ಹಾಸನ,ಅ.20– ಹಾಸನಾಂಬೆಯ ದರ್ಶನ ಪಡೆದು ವಾಪಸ್ಸಾಗುತ್ತಿದ್ದಾಗ ಎರಡು ದ್ವಿಚಕ್ರವಾಹನ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಫಘಾತದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಕಗ್ಗಲಿಕಾವಲು ಫಾರೆಸ್ಟ್ಬಳಿ ನಡೆದಿದೆ.ಬಸವರಾಜು (24), ಅನು (20) ಮೃತಪಟ್ಟ ದುರ್ದೈವಿಗಳು.
ಬೆಂಗಳೂರು ಮೂಲದ ಬಸವರಾಜು, ಅನು ಹಾಗೂ ಛಾಯಾ ಎಂಬುವವರು ಯಮಹಾ ಬೈಕ್ನಲ್ಲಿ ಬಂದು ಹಾಸನಾಂಬದೇವಿ ದರ್ಶನ ಪಡೆದು ಒಂದೆ ಬೈಕ್ನಲ್ಲಿ ಮೂವರು ತೆರಳುತ್ತಿದ್ದಾಗ ಚನ್ನರಾಯಪಟ್ಟಣ ಕಡೆಯಿಂದ ವೇಗವಾಗಿ ಬಂದ ಕಾರು ಹೌಸಿಂಗ್ ಬೋರ್ಡ್ ಬಳಿ ಮೊದಲು ಆಕ್ಟಿವಾಗೆ ಡಿಕ್ಕಿ ಹೊಡೆದು ನಂತರ ಬೈಕ್ ಅಪ್ಪಳಿಸಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಬಸವಾರಜು ಹಾಗೂ ಅನು ಸ್ಥಳದಲ್ಲೇ ಸಾವನ್ನಪ್ಪಿದರೆ ಛಾಯಾ ಹಾಗೂ ಆಕ್ಟಿವಾ ಸವಾರ ಮೋಹಮದ್ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಚನ್ನರಾಯಪಟ್ಟಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿದ ಕೂಡೆಲೇ ಚೆನ್ನರಾಯಪಟ್ಟಣ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.