ಬೆಂಗಳೂರು,ಅ.15-ಕಡಿಮೆ ಬಡ್ಡಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಹಣ ದೋಚುವ ಮಹಿಳಾ ಗ್ಯಾಂಗ್ ನಗರದಲ್ಲಿದೆ ಎಚ್ಚರಿಕೆ. ಕೇವಲ 1 ರೂ. ಬಡ್ಡಿಗೆ ಲೋನ್ ಕೊಡಿಸುವುದಾಗಿ ಹೇಳಿ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಅವರನ್ನು ಸಂಪರ್ಕಿಸಿ ಮರುಳು ಮಾಡುವ ಈ ಗ್ಯಾಂಗ್ ತದನಂತರದಲ್ಲಿ ಮೊದಲ ಮೂರು ಕಂತಿನ ಹಣವೆಂದು ಹಾಗೂ ಸರ್ವಿಸ್ ಚಾರ್ಜ್ ಎಂದು ಹಣ ಪಡೆದು ಲೋನ್ ಕೊಡದೆ ಕಣರೆಯಾಗುತ್ತಿದೆ.
ಈ ಮಹಿಳಾ ಗ್ಯಾಂಗ್ ನಗರದ ವಿವಿಧ ಕಡೆಗಳಲ್ಲಿ ಸುತ್ತಾಡುತ್ತಾ ಅಮಾಯಕ ಮಹಿಳೆಯರನ್ನು ಯಾಮಾರಿಸಿ ಹಣ ಪೀಕಿ ವಂಚಿಸುತ್ತಿದ್ದು, ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆಯಿಂದಿರಬೇಕಿದೆ.
ಸುಬ್ಬಲಕ್ಷ್ಮಿ ಚಿಟ್ ಫಂಡ್ ಹೆಸರಿನಲ್ಲಿ 1 ರೂ. ಬಡ್ಡಿಗೆ 5 ಲಕ್ಷ, 10 ಲಕ್ಷ, 15 ಲಕ್ಷ ಲೋನ್ ಕೊಡಿಸುವುದಾಗಿ ಗ್ರಾಹಕರೊಬ್ಬರಿಂದ ಲೋನ್ ಸರ್ವಿಸ್ ಚಾರ್ಜ್ ಎಂದು ಹೇಳಿ 30 ರೂ. ಹಣ ಈ ಗ್ಯಾಂಗ್ ಪಡೆದುಕೊಂಡಿತ್ತು.
ಈ ಗ್ಯಾಂಗ್‌ನ ಪ್ರಮುಖ ಆರೋಪಿಯೊಬ್ಬಳು ಚಿಟ್ ಫಂಡ್‌ನಲ್ಲಿ ನಮ ಸಂಬಂಧಿ ಕೆಲಸ ಮಾಡುತ್ತಿದ್ದು, ಅವರ ಕಡೆಯಿಂದ 10 ಲಕ್ಷ ಲೋನ್‌ಕೊಡಿಸುತ್ತೇನೆ ಕೇವಲ 1 ರೂ. ಬಡ್ಡಿಯಷ್ಟೆ ಎಂದು ಗ್ರಾಹಕರನ್ನು ನಂಬಿಸಿದ್ದಾಳೆ.
ಲೋನ್ ಬೇಕಾದರೆ ಮೂರು ಕಂತಿನ ಇಎಂಐ ಹಣವನ್ನು ಮೊದಲೇ ಕೊಡಬೇಕು. ತಿಂಗಳಿಗೆ 10 ಸಾವಿರದಂತೆ 30 ಸಾವಿರ ಹಣದ ಜೊತೆಗೆ ಸರ್ವಿಸ್ ಶುಲ್ಕ 5 ಸಾವಿರ ರೂ. ಕಟ್ಟಬೇಕೆಂದು ಹೇಳಿ ಹಣ ಪಡೆದುಕೊಂಡು ಲೋನ್ ಕೊಡಿಸದೆ ಪ್ರಮುಖ ಆರೋಪಿ ಸೇರಿದಂತೆ ಗ್ಯಾಂಗ್‌ನ ಇತರರು ತಲೆ ಮರೆಸಿಕೊಂಡಿದ್ದಾರೆೆ.
ಈ ರೀತಿ ವಂಚಿಸಿರುವ ಬಗ್ಗೆ ಕೆಪಿ ಅಗ್ರಹಾರ ಹಾಗೂ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.ಈ ಗ್ಯಾಂಗ್ ಕೆಪಿ ಅಗ್ರಹಾರದಲ್ಲಿ 16 ಮಹಿಳೆಯರಿಗೆ ಹಾಗೂ ಬಸವೇಶ್ವರ ನಗರದಲ್ಲಿ 1 ಮಹಿಳೆಗೆ ಮೋಸ ಮಾಡಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಪೊಲೀಸರು ಈ ಗ್ಯಾಂಗ್‌ನ ಆರೋಪಿಗಳಿಗಾಗಿ ಶೋಧ ಕೈಗೊಂಡಿದ್ದಾರೆ. ಈ ಮಹಿಳಾ ಗ್ಯಾಂಗ್ ನಗರದ ಬೇರೆ ಬೇರೆ ಕಡೆಗಳಲ್ಲಿಯೂ ವಂಚಿಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಈ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.