ಮೈಸೂರು, ಅ.19- ಕೆಆರ್‌ನಗರ ತಾಲ್ಲೂಕಿನ ಕಾಂಗ್ರೆಸ್ ಮುಖಂಡರೊಬ್ಬರ ಅಶ್ಲೀಲ ವಿಡಿಯೋ ವೈರಲ್ ಆಗಿದ್ದು, ಸಂತ್ರಸ್ತ ಮಹಿಳೆಯ ತಂದೆ ದೂರು ನೀಡಿ, ಜಮೀನಿನ ವಿವಾದದ ಹಿನ್ನೆಲೆಯಲ್ಲಿ ದ್ವೇಷಕ್ಕಾಗಿ ನಮ ಕುಟುಂಬದ ಘನತೆಗೆ ಧಕ್ಕೆ ತರುವಂತಹ ಹುನ್ನಾರ ನಡೆದಿದೆ ಎಂದು ತಿಳಿಸಿದ್ದಾರೆೆ.
ಸೋಮೇಗೌಡ ಎಂಬುವವರು ಈ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದು ತಾವು ವ್ಯವಸಾಯ ಮಾಡಿಕೊಂಡಿದ್ದೇವೆ. ತಮಗೆ ಇಬ್ಬರು ಮಕ್ಕಳಿದ್ದಾರೆ. ಹಾಸನ ಜಿಲ್ಲೆಯ ಹೊಳೇನರಸೀಪುರ ತಾಲ್ಲೂಕಿನ ಗ್ರಾಮವೊಂದರ ವ್ಯಕ್ತಿಗೆ ಮೂರು ತಿಂಗಳ ಹಿಂದೆ ಮಗಳ ಮದುವೆ ಮಾಡಿಕೊಡಲಾಗಿದೆ. ಮಗಳು ಅಳಿಯ ಅನೋನ್ಯವಾಗಿದ್ದರು ಎಂದು ತಿಳಿಸಿದ್ದಾರೆ.
ದೀಪಾವಳಿ ಹಿನ್ನೆಲೆಯಲ್ಲಿ ಮಗಳು ಮನೆಗೆ ಬಂದಿದ್ದಾರೆ. ಅ.16 ರಂದು ಬೆಳಗ್ಗೆ ಸಂಬಂಧಿಯೊಬ್ಬರು ಜಮೀನಿನ ಬಳಿ ಭೇಟಿಯಾದಾಗ ನಿಮ ಮಗಳು ಮತ್ತು ಲೋಹಿತ್ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ವಿಡಿಯೋ, ಮಲ್ಲಿಕಾರ್ಜುನ ಎಂಬುವರ ವಾಟ್ಸಾಪ್‌ಗೆ ಬಂದಿದ್ದು, ಆತ ಅದನ್ನು ನನ್ನ ವಾಟ್ಸಾಪ್ ನಂಬರಿಗೆ ಕಳುಹಿಸಿದ್ದಾನೆ.
ಬಳಿಕ ಡಿಲಿಟ್ ಮಾಡಿದ್ದಾನೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಮುಖಂಡರಾಗಿರುವ ಲೋಹಿತ್ ಮತ್ತು ನಮಗೂ ಜಮೀನಿನ ದಾರಿ ವಿಚಾರವಾಗಿ ಪದೇ ಪದೇ ಗಲಾಟೆಯಾಗಿದೆ. ನಿಮ ಕುಟುಂಬಕ್ಕೆ ಒಂದು ಗತಿ ಕಾಣಿಸುತೇನೆ ಎಂದು ಆತ ಹೇಳುತ್ತಿದ್ದ.
ಕೊಲೆ ಮಾಡುವ ಬೆದರಿಕೆಯನ್ನೂ ಹಾಕಿದ್ದ. ಈ ದ್ವೇಷದಿಂದ ನನ್ನ ಮಗಳ ಮತ್ತು ನನ್ನ ಕುಟುಂಬವನ್ನು ಬೀದಿ ಪಾಲು ಮಾಡಲು ಸಂಚು ನಡೆಸಿದ್ದಾನೆ. ಅಶ್ಲೀಲ ವಿಡಿಯೋವನ್ನು ಹರಿ ಬಿಟ್ಟು ಸಂಸಾರಕ್ಕೆ ತೊಂದರೆ ಮಾಡಿರುವ ಲೋಹಿತ್ ಅಲಿಯಾಸ್ ರಾಜೀ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ತಮ ಮಗಳಿಗೆ ನ್ಯಾಯ ಕೊಡಿಸಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ.