Friday, October 11, 2024
Homeರಾಜ್ಯಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

ಬೆಂಗಳೂರು,ನ.27- ಕೇಂದ್ರ ಸರ್ಕಾರದ ರೈತ ಮತ್ತು ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಸಂಯುಕ್ತ ಹೋರಾಟ-ಕರ್ನಾಟಕ ಸಂಘಟನೆ ರಾಜಭವನ ಚಲೋ ಹಮ್ಮಿಕೊಂಡಿದೆ. ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿ ಇನ್ನಿತರ ಸಂಘಟನೆಗಳ ವತಿಯಿಂದ ಕಾರ್ಮಿಕ ಸಂಘಟನೆಯ ರಾಜ್ಯಾಧ್ಯಕ್ಷ ಕೆ.ವಿ.ಭಟ್ ನೇತೃತ್ವದಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಕೃಷಿ ಕಾಯ್ದೆಗಳ ರದ್ದತಿ, ಬೆಂಬಲ ಬೆಲೆಗೆ ಕಾನೂನಿನ ಸ್ವರೂಪ, ಕಾರ್ಮಿಕ ಕಾಯ್ದೆಗಳ ರದ್ದತಿ, ಬೆಲೆ ಏರಿಕೆಗೆ ಕಡಿವಾಣ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಫ್ರೀಡಂಪಾರ್ಕ್‍ನಲ್ಲಿ ನಿನ್ನೆಯಿಂದ ನಡೆಯುತ್ತಿರುವ ಪ್ರತಿಭಟನೆ ಇಂದು ತೀವ್ರಗೊಂಡಿದೆ.

ಪ್ರಧಾನಿ ಮೋದಿ ಶ್ಲಾಘನೆ ಖುಷಿ ತಂದಿದೆ : ವರ್ಷಾ

ಮಹಾಧರಣಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಬಡಗಲಪುರ ನಾಗೇಂದ್ರ, ಹೆಚ್.ಆರ್ ಬಸವರಾಜಪ್ಪ, ಹಾಗೂ ಭೂಮಿ ಮತ್ತು ವಸತಿ ಸಮಿತಿಯ ಕುಮಾರ್ ಸಮತಲ, ಕೆಪಿಆರ್‍ಎಸ್ ಸಂಘಟನೆಯ ಯಶವಂತ್, ಎಐಕೆಕೆಎಂಎಸ್ ಸಂಘಟನೆಯ ಹೆಚ್.ಆರ್ ಶಿವಪ್ರಸಾದ್ ಹಾಗೂ ಇನ್ನಿತರ ಸಂಘಟನೆಯ ನಾಯಕರುಗಳು ಭಾಗವಹಿಸಿದ್ದರು.

RELATED ARTICLES

Latest News