Thursday, October 23, 2025
Homeಇದೀಗ ಬಂದ ಸುದ್ದಿಹಾಸನಾಂಬೆ ದರ್ಶನೋತ್ಸವಕ್ಕೆ ವಿದ್ಯುಕ್ತ ತೆರೆ, 26 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿ ದರ್ಶನ

ಹಾಸನಾಂಬೆ ದರ್ಶನೋತ್ಸವಕ್ಕೆ ವಿದ್ಯುಕ್ತ ತೆರೆ, 26 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿ ದರ್ಶನ

Hasanamba Darshanotsav Ends today

ಹಾಸನ,ಅ.23- ವರ್ಷಕ್ಕೊಮೆ ದರ್ಶನ ಕರುಣಿಸುವ ಹಾಸನಾಂಬೆಯ ಸಾರ್ವಜನಿಕ ದರ್ಶನಕ್ಕೆ ವಿಧ್ಯುಕ್ತ ತೆರೆ ಬಿದ್ದಿದೆ.ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ತೆರೆದು 14 ದಿನ ದರ್ಶನ ನೀಡಿದ್ದು, ಇಂದು ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳ ಸಮುಖದಲ್ಲಿ ದೇಗುಲವನ್ನು ಬಂದ್‌ ಮಾಡಲಾಯಿತು. ಸಾರ್ವಜನಿಕ ದರ್ಶನಕ್ಕೆ ನಿನ್ನೆ ಕಡೆಯ ದಿನವಾಗಿದ್ದರಿಂದ ಮುಂಜಾನೆ ಯಿಂದಲೂ ದೇವಿ ದರ್ಶನಕ್ಕೆ ಭಕ್ತರ ದಂಡು ಹರಿದು ಬಂದಿತ್ತು.

ಲಕ್ಷಾಂತರ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದಿದ್ದಾರೆ. ಹಿಂದೆಂದೂ ಕಾಣದ ರೀತಿಯಲ್ಲಿ ಭಕ್ತರು ಆಗಮಿಸಿ, ಮಳೆಯ ನಡುವೆಯೂ ತಾಯಿಯನ್ನು ಕಣ್ತುಂಬಿ ಕೊಂಡಿದ್ದಾರೆ.
ಇದುವರೆಗೂ 26 ಲಕ್ಷಕ್ಕೂ ಹೆಚ್ಚು ಮಂದಿ ದೇವಿ ದರ್ಶನ ಪಡೆದಿದ್ದಾರೆ.

ಇತಿಹಾಸದಲ್ಲೇ ಮೊದಲು :
ಇತಿಹಾಸದಲ್ಲೇ ಮೊದಲ ಬಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದು, ಈ ಮೂಲಕ ಹೊಸ ದಾಖಲೆ ಬರೆದಿದೆ.ವರ್ಷಕ್ಕೊಮೆ ದರ್ಶನ ಕೊಡುವ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ. ಅ.10ರಿಂದ ಒಟ್ಟು 26ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ನೀಡಿದ್ದು, ಈ ಮೂಲಕ ಹೊಸ ದಾಖಲೆ ಬರೆದಿದೆ.

26 ಕೋಟಿ ರೂ. ಆದಾಯ:
ಹಾಸನಾಂಬೆ ದೇವಸ್ಥಾನಕ್ಕೆ 1,000, 300ರೂ. ಟಿಕೆಟ್‌ ಹಾಗೂ ಲಾಡು ಪ್ರಸಾದದಿಂದ ದೇಗುಲಕ್ಕೆ ಒಟ್ಟು 26 ಕೋಟಿ ರೂ. ಆದಾಯ ಬಂದಿದ್ದು, ನಿನ್ನೆ ಸಂಜೆ 7 ಗಂಟೆಗೆ ಸಾರ್ವಜನಿಕ ದರ್ಶನಕ್ಕೆ ಅದ್ಧೂರಿ ತೆರೆ ಬಿದ್ದಿದೆ.

RELATED ARTICLES

Latest News