ಕೊಚ್ಚಿ, ಫೆ.21- ನಿಷೇಧಿತ ಪಿಎಫ್ಐನ ಶಿಕ್ಷಣ ವಿಭಾಗದ ರಾಷ್ಟ್ರೀಯ ಉಸ್ತುವಾರಿ ಮತ್ತು ಸಂಘಟನೆಗೆ ಸಂಯೋಜಿತನಾಗಿದ್ದ ಅಶ್ರಫ್ ಅಲಿಯಾಸ್ ಕರಮಣ್ಣ ಅಶ್ರಫ್ ಮೌಲವಿ ಅವರ ಜಾಮೀನು ಅರ್ಜಿಯನ್ನು ಎನ್ಐಎ ನ್ಯಾಯಾಲಯ ತಿರಸ್ಕರಿಸಿದೆ. ನಿಷೇಧಿತ ಪಿಎಫ್ಐನ ಶಿಕ್ಷಣ ವಿಭಾಗದಲ್ಲಿ ಸಶಸ್ತ್ರ ತರಬೇತಿಯನ್ನು ಆಯೋಜಿಸಲಾಗಿತ್ತು ಮತ್ತು ಐಸಿಸ್ ಸಿದ್ಧಾಂತವನ್ನು ಪ್ರಚಾರ ಮಾಡಿದ್ದಾರೆ ಎಂದು ಎನ್ಐಎ ತಿಳಿಸಿದೆ.
ಈಗಾಗಿ ಜಾಮೀನು ಅರ್ಜಿಯನ್ನು ಎನ್ಐಎ ನ್ಯಾಯಾಲಯದ ನ್ಯಾಯಾಧೀಶ ಎಂ.ಕೆ ಮೋಹನದಾಸ್ ವಜಾಗೊಳಿಸಿದ್ದಾರೆ.ಪಾಲಕ್ಕಾಡ್ನಲ್ಲಿ ಆರ್ಎಸ್ಎಸ್ ನಾಯಕ ಶ್ರೀನಿವಾಸನ್ ಅವರ ಹತ್ಯೆ ಸೇರಿದಂತೆ ಪಿಎಫ್ಐ ದೇಶ ವಿರೋಧಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣದಲ್ಲಿ ಅವರು ಎರಡನೇ ಆರೋಪಿಯಾಗಿದ್ದಾರೆ.
ಜಾಮೀನು ಅರ್ಜಿಯನ್ನು ಆಕ್ಷೇಪಿಸಿ, ಅಶ್ರಫ್ ಕೊಚ್ಚಿಯ ಪೆರಿಯಾರ್ ಕಣಿವೆಯಲ್ಲಿ ಮತ್ತು ತಿರುವನಂತಪುರ ಶೈಕ್ಷಣಿಕ ಸೇವೆಗಳ ಟ್ರಸ್ಟ್ನಲ್ಲಿ ಭಯೋತ್ಪಾದಕ ಕೃತ್ಯಗೆ ಪಿಎಫ್ಐ ಶಸ್ತ್ರಾಸ್ತ್ರ ತರಬೇತಿಯನ್ನು ಆಯೋಜಿಸಿತ್ತು ಎಂದು ಎನ್ಐಎ ಆಕ್ಷೇಪಣೆಯಲ್ಲಿ ತಿಳಿಸಿದೆ.
ಡಿಸೆಂಬರ್ 29, 2022 ರಂದು ಮುಬಾರಕ್ ಅವರ ನಿವಾಸದ ಶೋಧದ ಸಮಯದಲ್ಲಿ, ಮೂರು ಕತ್ತಿಗಳು ಮತ್ತು ಒಂದು ಕೊಡಲಿಯನ್ನು ವಶಪಡಿಸಿಕೊಳ್ಳಲಾಯಿತು. ತನಿಖೆ ನಡೆಸಿದ ಕೇರಳದಲ್ಲಿ ಪ್ರೊಫೆಸರ್ ಜೋಸೆಫ್ ಅವರ ಕೈ ಕತ್ತರಿಸಿದ ಪ್ರಕರಣದಲ್ಲಿ ಕಾರ್ಯಕರ್ತರು ಕೊಡಲಿಯನ್ನು ಬಳಸಿದ್ದಾರೆ ಎಂದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಶ್ರೀನಿವಾಸನ್ ಹತ್ಯೆಗೆ ಸಂಬಂಧಿಸಿದ ಪಿತೂರಿಯಲ್ಲಿ ಅಶ್ರಫ್ ಮತ್ತು ಇತರ ಆರೋಪಿಗಳು ಭಾಗಿಯಾಗಿದ್ದಾರೆ ಎಂದು ಮತ್ತಷ್ಟು ಸಾಕ್ಷಿಸಲ್ಲಿಸಿದೆ
