ಬೆಂಗಳೂರು,ಅ.14- ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರು, ಹಿಂದುಳಿದವರ ಚಾಂಪಿಯನ್ ಅಲ್ಲ. ಬದಲಿಗೆ ಅವರು ದಲಿತರು, ಹಿಂದುಳಿದವರಿಗೆ ಮೋಸ ಮಾಡಿದವರು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣ ಎಕ್‌್ಸನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಸರ್ಕಾರದ ವಿರುದ್ಧ ಸಾಲು ಸಾಲು ಪೋಸ್‌್ಟ ಮಾಡಿರುವ ಅವರು, ಗುಲ್ಬರ್ಗದಿಂದ ದಸರಾ ವೇಳೆ ಬಲೂನ್ ವ್ಯಾಪಾರಕ್ಕಾಗಿ ಮೈಸೂರಿಗೆ ಬಂದಿದ್ದ ಹಕ್ಕಿಪಿಕ್ಕಿ ಜನಾಂಗದ 10 ವರ್ಷದ ಬಾಲಕಿಯನ್ನು ಅಪಹರಿಸಿ ಆತ್ಯಾಚಾರ ಮಾಡಿ ಕೊನೆಗೆ ಕೊಲೆ ಮಾಡಿದ್ದ ಹೃದಯವಿದ್ರಾವಕ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಘಟನೆ ನಡೆದು 5 ದಿನಗಳಾದರೂ, ಪರಿಶಿಷ್ಟ ಪಂಗಡಕ್ಕೆ ಸೇರಿದ ಒಬ್ಬ ಅಪ್ರಾಪ್ತ ಬಾಲಕಿಗೆ ಆದ ಈ ಅನ್ಯಾಯಕ್ಕೆ ಸಿಎಂ ಸಿದ್ದರಾಮಯ್ಯನವರ ಸರ್ಕಾರ ಈವರೆಗೂ ಪರಿಹಾರವನ್ನೂ ನೀಡಿಲ್ಲ, ಕನಿಷ್ಠ ಪಕ್ಷ ಸೌಜನ್ಯಕ್ಕೂ ಅವರ ಆ ಹೆತ್ತ ತಂದೆತಾಯಿಯರನ್ನು ಭೇಟಿಯಾಗಿ ಸಾಂತ್ವನವನ್ನೂ ಹೇಳಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಸ್ವಾಮಿ ಸಿಎಂ ಸಿದ್ದರಾಮಯ್ಯನವರೇ, ನಾವು ದಲಿತರು, ಹಿಂದುಳಿದವರ ಪರವಾಗಿದ್ದೇವೆ ಎಂದು ಬೊಗಳೆ ಭಾಷಣ ಮಾಡುತ್ತೀರಲ್ಲ, ನಿಮ್ಮ ತವರು ಜಿಲ್ಲೆಯಲ್ಲಿ ಮೈಸೂರಿನ ಹೃದಯ ಭಾಗದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಬಾಲಕಿಗೆ ಆದ ಘೋರ ಅನ್ಯಾಯ ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.
ಒಂದು ಕಡೆ ಮೈಸೂರು ಜಿಲ್ಲೆಯನ್ನು ಸಂಪೂರ್ಣವಾಗಿ ನಿಮ್ಮ ಪುತ್ರನಿಗೆ ಬಿಟ್ಟುಕೊಟ್ಟು ವರ್ಗಾವಣೆ, ಕಮಿಷನ್ ದಂಧೆಯಲ್ಲಿ ತೊಡಗಿಸಿದ್ದೀರಿ. ಇನ್ನೊಂದು ಕಡೆ ತಾವು ಬೆಂಗಳೂರಿನಲ್ಲಿ ಡಿನ್ನರ್ ಮೀಟಿಂಗ್, ಕಲೆಕ್ಷನ್ ಟಾರ್ಗೆಟ್ ಮೀಟಿಂಗ್ ಎಂದು ಬಿಹಾರ ಚುನಾವಣೆಗೆ ಂಡಿಂಗ್ ಕಳುಹಿಸಲು ಪೈಪೋಟಿಗೆ ಬಿದ್ದಂತೆ ಸಚಿವರಿಗೆ ವಸೂಲಿ ಟಾರ್ಗೆಟ್ ನೀಡಿ ಅಕ್ಟೋಬರ್ ಕ್ರಾಂತಿಯ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವಲ್ಲಿ ಬ್ಯುಸಿ ಆಗಿದ್ದೀರಿ.
ಹೀಗಾದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿಯದೇ ಇನ್ನೇನಾಗುತ್ತದೆ ಸ್ವಾಮಿ? ಒಬ್ಬ ದಲಿತ ಬಾಲಕಿಯ ಕೊಲೆಯ ರಕ್ತ ನಿಮ್ಮ ಕೈಗಂಟಿದೆ. ಈ ಪಾಪದ ಶಾಪ ನಿಮ್ಮನ್ನು ತಟ್ಟದೇ ಇರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೇತನ ಸಿಗದೆ ಕಲಬುರಗಿಯ ಗ್ರಂಥಪಾಲಕಿ ಆತ್ಮಹತ್ಯೆ, ಬಿಲ್ ಪಾವತಿ ಆಗದಿದ್ದಕ್ಕೆ ಕಂಟ್ರಾಕ್ಟರ್‌ಗಳ ಆತ್ಮಹತ್ಯೆ, ವರ್ಗಾವಣೆ, ಕಮಿಷನ್ ದಂಧೆಗೆ ಪೊಲೀಸರು, ಸರ್ಕಾರಿ ಅಽಕಾರಿಗಳ ಆತ್ಮಹತ್ಯೆ, ಸಕಾಲಕ್ಕೆ ನೆರೆ, ಬರ ಪರಿಹಾರ ಸಿಗದೆ ರೈತರ ಆತ್ಮಹತ್ಯೆ, ನಿಗಮ ಮಂಡಳಿಗಳಿಂದ ಸಾಲ ಸಿಗದೆ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಸಿಲುಕಿ ಬಡವರ ಆತ್ಮಹತ್ಯೆಗಳಾಗಿವೆ.
ಈ ಮನೆಹಾಳು ಸಿದ್ದರಾಮಯ್ಯ ಸರ್ಕಾರ ರಾಜ್ಯವನ್ನು ದಿವಾಳಿ ಮಾಡಿ ಜನಸಾಮಾನ್ಯರಿಗೆ ಆತ್ಮಹತ್ಯೆ ಭಾಗ್ಯ, ಸಾವು ಗ್ಯಾರೆಂಟಿ ನೀಡುತ್ತಿದೆ. ಈ ಕೊಲೆಗಡುಕ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ! ಎಂದು ಗುಡುಗಿದ್ದಾರೆ. ಕಾಂಗ್ರೆಸ್ ಕ್ರಾಂತಿ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪುತ್ತಿದೆ. 135 ಸೀಟು ಕೊಟ್ಟರೂ ರಾಜ್ಯಕ್ಕೆ ಒಂದು ಸುಭದ್ರ ಸರ್ಕಾರ ಕೊಡಲಾಗದ ಕಾಂಗ್ರೆಸ್ ಪಕ್ಷಕ್ಕೆ ಕನ್ನಡಿಗರು ಇನ್ನೆಂದಿಗೂ ಮತ ಹಾಕುವುದಿಲ್ಲ ಎಂದು ಎಚ್ಚರಿಸಿದ್ದಾರೆ.