ಹೈದರಾಬಾದ್,ಅ.13- ಮನೆಗೆ ಕುಡಿದು ಬಂದು ಮೇಲೆ ಹಲ್ಲೆ ನಡೆಸುತ್ತಿದ್ದ ಕಾರಣ ಪತ್ನಿಯೇ ಮಗನ ಎದುರೇ ಗಂಡನನ್ನು ಇಟ್ಟಿಕೆಗೆಯಿಂದ ತಲೆಗೆ ಬಡಿದು ಕೊಲೆ ಮಾಡಿರುವ ಘಟನೆ ಕೇಶಂಪೇಟೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕೊಪ್ಪು ಕುಮಾರ್(35) ಕೊಲೆಯಾದ ಕುಡುಕ ಪತಿ. ಕೆ. ಮಾಧವಿ ಕೊಲೆ ಮಾಡಿರುವ ಪತ್ನಿ. ಈ ಹಿಂದೆಯೂ ಸಹ, ಕುಮಾರ್ ಆಗಾಗ್ಗೆ ಕುಡಿದು ಮನೆಗೆ ಬರುತ್ತಿದ್ದರಿಂದ ದಂಪತಿಗಳ ನಡುವೆ ಜಗಳವಾಗುತ್ತಿತ್ತು.ಕೊಪ್ಪುಕುಮಾರ್ ಮತ್ತೆ ಕುಡಿದು ಮನೆಗೆ ಬಂದಿದ್ದರಿಂದ ಕೋಪಗೊಂಡ ಮಾಧವಿ ಇಟ್ಟಿಗೆ ಎತ್ತಿಕೊಂಡು ಅವನ ತಲೆಗೆ ಪದೇ ಪದೇ ಬಡಿದಿದ್ದಾಳೆ.
ಸ್ಥಳದಲ್ಲೇ ಸಾವನ್ನಪ್ಪಿದ ಕುಮಾರ್‌ನ ಶವವನ್ನು ತನ್ನ ಮನೆಯ ಮುಂದೆ ಇರುವ ಸಂಪ್‌ನಲ್ಲಿ ಎಸೆದಿದ್ದಾಳೆ. ಮನೆಯಿಂದ ಹೊರಡುವ ಮೊದಲು ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿದ್ದಳು. ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಾಧವಿಗಾಗಿ ಶೋಧ ನಡೆಸುತ್ತಿದ್ದಾರೆ.