ಬೆಂಗಳೂರು, ಅ.14- ರಾಜ್ಯದಲ್ಲಿ ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂಬ ವಾಸ್ತವಾಂಶವನ್ನು ಕಾಂಗ್ರೆಸ್ ಹಿರಿಯ ಶಾಸಕರಾದ ಆರ್.ವಿ. ದೇಶಪಾಂಡೆ ತೆರೆದಿಟ್ಟಿರುವುದರಲ್ಲಿ ತಪ್ಪೇನಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಪಾಂಡೆ ಅವರು ಗ್ಯಾರಂಟಿಗಳ ಬಗ್ಗೆ ಅಪಸ್ವರ ಎತ್ತಿದ್ದಾರೆ. ಸರ್ಕಾರದ ವಾಸ್ತವ ಅಂಶವನ್ನು ತೆರೆದಿಟ್ಟಿದ್ದಾರೆ ಎಂದು ಹೇಳಿದರು.
ರಾಜ್ಯದ ಮುಖ್ಯಮಂತ್ರಿ ದೊಡ್ಡ ಗಾತ್ರದ ಬಜೆಟ್ ಕೊಟ್ಟಿದ್ದು, ಗ್ಯಾರಂಟಿಗಳಿಗೆ 60 ಸಾವಿರ ಕೋಟಿ ಮಿಸಲಿಟ್ಟಿರುವುದಾಗಿ ಹೇಳಿದರೂ ಇಲ್ಲಿವರೆಗೂ ಪ್ರತಿ ತಿಂಗಳು ಸಮರ್ಪಕವಾಗಿ ಗ್ಯಾರಂಟಿಗಳನ್ನು ಕೊಟ್ಟಿಲ್ಲ. ಅಭಿವೃದ್ಧಿ ಸಂಪೂರ್ಣವಾಗಿ ಕುಂಟಿತಗೊಂಡಿದೆ ಎಂದು ರಾಜ್ಯ ಸರ್ಕಾರ ವಿರುದ್ಧ ಅವರು ವಾಗ್ದಾಳಿ ನಡೆಸಿದರು.
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮೇಲೆ ಮಾಟ ಮಂತ್ರ ಮಾಡಿಸಲಾಗಿದೆ ಎಂಬ ಶಾಸಕ ಮುನಿರತ್ನ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಇದ್ಯಾವುದರಲ್ಲೂ ನಂಬಿಕೆ ಇಟ್ಟುಕೊಂಡಿಲ್ಲ. ನಮಗೆ ಗೊತ್ತಿರುವುದು ಕಾಯಕವೇ ಕೈಲಾಸ ಎಂಬುದು. ನಾವು ಶಿವನ ಆರಾಧಕರು, ಭಕ್ತಿ ಪೂರಕವಾಗಿ ಪೂಜೆ ಮಾಡುತ್ತೇವೆ. ಅವರು ಹೇಳಿರುವುದರ ಬಗ್ಗೆ ನನಗೆ ಗೊತ್ತಿಲ್ಲ. ಕರ್ಮ ಯಾರನ್ನೂ ಬಿಡುವುದಿಲ್ಲ. ನಾವು ಏನು ಮಾಡುತ್ತೇವೋ ಅದು ನಮಗೆ ವಾಪಸ್ ಕೊಡುತ್ತದೆ. ನನಗೆ ಮಾಟ ಮಂತ್ರದ ಖಿಲ್ ಅವರು ತಿಳಿಸಿದರು.
ಆರ್‌ಎಸ್‌ಎಸ್ ನಮ ಭಾರತ ದೇಶದಲ್ಲಿ ಸಮಾಜವನ್ನು ಒಳ್ಳೆ ದಿಕ್ಕಿಗೆ ತೆಗೆದುಕೊಂಡು ಹೋಗುತ್ತಿದೆ. ಸಾಕಷ್ಟು ಒಳ್ಳೆಯ ಕೆಲಸ ಮಾಡಿದೆ. ಈಗಾಗಲೇ ನೂರು ವರ್ಷವನ್ನು ಪೂರೈಸಿದೆ. ಇದನ್ನು ರಾಜಕೀಯ ಹೇಳಿಕೆಗೆ ಬಳಸಬಾರದು ಎಂದು ಹೇಳಿದರು.
ದೇವೇಗೌಡರಿಗೆ ದೈವದ ಅನುಗ್ರಹವಿದೆ :
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ದೈವದ ಅನುಗ್ರಹವಿದೆ. ಎಂಥ ಸಮಸ್ಯೆ ಬಂದರೂ ಅವರಿಗೆ ಗೆದ್ದು ಬರುತ್ತೇನೆಂಬ ಆತ ವಿಶ್ವಾಸ ಇದೆ. ಬಹಳ ಬೇಗ ಗುಣಮುಖರಾಗಿ ಮನೆಗೆ ಬಂದಿದ್ದಾರೆ. ಮಣಿಪಾಲ್ ಆಸ್ಪತ್ರೆಯಲ್ಲಿರುವ ವೈದ್ಯರಿಗೂ ಧನ್ಯವಾದಗಳು. ಅವರ ಶ್ರಮವು ಅಷ್ಟೇ ಇದೆ. ರಾಜ್ಯದ ಹೇಳುವರೆ ಕೋಟಿ ಕನ್ನಡಿಗರ ಆಶೀರ್ವಾದ, ಹಾರೈಕೆ, ಪ್ರೀತಿ, ವಾತ್ಸಲ್ಯ ದೇವೇಗೌಡರ ಮೇಲಿದೆ. ಆರೋಗ್ಯದಲ್ಲಿನ ಸಣ್ಣಪುಟ್ಟ ಸಮಸ್ಯೆಗಳು ಬಗೆಹರಿದಿವೆ. ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಅವರು ಇದೇ ವೇಳೆ ತಿಳಿಸಿದರು.