ನವದೆಹಲಿ,ಅ.20- ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಬ್ರಹೋಸ್ ಸೂಪರ್ ಸಾನಿಕ್ ಕ್ಷಿಪಣಿ ಪಾಕಿಸ್ತಾನದ ನಿದ್ದೆಗೆಡಿಸಿದೆ. ಈಗಾಗಲೇ ಆಪರೇಷನ್ ಸಿಂಧೂರ್ನಲ್ಲಿ ಬಳಸಲಾಗಿದ್ದ ಬ್ರಹೋಸ್ ಕ್ಷಿಪಣಿ ಇಡೀ ವಿಶ್ವವೇ ಭಾರತದ ಸೇನಾ ಬತ್ತಳಿಕೆಯ ಹೊಸ ಅಸ್ತ್ರದ ಬಗ್ಗೆ ಚಕಿತಗೊಂಡಿತ್ತು.
ಕಡಿಮೆ ಅಂತರದ ನಿರ್ದಿಷ್ಟ ಗುರಿಯನ್ನು ತಲುಪಬಹುದಾದ ಬ್ರಹೋಸ್ ಸೂಪರ್ ಸಾನಿಕ್ ಕ್ಷಿಪಣಿ ಅಭಿವೃದ್ಧಿಗೆ (450 ಕಿ.ಮೀ.) ಭಾರತದ ವಿಜ್ಞಾನಿಗಳು ಸತತ ಪ್ರಯತ್ನ ನಡೆಸಿ ಯಶಸ್ವಿಯಾಗಿದ್ದರು.
ಈಗ 800 ಕಿಲೋಮೀಟರ್ ದೂರ ಕ್ರಮಿಸಬಹುದಾದ ಕ್ಷಿಪಣಿ ಪರೀಕ್ಷೆಯನ್ನು ಆರಂಭಿಸಿದೆ. ಕೇವಲ ಎರಡೇ ವರ್ಷದಲ್ಲಿ ಹೊಸ ಆವೃತ್ತಿಯ ಬ್ರಹೋಸ್ ಕ್ಷೀಪಣಿಗಳ ಸರಣಿಯನ್ನು ಅಭಿವೃದ್ಧಿಪಡಿಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ವಾಯುಪಡೆಯಲ್ಲಿ ಬಳಸಬಹುದಾದ 200 ಕಿಮೀ. ರೇಂಜಿನ ಅಸ್ತ್ರ ಕ್ಷಿಪಣಿಯನ್ನು ಕೂಡ ಮುಂದಿನ 2026-27ರ ನಡುವೆ ಸಿದ್ಧಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಪಾಕಿಸ್ತಾನದ ಪ್ರತಿಯೊಂದು ಜಾಗವನ್ನು ಮುಟ್ಟುವ ಸಾಮರ್ಥ್ಯ ಹೊಂದಿರುವ ಬ್ರಹೋಸ್ ಕ್ಷಿಪಣಿ ಸಿದ್ಧವಾಗಿದ್ದು, ಈಗ ದೂರಗಾಮಿ ಆವೃತ್ತಿಯನ್ನು ಅಭಿವೃದ್ಧಿಪಡಿಸುವತ್ತ ಹೆಚ್ಚಿನ ಚಿತ್ತಹರಿಸಲಾಗಿದೆ.
ಮುಂದಿನ 2027ರ ವೇಳೆಗ ಬ್ರಹೋಸ್ ಸೂಪರ್ ಸಾನಿಕ್ ಸರಣಿ ಕ್ಷಿಪಣಿಗಳು ಸಿದ್ದಗೊಳ್ಳಲಿದ್ದು, ನೆರೆಯ ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿದೆ. ಮಾಹಿತಿಯ ಪ್ರಕಾರ, ಉಪಗ್ರಹ ಆಧಾರಿತ ಉಡಾವಣಾ ವ್ಯವಸ್ಥೆಯನ್ನು ಕೂಡ ಅಭಿವೃದ್ಧಿಪಡಿಸಲಾಗುತ್ತಿದೆ. ಪ್ರಸ್ತುತ ಇದರ ಬಗ್ಗೆ ಹಲವು ಪರೀಕ್ಷೆಗಳು ನಡೆಯಬೇಕಾಗಿದೆ.
ಕಳೆದ ಅಪರೇಷನ್ ಸಿಂಧೂರ್ ವೇಳೆ ಸುಖೋಯ್ 30 ಎಂಕೆಐ ಸಮರ ವಿಮಾನದ ಮೂಲಕ 450 ಕಿಲೋಮೀಟರ್ ರೇಂಜಿನ ಬ್ರಹೋಸ್ ಕ್ಷಿಪಣಿಯನ್ನು ಬಳಸಲಾಗಿತ್ತು. ಭಾರತದ ವಾಯು ಪ್ರದೇಶವನ್ನು ಸುರಕ್ಷಿತಗೊಳಿಸುವಲ್ಲಿ ಈ ಸುಖೋಯ್ ಯುದ್ಧ ವಿಮಾನದ ಪಾತ್ರ ಮಹತ್ವದಾಗಿದ್ದು, ಅದು ಉಡಾಯಿಸಿದ ಬ್ರಹೋಸ್ ಕ್ಷಿಪಣಿ ನಿರ್ದಿಷ್ಟ ತಾಣಕ್ಕೆ ಪಾಕಿಸ್ತಾನದ ದೂರದ ತಾಣದಲ್ಲಿ ಘರ್ಜಿಸಿದೆ.