ಬೀದರ್,ಅ.13- ಆಟ ಆಡುವಾಗ ಬಾವಿಗೆ ಬಿದ್ದು ಬಾಲಕ ಸಾವನ್ನಪ್ಪಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ಈಶ್ವರ ಕಾಲೋನಿಯಲ್ಲಿ ನಡೆದಿದೆ. ಶೇಖ್ ನುಸ್ತಕಿಮ್ ಅಕ್ಬರಲಿ(6) ಮೃತ ಬಾಲಕನಾಗಿದ್ದಾನೆ.
ಮನೆಯ ಪಕ್ಕದಲ್ಲಿ ಆಟ ಆಡುವ ವೇಳೆ ಆವರಣದಲ್ಲಿದ್ದ ಬಾವಿಗೆ ಆಕಸಿಕವಾಗಿ ಬಾಲಕ ಬಿದ್ದಿದೆ.ಮೊದಲು ಯಾರಿಗೂ ತಿಳಿಯಲಿಲ್ಲ ನಂತರ ಕಳೆದ ರಾತ್ರಿ ವಿಷಯ ತಿಳಿದು ಸ್ಥಳಕ್ಕೆ ದೌಡಾಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬಾಲಕನ ಶವ ಹೊರತೆಗೆದಿದ್ದಾರೆ.
ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಬಾಲಕನ ಶವ ರವಾನೆ ಮಾಡಿದ್ದಾರೆ. ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.