿದೆ.ಡ್ರಗ್ ಪೆಡ್ಲರ್ಗಳು, ವಿತರಕರು ಮತ್ತು ಅಂತರರಾಜ್ಯ ಜಾಲಗಳ ವಿರುದ್ಧ ಗುರುತರವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ.
ವಿಭಾಗವಾರು ಪೊಲೀಸ್ ತಂಡಗಳು:
ಎಲ್ಲಾ ವಿಭಾಗಗಳು, ಶಾಖೆಗಳು (ಸಿಸಿಬಿ, ನಾಗರಿಕ ಪೊಲೀಸ್, ಸಿಇಆರ್, ಪೊಲೀಸ್ ಶ್ವಾನದಳ, (ಸೋಕೋ) ಎಸ್.ಒ.ಸಿ.ಒ) ಒಕ್ಕೂಟವಾಗಿ ಡ್ರಗ್ ಪೆಡ್ಲರ್ಗಳನ್ನು ಬಂಧಿಸಲು ಕೇಂದ್ರೀಕೃತ ಮತ್ತು ವಿತರಿತ ಪ್ರಯತ್ನಗಳನ್ನು ಕೈಗೊಂಡಿವೆ.
ನಕಾಬಂದಿ ಮತ್ತು ಪ್ರದೇಶ ಆಧಿಪತ್ಯ:
ಅನಿಯಮಿತವಾಗಿ ಸ್ಥಾಪಿಸಲಾದ ನಕಾಬಂದಿ ತಪಾಸಣೆ ಕೇಂದ್ರಗಳು ಮತ್ತು ಪ್ರದೇಶ ಆಧಿಪತ್ಯ ಅಭ್ಯಾಸಗಳಿಂದ ಪೆಡ್ಲರ್ಗಳ ವಿರುದ್ಧ ಕ್ರಮಕ್ಕೆ ಅಮೂಲ್ಯವಾದ ಮಾಹಿತಿ ದೊರೆತಿರುತ್ತದೆ.
ಗುಪ್ತಚರ ಸಂಗ್ರಹಣೆ:
ಮಾನವ ಗುಪ್ತಚರ ಮತ್ತು ತಾಂತ್ರಿಕ ಮೂಲಗಳನ್ನು ಬಳಸಿಕೊಂಡು, ಅಕ್ರಮ ಚಟುವಟಿಕೆಗಳನ್ನು ಪತ್ತೆಹಚ್ಚುವುದು ಮತ್ತು ತಡೆಗಟ್ಟುವುದು.
ಸೋಶಿಯಲ್ ಮೀಡಿಯಾ ನಿಗಾ:
ನಿಷೇದಿತ ಮಾದಕ ವಸ್ತು ಮಾರಾಟ ಅಥವಾ ಪ್ರಚಾರಕ್ಕಾಗಿ ಬಳಸಲಾಗುವ ರ್ಸೇಸ್ ವೆಬ್ ಮತ್ತು ಡಾರ್ಕ್ನೆಟ್ ವೇದಿಕೆಗಳ ಕುರಿತು ನಿರಂತರ ಮೇಲ್ವಿಚಾರಣೆ ಮಾಡಲಾಗುತ್ತವೆ.
ಸಂಸ್ಥಾಂತರ ಸಂಯೋಜನೆ:
ಎ್ಆರ್ಆರ್ಒ, ಡಿಆರ್ಐ, ಎನ್ಸಿಬಿ ಮತ್ತು ಇತರ ಸಂಸ್ಥೆಗಳೊಂದಿಗೆ ನೇರ ಮಾಹಿತಿಯ ವಿನಿಮಯ ಮತ್ತು ಸಂಯುಕ್ತ ಕಾರ್ಯಾಚರಣೆ. ವಿದೇಶಿ ಪ್ರಜೆಗಳು ತಮ ನಿವಾಸಗಳಲ್ಲಿ ವಾಸಿಸುತ್ತಿರುವ ಬಗ್ಗೆ ಕಡ್ಡಾಯವಾಗಿ ಮಾಹಿತಿ ನೀಡದ ಮನೆ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಮತ್ತು ಇದರಿಂದ ತಮ ತಮ ಆವರಣ,ಸ್ಥಳಗಳಲ್ಲಿ ಮಾದಕ ವಸ್ತು ಹರಡುವುದಕ್ಕೆ ಬಳಸುವುದನ್ನು ತಡೆಗಟ್ಟಲಾಗುತ್ತದೆ.
ಸಮುದಾಯ ಮತ್ತು ಸಂಸ್ಥಾತಕ ಸಹಭಾಗಿತ್ವ:
ಶಾಲೆಗಳು, ಕಾಲೇಜುಗಳು, ಎನ್ಜಿಒಗಳು ಮತ್ತು ನಾಗರಿಕ ಸಂಘಟನೆಗಳ ಸಹಕಾರದೊಂದಿಗೆ ಜಾಗೃತಿ ಅಭಿಯಾನಗಳು ಮತ್ತು ಮಾದಕ ವಸ್ತು ದುರ್ಬಳಕೆಯನ್ನು ತಡೆಯಲು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿವೆ.ಮಾದಕ ವಸ್ತು ದುರ್ಬಳಕೆ, ಪ್ರೋತ್ಸಾಹ ಅಥವಾ ಪರೋಕ್ಷವಾಗಿ ಮಾರಾಟ ಮಾಡುವ ವ್ಯಕ್ತಿಗಳ ವಿರುದ್ಧ ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ನಗರ ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸಿಂಗ್ ಅವರು ಎಚ್ಚರಿಸಿದ್ದಾರೆ. ನಮ ಬೆಂಗಳೂರನ್ನು ಸುಭದ್ರ ಮತ್ತು ಮಾದಕ ಮುಕ್ತ ನಗರವಾಗಿಸೋಣ ಹಾಗಾಗಿ ಸಾರ್ವಜನಿಕರೆಲ್ಲರೂ ಸಹಕರಿಸುವಂತೆ ಆಯುಕ್ತರು ಮನವಿ ಮಾಡಿದ್ದಾರೆ.