ಚೆನ್ನೈ,ಅ.10- ಇಲ್ಲಿನ ಪಿಟಿಐ ಕಚೇರಿಗೆ ಇಂದು ಬೆಳಿಗ್ಗೆ ಬಾಂಬ್ ಬೆದರಿಕೆ ಬಂದಿದೆ ಪ್ರಧಾನ ಸುದ್ದಿ ಸಂಸ್ಥೆಯ ಕೋಡಂಬಕ್ಕಂ ಕಚೇರಿ ಯಲ್ಲಿ ತಪಾಸಣೆ ನಡೆಸಿದ ಪೊಲೀಸರು ಇದು ಕುಚೋದ್ಯದ ಕೃತ್ಯ ಎಂದು ತಿಳಿಸಿದ್ದಾರೆ.
ಬೆದರಿಕೆಯ ಮೂಲವನ್ನು ಬಹಿರಂಗಪಡಿಸದೆ, ಪೊಲೀಸ್ ತಂಡ ಕಚೇರಿಗೆ ಆಗಮಿಸಿ ಅಲ್ಲಿದ್ದ ಸಿಬ್ಬಂದಿಯನ್ನು ಸ್ಥಳಾಂತರಿಸಿತು. ಆವರಣದಲ್ಲಿ ಬಾಂಬ್ ಪರಿಶೀಲನೆ ನಡೆಸಿತ್ತು. ಸುದ್ದಿ ಸಂಸ್ಥೆಗೆ ಬಾಂಬ್ ಬೆದರಿಕೆಯಿಂದ ಅಕ್ಕ ಪಕ್ಕದ ಸಂಸ್ಥೆ ಸಿಬ್ಬಂಧಿ ಆತಂಕಗೊಂಡರು.