ಬಲಿಯಾ, ಅ. 9 (ಪಿಟಿಐ) ಆರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕನಿಗೆ ಉತ್ತರ ಪ್ರದೇಶದ ನ್ಯಾಯಲಯ 25 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ. ಕಳೆದ 2021ರಲ್ಲಿ 6 ವರ್ಷದ ಬಾಲಕಿಗೆ ಲೈಂಗಿಕವಾಗಿ ಕಿರುಕುಳ ನೀಡಿದ್ದ ಮೊಹಮದ್ ರಾಜಾನಿಗೆ ಶಿಕ್ಷೆ ವಿಧಿಸುವುದರ ಜೊತೆಗೆ 25 ಸಾವಿರ ರೂ.ಗಳ ದಂಡ ವಿಧಿಸಲಾಗಿದೆ.
ವಿಶೇಷ ನ್ಯಾಯಾಧೀಶ (ಪೋಕ್ಸೊ ಕಾಯ್ದೆ) ಪ್ರಥಮ್ ಕಾಂತ್ ಅವರು ಅಪರಾಧಿ ಮೊಹಮ್ಮದ್ ರಾಜಾಗೆ 25,000 ರೂ. ದಂಡ ವಿಧಿಸಿದ್ದಾರೆ.ಮಧುಬನಿ ಗ್ರಾಮದ ನಿವಾಸಿ ರಾಜಾ, ಹತ್ತಿರದ ಹಳ್ಳಿಯಿಂದ ಅಪ್ರಾಪ್ತ ವಯಸ್ಕಳನ್ನು ಆಮಿಷವೊಡ್ಡಿ ಟೆಂಪೋದಲ್ಲಿ ಕರೆದೊಯ್ದು, ಅಲ್ಲಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದ ಎಂಬ ಆರೋಪಕ್ಕೆ ಗುರಿಯಾಗಿದ್ದ.
ಹುಡುಗಿಯ ತಂದೆ ನೀಡಿದ ದೂರಿನ ನಂತರ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ರಾಜಾ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.ವಿಶೇಷ ಸಾರ್ವಜನಿಕ ಅಭಿಯೋಜಕ ವಿಮಲ್ ಕುಮಾರ್ ರೈ ಅವರು ವಾದ ವಿವಾದ ಪೂರ್ಣಗೋಳಿಸಿದ ನ್ಯಾಯಲಯ ಈ ಮಹತ್ವದ ತೀರ್ಪು ನೀಡಿದೆ ಎಂದು ಮಾಹಿತಿ ನೀಡಿದ್ದಾರೆ.