ಥಾಣೆ, ಅ.11-ಆನ್‌ಲೈನ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಷೇರುಗಳಲ್ಲಿ ಹೂಡಿಕೆ ಮಾಡುವಂತೆ ಆಮಿಷವೊಡ್ಡಿದ ಸೈಬರ್ ವಂಚಕರು ಅಣ್ಣ-ತಂಗಿಗೆ ಸುಮಾರು 2.35 ಕೋಟಿ ರೂ. ವಂಚಿಸಿರುವ ಥಾಣೆ ನಗರದಲ್ಲಿ ನಡೆದಿದೆ.
ಸಾಮಾಜಿಕ ಮಾಧ್ಯಮದಲ್ಲಿ ವಂಚಕನೊಬ್ಬ ನಮನ್ನು ಸಂಪರ್ಕಿಸಿದರು, ಅವರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗಳ ಬಗ್ಗೆ ತಜ್ಞರ ಸಲಹೆಯನ್ನು ನೀಡುವುದಾಗಿ ಹೇಳಿಕೊಂಡ ಕೆಲವು ವಾಟ್ಸಾಪ್ ಗುಂಪುಗಳಿಗೆ ನನ್ನನು ಸೇರಿಸಿ ವಂಚಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
ದೂರಿನ ಆಧಾರದ ಮೇಲೆ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಂಚಕರು ಮೊಬೈಲ್ ಫೋನ್‌ಗಳಲ್ಲಿ ನಕಲಿ ಲಿಂಕ್ ಮೂಲಕ ಟ್ರೇಡಿಂಗ್ ಅಪ್ಲಿಕೇಶನ್ ಅನ್ನು ಸ್ಥಾಪಿಸಿ,ಷೇರು ಮಾರುಕಟ್ಟೆ ಮತ್ತು ಐಪಿಒ ಹೂಡಿಕೆಗಳಲ್ಲಿ ಹೆಚ್ಚಿನ ಲಾಭದ ಸಿಗಲಿದೆ ಎಂದು ನಂಬಿಸಿದ್ದರು.
ನಂತರ ಆನ್‌ಲೈನ್ ವಹಿವಾಟಿನ ಮೂಲಕ ವಂಚಕರು ತಿಳಿಸಿದ ವಿವಿಧ ಸಂಸ್ಥೆಗಳಿಗೆ ಸಂಬಂಧಿಸಿದ ವಿವಿಧ ಖಾತೆಗಳಿಗೆ 2.35 ಕೋಟಿ ರೂ.ಗಳಿಗೂ ಹೆಚ್ಚಿನ ಹಣವನ್ನು ವರ್ಗಾಯಿಸಲಾಗಿದೆ.
ಆದರೆ ಷೇರು ವಹಿವಾಟುನ ಮಹಿತಿ,ಲಾಭವನ್ನು ಹಿಂಪಡೆಯಲು ಪ್ರಯತ್ನಿಸಿದಾಗ, ಅಪ್ಲಿಕೇಶನ್ ನಿಷ್ಕ್ರಿಯಗೊಂಡಿರುವುದು ಕಂಡುಬಂದಿದೆ.ಕೂಡಲೆ ನಾವು ಅವರಿಗೆ ಕರೆ ಮಾಡಿ ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ಅಣ್ಣ -ತಂಗಿ ದೂರಿನಲ್ಲಿ ತಿಳಿಸಿದ್ದಾರೆ.ಪ್ರಕರಣದ ತನಿಖೆ ನಡೆಸುತ್ತಿರುವ ಹಿರಿಯ ಇನ್‌್ಸಪೆಕ್ಟರ್ ಸುನಿಲ್ ಜ್ಞಾನೇಶ್ವರ್ ವರುಡೆ ಸುದ್ದಿಗಾರರೊಂದಿಗೆ ಮಾತನಾಡಿ ನಮ ತಂಡ ವಂಚಕರ ಜಾಲ ಪತ್ತೆಹಚ್ಚುತ್ತಿದ್ದಾರೆ ಇದರಲ್ಲಿ ಹಲವಾರ ಭಾಗಿಯಾಗಿರಬಹುದು ಎಂಬ ಶಂಕೆ ಇದೆ ಎಂದು ಹೇಳಿದರು