ಪಿರಿಯಾಪಟ್ಟಣ,ಅ.25- ಗ್ಯಾಸ್ ಗೀಸರ್‌ನಲ್ಲಿ ಅನಿಲ ಸೋರಿಕೆಯಾಗಿ ಉಸಿರುಗಟ್ಟಿ ಕುಟುಂಬದ ಇಬ್ಬರು ಸಹೋದರಿಯರು ಮೃತಪಟ್ಟಿರುವ ಘಟನೆ ಜರುಗಿದೆ.ಪಿರಿಯಾಪಟ್ಟಣದ ಬೆಟ್ಟದಪುರದ ನಿವಾಸಿಯಾದ ಅಲ್ತಾಫ್ ಪಾಷಾ ಅವರ ಎರಡನೇ ಮಗಳು ಗುಲ್ಪಮ್ ತಾಜ್(23) ಮತ್ತು ನಾಲ್ಕನೇ ಮಗಳಾದ ಸಿವ್ರಾನ್ ತಾಜ್(21) ಸಾವನ್ನಪ್ಪಿರುವ ನತದೃಷ್ಟರಾಗಿದ್ದಾರೆ.
ಬೆಟ್ಟದಪುರದಿಂದ ಪಿರಿಯಾಪಟ್ಟಣದ ಜೋನಿಗೆರಿ ಬೀದಿಯಲ್ಲಿ ಬಾಡಿಗೆ ಮನೆಯಲ್ಲಿ ಅಲ್ತ್‌ಾ ಪಾಷಾ ಕುಟುಂಬದವರು ವಾಸ ಮಾಡುತ್ತಿದ್ದಾರೆ. ಮೊನ್ನೆ ರಾತ್ರಿ 7 ಗಂಟೆ ಸುಮಾರಿನಲ್ಲಿ ಇಬ್ಬರು ಸಹೋದರಿಯರು ಸ್ನಾನದ ಮನೆಗೆ ಏಕಕಾಲಕ್ಕೆ ತೆರಳಿದ್ದರು.
ಆ ಸಂದರ್ಭದಲ್ಲಿ ಗ್ಯಾಸ್ ಗೀಸರ್ ಆನ್ ಮಾಡಿದ ತಕ್ಷಣ ಅದರಿಂದ ಬಿಡುಗಡೆಯಾದ ಅನಿಲ ಕಾರ್ಬನ್ ಮೊನಾಕ್ಸೈಡ್ ಪಾಯಿಸನ್ ಸೇಕೇಶನ್ ಆದ್ದರಿಂದ ಉಸಿರಾಡಲು ತೊಂದರೆ ಉಂಟಾಗಿ ವಿಷ ಅನಿಲ ಸೇವನೆಯಿಂದ ಸ್ಥಳದಲ್ಲಿ ಬಿದ್ದಿದ್ದಾರೆ.ಕುಟುಂಬದವರು ಗಮನಿಸಿ ಇವರನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆ ತಂದಾಗ ವೈದ್ಯರು ಪರೀಕ್ಷಿಸಿ ಇಬ್ಬರೂ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ನಂತರ ಇಬ್ಬರು ಯುವತಿಯರ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದ್ದು, ಕುಟುಂಬಸ್ಥರು ಬೆಟ್ಟದಪುರದ ಗ್ರಾಮದಲ್ಲಿ ಇವರ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ.
ಹಸೆ ಮಣೆ ಏರಬೇಕಿತ್ತು:
ಅಲ್ತಾಪ್ ಪಾಷ ಅವರಿಗೆ ನಾಲ್ಕು ಜನ ಹೆಣ್ಣು ಮಕ್ಕಳಿದ್ದು ಇಬ್ಬರಿಗೆ ಮದುವೆಯಾಗಿತ್ತು. ಗುಲ್ಪಮ್ ತಾಜ್‌ಗೆ ನಿಶ್ಚಿತಾರ್ಥ ಕೂಡ ಆಗಿತ್ತು. ಪಟ್ಟಣದಲ್ಲಿ ಬಾಡಿಗೆಗೆ ಹೊಸ ಮನೆಗೆ ಬಂದಿದ್ದರು.
ಅಂದು ಹೊಸ ಮನೆಯಲ್ಲಿ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ವರನ ಕಡೆಯವರು ಇವರ ಮನೆಗೆ ಬಂದಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿರುವುದು ದುರ್ದೈವ.
ಮೃತ ದೇಹಗಳ ಶವ ಪರೀಕ್ಷೆ ನಡೆಸಿದ ವೈದ್ಯ ಡಾಕ್ಟರ್ ಪ್ರಮೋದ್ ಕುಮಾರ್ ಮಾತನಾಡಿ, ಕಾರ್ಬನ್ ಮೋನಾಕ್ಸೈಡ್ ಸೇವನೆಯಿಂದ ಮೃತಪಟ್ಟಿರೋದು ಮೇಲ್ನೋಟಕ್ಕೆ ಕಂಡುಬಂದಿದ್ದು ಮೈ ಮೇಲೆ ಉಂಟಾದ ಮಚ್ಚೆಗಳು ಶ್ವಾಸಕೋಶ ಹಾಳಾಗಿರುವುದು ಕಂಡು ಬಂದಿದ್ದು ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವು ಹೇಗಾಗಿದೆ ಎಂಬುವುದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿಯಲಿದೆ ಎಂದು ಹೇಳಿದ್ದಾರೆ.
ಗ್ಯಾಸ್ ಗೀಸರ್ ಬಳಸುವಾಗ ಜನರು ಎಚ್ಚರಿಕೆಯಿಂದ ಬಳಕೆ ಮಾಡಬೇಕು.ವೆಂಟಿಲೇಟರ್ ಇರುವ ಕಡೆ ಗ್ಯಾಸ್ ಗೀಸರ್ ಬಳಕೆ ಮಾಡಬೇಕು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಸಚಿವ ಕೆ.ವೆಂಕಟೇಶ್ ಮತ್ತಿತರ ಗಣ್ಯರು ಭೇಟಿ ನೀಡಿ ಮೃತರ ಹೆಣ್ಣು ಮಕ್ಕಳ ತಂದೆ ಅಲ್ತ್‌ಾ ಪಾಷಾ ರವರಿಗೆ ಸಾಂತ್ವನ ಹೇಳಿದರು.
