Tuesday, October 14, 2025
Homeಕ್ರೀಡಾ ಸುದ್ದಿ | Sportsವೆಸ್ಟ್‌ ವಿಂಡೀಸ್‌‍ ವಿರುದ್ಧ ಟೆಸ್ಟ್‌ ಸರಣಿ : 2-0 ಅಂತರದಿಂದ ಕ್ಲೀನ್‌ಸ್ವೀಪ್‌ ಮಾಡಿದ ಭಾರತ

ವೆಸ್ಟ್‌ ವಿಂಡೀಸ್‌‍ ವಿರುದ್ಧ ಟೆಸ್ಟ್‌ ಸರಣಿ : 2-0 ಅಂತರದಿಂದ ಕ್ಲೀನ್‌ಸ್ವೀಪ್‌ ಮಾಡಿದ ಭಾರತ

Shubman Gill's India Equal Test Cricket World Record With 2-0 Clean Sweep Of West Indies

ನವದೆಹಲಿ, ಅ. 14 (ಪಿಟಿಐ) ವೆಸ್ಟ್‌ ಇಂಡೀಸ್‌‍ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯದಲ್ಲೂ ಗೆಲುವು ಸಾಧಿಸಿರುವ ಭಾರತ ಸರಣಿಯನ್ನು 2-0 ಇಂದ ಕ್ಲೀನ್‌ ಸ್ವೀಪ್‌ ಮಾಡಿದೆ. ಶುಭಮನ್‌ ಗಿಲ್‌ ಭಾರತದ ಟೆಸ್ಟ್‌ ತಂಡದ ನಾಯಕರಾಗಿ ಮೊದಲ ಸರಣಿ ಜಯ ಇದಾಗಿದೆ. ಎರಡನೇ ಇನಿಂಗ್ಸ್ ನಲ್ಲಿ 121 ರನ್‌ಗಳ ಗುರಿಯನ್ನು ತಲುಪಲು ಕೇವಲ 58 ರನ್‌ಗಳ ಅಗತ್ಯವಿದ್ದಾಗ ಕನ್ನಡಿಗ ಕೆಎಲ್‌ ರಾಹುಲ್‌ 108 ಎಸೆತಗಳಲ್ಲಿ ಔಟಾಗದೆ 58 ಹಾಗೂ ಧ್ರುವ್‌ ಜುರೆಲ್‌ (ಔಟಾಗದೆ 6) 35.2 ಓವರ್‌ಗಳಲ್ಲಿ ಭರ್ಜರಿ ಗೆಲುವಿಗೆ ಕಾರಣರಾದರು.

ರಾಹುಲ್‌ ಆರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿದರು, ಎರಡನೇ ವಿಕೆಟ್‌ಗೆ ಸಾಯಿ ಸುದರ್ಶನ್‌ (39) ಅವರೊಂದಿಗೆ 79 ರನ್‌ ಸೇರಿಸಿದರು.ವಿಂಡೀಸ್‌‍ನ ಜಾನ್‌ ಕ್ಯಾಂಪ್‌ಬೆಲ್‌‍ (115) ಮತ್ತು ಶಾಯ್‌ ಹೋಪ್‌ (103) ಅವರ ಪ್ರತಿರೋಧ ಮತ್ತು 10ನೇ ವಿಕೆಟ್‌ಗೆ ಉತ್ತಮ ಜೊತೆಯಾಟದ ಕಾರಣದಿಂದಾಗಿ ಫಿರೋಜ್‌ ಷಾ ಕೋಟ್ಲಾ ಮೈದಾನ ಸ್ಪಿನ್ನರ್‌ಗಳಿಗೆ ಕಡಿಮೆ ಸಹಾಯ ಮಾಡಿದ ಹಿನ್ನೆಲೆಯಲ್ಲಿ ಪಂದ್ಯ ಐದನೆ ದಿನದವರೆಗೂ ಸಾಗುವಂತಾಯಿತು.

ಎರಡು ಟೆಸ್ಟ್‌ಗಳಲ್ಲಿ, ಭಾರತೀಯ ಬೌಲರ್‌ಗಳು ಎಲ್ಲಾ 40 ಎದುರಾಳಿ ವಿಕೆಟ್‌ಗಳನ್ನು ಕಬಳಿಸಿದರು, ವೇಗಿಗಳು ಸಹಾಯಕಾರಿಯಲ್ಲದ ಮೇಲೈಗಳಲ್ಲಿ ಅದ್ಭುತ ಕೊಡುಗೆ ನೀಡಿದರು ಮತ್ತು ಕೋಟ್ಲಾದಲ್ಲಿ ಪರಿಸ್ಥಿತಿಗಳು ಶಾಂತವಾದಾಗ ಸ್ಪಿನ್ನರ್‌ಗಳು ತಾಳ್ಮೆಯನ್ನು ತೋರಿಸಿದರು.

ಭಾರತೀಯ ಬ್ಯಾಟರ್‌ಗಳಿಗೆ, ಎರಡು ಪಂದ್ಯಗಳಲ್ಲಿ ಐದು ಶತಕಗಳು ಮತ್ತು ಅಗ್ರ ಆರು ಆಟಗಾರರಲ್ಲಿ 90 ರ ಸಮೀಪ ಒಬ್ಬರು ಇದ್ದರು.ಆದರೂ, ಸನ್ನಿವೇಶವನ್ನು ಗಮನಿಸಿದಾಗ, ವೆಸ್ಟ್‌ ಇಂಡೀಸ್‌‍ನ ಅಗ್ರ ಕ್ರಮಾಂಕದ ಬ್ಯಾಟ್‌್ಸಮನ್‌ಗಳಲ್ಲಿ ಯಾರೂ ಪ್ರಸ್ತುತ ಟೆಸ್ಟ್‌ ಕ್ರಿಕೆಟ್‌ನಲ್ಲಿ 35 ರ ಸರಾಸರಿಯನ್ನೂ ಹೊಂದಿಲ್ಲದಿರುವುದು ವಿಪರ್ಯಾಸವೇ ಸರಿ.
ಬ್ರಾಥ್‌ವೈಟ್‌‍ ನಂತರ ನಾಯಕನಾಗಿ ತಮ್ಮ ಮೊದಲ ಐದು ಟೆಸ್ಟ್‌ಗಳಲ್ಲಿ ಸೋತ ಎರಡನೇ ವೆಸ್ಟ್‌ ಇಂಡೀಸ್‌‍ ನಾಯಕ ಎಂಬ ಹೆಗ್ಗಳಿಕೆಗೆ ರೋಸ್ಟನ್‌ ಚೇಸ್‌‍ ಪಾತ್ರರಾದರು.

RELATED ARTICLES

Latest News