Monday, October 20, 2025
Homeರಾಷ್ಟ್ರೀಯ | Nationalಐಎನ್‌ಎಸ್‌‍ ವಿಕ್ರಾಂತ್‌ನಲ್ಲಿ ಪ್ರಧಾನಿ ದೀಪಾವಳಿ ಸಂಭ್ರಮ, ರಕ್ಷಣಾ ರಫ್ತಿನಲ್ಲಿ ಅಗ್ರಸ್ಥಾನಕ್ಕೇರಲು ಮೋದಿ ಸಂಕಲ್ಪ

ಐಎನ್‌ಎಸ್‌‍ ವಿಕ್ರಾಂತ್‌ನಲ್ಲಿ ಪ್ರಧಾನಿ ದೀಪಾವಳಿ ಸಂಭ್ರಮ, ರಕ್ಷಣಾ ರಫ್ತಿನಲ್ಲಿ ಅಗ್ರಸ್ಥಾನಕ್ಕೇರಲು ಮೋದಿ ಸಂಕಲ್ಪ

PM Modi celebrates Diwali aboard INS Vikrant, watches MiG 29 jets take off

ಪಣಜಿ, ಅ. 20 (ಪಿಟಿಐ) ಐಎನ್‌ಎಸ್‌‍ ವಿಕ್ರಾಂತ್‌ ಕೇವಲ ಯುದ್ಧನೌಕೆಯಲ್ಲ, ಅದು 21 ನೇ ಶತಮಾನದ ಭಾರತದ ಕಠಿಣ ಪರಿಶ್ರಮ, ಪ್ರತಿಭೆ, ಪ್ರಭಾವ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಪ್ರಧಾನ ಮಂತ್ರಿ ಮೋದಿ ಇಂದಿಲ್ಲಿ ಹೇಳಿದರು.ಐಎನ್‌ಎಸ್‌‍ ವಿಕ್ರಾಂತ್‌ ಭಾರತದ ಸಶಸ್ತ್ರ ಪಡೆಗಳ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ ಮತ್ತು ಆತ್ಮನಿರ್ಭರ ಭಾರತದ ಅತ್ಯುನ್ನತ ಸಂಕೇತವಾಗಿದೆ ಎಂದು ಅವರು ಹೇಳಿದರು.

ಗೋವಾ ಮತ್ತು ಕಾರವಾರ ಕರಾವಳಿಯಲ್ಲಿರುವ ಐಎನ್‌ಎಸ್‌‍ ವಿಕ್ರಾಂತ್‌ಗೆ ಭೇಟಿ ನೀಡಿ ಭಾರತೀಯ ನೌಕಾಪಡೆಯ ಪಡೆಗಳೊಂದಿಗೆ ಬೆಳಕಿನ ಹಬ್ಬವನ್ನು ಆಚರಿಸಿ ಭಾರತೀಯ ನೌಕಾಪಡೆಯ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತವನ್ನು ವಿಶ್ವದ ಅಗ್ರ ರಕ್ಷಣಾ ರಫ್ತುದಾರರಲ್ಲಿ ಒಂದನ್ನಾಗಿ ಮಾಡುವ ಗುರಿಯನ್ನು ತಮ್ಮ ಸರ್ಕಾರ ಹೊಂದಿದೆ ಎಂದು ಪ್ರತಿಪಾದಿಸಿದ ಪ್ರಧಾನಿ ನರೇಂದ್ರ ಮೋದಿ, 2014 ರಿಂದ ನಮ್ಮ ಹಡಗು ಕಟ್ಟೆಗಳು 40 ಕ್ಕೂ ಹೆಚ್ಚು ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಿವೆ ಎಂದು ಹೇಳಿದರು.ಬ್ರಹ್ಮೋಸ್‌‍ ಎಂಬ ಹೆಸರು ಕೆಲವು ಮನಸ್ಸಿನಲ್ಲಿ ಭಯವನ್ನು ಉಂಟುಮಾಡುತ್ತದೆ ಮತ್ತು ಈಗ ಅನೇಕ ದೇಶಗಳು ಈ ಕ್ಷಿಪಣಿಗಳನ್ನು ಖರೀದಿಸಲು ಉತ್ಸುಕವಾಗಿವೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಐಎನ್‌ಎಸ್‌‍ ವಿಕ್ರಾಂತ್‌ನಲ್ಲಿ ನಿನ್ನೆ ಕಳೆದ ರಾತ್ರಿಯನ್ನು ಪದಗಳಲ್ಲಿ ಹೇಳುವುದು ಕಷ್ಟ. ನೀವೆಲ್ಲರೂ ತುಂಬಿದ್ದ ಅಪಾರ ಶಕ್ತಿ ಮತ್ತು ಉತ್ಸಾಹವನ್ನು ನಾನು ನೋಡಿದೆ. ನಿನ್ನೆ ನೀವು ದೇಶಭಕ್ತಿ ಗೀತೆಗಳನ್ನು ಹಾಡುವುದನ್ನು ನಾನು ನೋಡಿದಾಗ ಮತ್ತು ನಿಮ್ಮ ಹಾಡುಗಳಲ್ಲಿ ಆಪರೇಷನ್‌ ಸಿಂಧೂರ್‌ ಅನ್ನು ನೀವು ಹೇಗೆ ವಿವರಿಸಿದ್ದೀರಿ ಎಂಬುದನ್ನು ನೋಡಿದಾಗ, ಯುದ್ಧಭೂಮಿಯಲ್ಲಿ ನಿಂತಿರುವ ಜವಾನನ ಅನುಭವವನ್ನು ಯಾವುದೇ ಪದಗಳು ಸಂಪೂರ್ಣವಾಗಿ ತಿಳಿಸಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದರು.ನನ್ನ ದೀಪಾವಳಿ ನಿಮ್ಮೊಂದಿಗೆ ಕಳೆದಂತೆ ವಿಶೇಷವಾಗಿದೆ ಎಂದು ಅವರು ಹೇಳಿದರು.

ಆಪರೇಷನ್‌ ಸಿಂಧೂರ್‌ ಸಮಯದಲ್ಲಿ ಪಾಕಿಸ್ತಾನ ಶರಣಾಗುವಂತೆ ಮಾಡುವಲ್ಲಿ ನಮ ಮೂರು ಸೇನಾ ಪಡೆಗಳ ನಡುವಿನ ಅಸಾಧಾರಣ ಸಮನ್ವಯ ಸಾಧಿಸಿತ್ತು ಎಂದು ಪ್ರಧಾನಿ ಹೇಳಿದರು.
ಭಾರತ ಮಾವೋವಾದಿ ಹಿಂಸಾಚಾರದಿಂದ ಸ್ವಾತಂತ್ರ್ಯದ ಹೊಸ್ತಿಲಲ್ಲಿದೆ ಮತ್ತು ಈ ಸ್ವಾತಂತ್ರ್ಯ ನಮ್ಮ ಬಾಗಿಲುಗಳನ್ನು ತಟ್ಟುತ್ತಿದೆ ಎಂದು ಹೇಳಿದರು.

ಮೊದಲು, 125 ಜಿಲ್ಲೆಗಳು ಮಾವೋವಾದಿ ಭಯೋತ್ಪಾದನೆಯ ಹಿಡಿತದಲ್ಲಿದ್ದವು ಆದರೆ ಈಗ ಅದು ಕೇವಲ 11 ಜಿಲ್ಲೆಗಳಿಗೆ ಇಳಿದಿದೆ.ನಕ್ಸಲ್‌ ನಿರ್ಮೂಲನೆಯಲ್ಲಿ ಶೇ.90 ರಷ್ಟು ಯಶಸ್ಸನ್ನು ಸಾಧಿಸಲಾಗಿದ್ದರೂ, ಪೊಲೀಸ್‌‍ ಪಡೆಗಳು ಮಾವೋವಾದಿ ಹಿಂಸಾಚಾರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವಲ್ಲಿ ಯಶಸ್ವಿಯಾಗುತ್ತವೆ ಎಂದು ನನಗೆ ವಿಶ್ವಾಸವಿದೆ ಎಂದು ಅವರು ಹೇಳಿದರು.

RELATED ARTICLES

Latest News