ಹೈದರಾಬಾದ್,ಅ.26- ದೇಶವನ್ನೇ ಬೆಚ್ಚಿಬೀಳಿಸಿದ್ದ ಆಂಧ್ರಪ್ರದೇಶದ ಕರ್ನೂಲ್ ಬಳಿ ಸಂಭವಿಸಿದ ಭೀಕರ ಬಸ್ ದುರಂತಕ್ಕೆ 12 ಕೆವಿ ಸಾಮರ್ಥ್ಯದ ಬ್ಯಾಟರಿಗಳು ಸ್ಫೋಟಗೊಂಡಿದ್ದೇ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
20 ಪ್ರಯಾಣಿಕರು ಸಜೀವ ದಹನಗೊಂಡು, ಹಲವರು ಗಾಯಗೊಂಡಿದ್ದ ಈ ಘಟನೆಗೆ ಖಾಸಗಿ ವ್ಯಕ್ತಿಯೊಬ್ಬರು ದುಬಾರಿ ಬೆಲೆಯ ಸಾರ್ಟ್‌ಫೋನ್‌ಗಳನ್ನು ಸಾಗಿಸುತ್ತಿದ್ದರು. ಇದು ಸ್ಫೋಟಗೊಂಡಿದೇ ಘಟನೆಗೆ ಮತ್ತೊಂದು ಕಾರಣ ಎಂದು ತನಿಖೆಯಿಂದ ತಿಳಿದುಬಂದಿದೆ. ಘಟನೆ ನಡೆದ ನಂತರ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಎಫ್‌ಎಸ್‌ಎಲ್ ತನಿಖಾ ವರದಿ ಈವರೆಗೂ ಅಧಿಕೃತವಾಗಿ ಹೊರಬಂದಿಲ್ಲ. ಪ್ರಾಥಮಿಕ ಮೂಲಗಳ ಪ್ರಕಾರ ಬಸ್‌ಗೆ ಅಳವಡಿಸಿದ್ದ 12ಕೆವಿ ಸಾಮರ್ಥ್ಯದ ಬ್ಯಾಟರಿ ಮತ್ತು ಸಾರ್ಟ್‌ಫೋನ್ ಏಕಕಾಲಕ್ಕೆ ಸ್ಪೋಟಗೊಂಡಿದ್ದರಿಂದ 20 ಮಂದಿಯ ಜೀವ ಬಲಿ ತೆಗೆದುಕೊಂಡಿದೆ.ಅಪಘಾತಕ್ಕೂ ಮುನ್ನ ಅಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದ ದ್ವಿಚಕ್ರವಾಹನಕ್ಕೆ ಬಸ್ ಡಿಕ್ಕಿಯಾಗಿ ವಾಹನವನ್ನು ಕೆಳಗೆ ಎಳೆದುಕೊಂಡು ಹೋಗಿದ್ದರಿಂದ ಬೈಕ್‌ನ ಇಂಧನ ಟ್ಯಾಂಕ್ ಒಡೆದು ಬೆಂಕಿ ಹೊತ್ತಿಕೊಂಡಿತು. ಬಸ್‌ನಲ್ಲಿದ್ದ 19 ಪ್ರಯಾಣಿಕರು ಮತ್ತು ಬೈಕ್ ಸವಾರ ಸೇರಿದಂತೆ ಇಪ್ಪತ್ತು ಜನರು ಸಾವನ್ನಪ್ಪಿದ್ದರು.
ವಿಧಿವಿಜ್ಞಾನ ತಜ್ಞರ ಪ್ರಕಾರ, ಹೈದರಾಬಾದ್‌ನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಖಾಸಗಿ ಸ್ಲೀಪರ್‌ಬಸ್ ಸುಮಾರು 46 ಲಕ್ಷ ರೂ. ಮೌಲ್ಯದ 234 ಸಾರ್ಟ್‌ಫೋನ್‌ಗಳು ಇದ್ದವು. ಇವುಗಳನ್ನು ವ್ಯಾಪಾರಿಯೊಬ್ಬರು ಲಾಜಿಸ್ಟಿಕ್‌್ಸ ಸೇವೆಯ ಮೂಲಕ ಸಾಗಿಸುತ್ತಿದ್ದರು.ಬೆಂಕಿ ಪ್ರಾರಂಭವಾದ ನಂತರ ಸಾಧನಗಳೊಳಗಿನ ಲಿಥಿಯಂ-ಐಯಾನ್ ಬ್ಯಾಟರಿಗಳು ಸ್ಫೋಟಗೊಂಡು ಪ್ರಯಾಣಿಕರ ಕ್ಯಾಬಿನ್‌ನಾದ್ಯಂತ ವೇಗವಾಗಿ ಹರಡಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಬಸ್ಸಿನ ಮುಂಭಾಗದಲ್ಲಿ ಇಂಧನ ಸೋರಿಕೆ ಕಂಡುಬಂದಿದ್ದು, ಬೈಕ್ ವಾಹನದ ಕೆಳಗೆ ಸಿಲುಕಿಕೊಂಡ ನಂತರ ಬೆಂಕಿ ಹೊತ್ತಿಕೊಂಡಿದೆ.ಇದರ ಪರಿಣಾಮ ಉಂಟಾದ ಬೆಂಕಿ ಕಿಡಿಗಳು ಮತ್ತು ಇಂಧನ ಸೋರಿಕೆ ಬೆಂಕಿಗೆ ಹತ್ತಿಕೊಳ್ಳಲು ಕಾರಣವಾಯಿತು. ಅಲ್ಯೂಮಿನಿಯಂ ಶಾಖಕ್ಕೆ ಕರಗಿ, ಬೆಂಕಿಯ ವೇಗ ಹೆಚ್ಚಲು ಕಾರಣವಾಯಿತು ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
ಆಂಧ್ರಪ್ರದೇಶದ ಅಗ್ನಿಶಾಮಕ ಸೇವೆಗಳು ಮತ್ತು ವಿಧಿವಿಜ್ಞಾನ ಇಲಾಖೆಯ ತಜ್ಞರು ಸಲ್ಲಿಸಿರುವ ವರದಿಯ ಪ್ರಕಾರ, ಬಸ್ಸಿನ ಬ್ಯಾಟರಿ ಪ್ಯಾಕ್ ಜೊತೆಗೆ ಸಾರ್ಟ್‌ಫೋನ್ ಸರಕು ಬೆಂಕಿ ಹರಡಲು ಕಾರಣ ಎಂದು ದೃಢಪಡಿಸಿದ್ದಾರೆ.ಈ ಅವಘಡಕ್ಕೆ ಬಸ್‌ನಲ್ಲಿದ್ದ ಎರಡು 12 ಕೆವಿ ಬ್ಯಾಟರಿಗಳೇ ಕಾರಣ, ಸಾರ್ಟ್‌ಫೋನ್‌ಗಳ ಸರಕಲ್ಲ ಎಂದು ಹೇಳಿ, ಅವು ಹೆಚ್ಚಾಗಿ ಹಾಗೆಯೇ ಇದ್ದವು ಎಂದು ಕರ್ನೂಲ್ ರೇಂಜ್ ಡೆಪ್ಯೂಟಿ ಇನ್‌್ಸಪೆಕ್ಟರ್ ಜನರಲ್ (ಡಿಐಜಿ) ಕೋಯಾ ಪ್ರವೀಣ್ ಹೇಳಿದ್ದಾರೆ.
ಅದು (ದ್ವಿಚಕ್ರ ವಾಹನ ಇಂಧನ ಟ್ಯಾಂಕ್) ಬೆಂಕಿಗೆ ಪ್ರಮುಖ ಕಾರಣವಲ್ಲ. ಟ್ಯಾಂಕ್ ಸಿಡಿದು ಬೆಂಕಿ ನಿಖರವಾಗಿ ಮುಖ್ಯ ನಿರ್ಗಮನ ದ್ವಾರದಲ್ಲಿ ಕಾಣಿಸಿಕೊಂಡಿತು. ಮುಖ್ಯ ನಿರ್ಗಮನ ದ್ವಾರದ ಹಿಂದೆ ಬಸ್ ಬ್ಯಾಟರಿಗಳು, ಎರಡು 12 ಕೆವಿ ಬ್ಯಾಟರಿಗಳು ಇದ್ದವು. ಈ ಬ್ಯಾಟರಿಗಳು ಸ್ಫೋಟಗೊಂಡವು ಎಂದು ಸುದ್ದಿ ಸಂಸ್ಥೆಗೆ ಅವರು ತಿಳಿಸಿದ್ದಾರೆ.
ಈ ಎರಡು ಕಾರಣಗಳ ಹೊರತಾಗಿ, ಬಸ್ಸಿನಲ್ಲಿ ಲೋಹದ ಬಣ್ಣ ಸೇರಿದಂತೆ ಹೆಚ್ಚು ದಹನಕಾರಿ ವಸ್ತುಗಳನ್ನು ಅಳವಡಿಸಲಾಗಿತ್ತು, ಇದು ಬೆಂಕಿಯನ್ನು ಮತ್ತಷ್ಟು ಹೆಚ್ಚಿಸಿತು ಎಂದು ಡಿಐಜಿ ಪ್ರವೀಣ್ ಹೇಳಿದರು.
ಏತನಧ್ಯೆ ಸುಟ್ಟ ದೇಹಗಳ ಗುರುತುಗಳನ್ನು ಪತ್ತೆಹಚ್ಚಲು ಡಿಎನ್‌ಎ ಪರೀಕ್ಷೆ ನಡೆಯುತ್ತಿದ್ದು, ಸೋಮವಾರದೊಳಗೆ ಈ ಪ್ರಕ್ರಿಯೆಯು ಪೂರ್ಣಗೊಳ್ಳಬಹುದು.ಹೈದರಾಬಾದ್‌ನಿಂದ ಬೆಂಗಳೂರಿಗೆ ಹೋಗುತ್ತಿದ್ದ ಬಸ್‌ನಲ್ಲಿ 44 ಪ್ರಯಾಣಿಕರಿದ್ದರು. ಕೆಲವರು ಬೆಂಕಿಯಿಂದ ಪಾರಾಗಿದ್ದಾರೆ. ಪ್ರಯಾಣಿಕರ ಬಾಗಿಲಿನಿಂದ ಹಾರಿ ಬೆಂಕಿಯಿಂದ ಪಾರಾದ ಬಸ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ವಾಹನದೊಳಗೆ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಅರಿತುಕೊಂಡ ಲಕ್ಷ್ಮಯ್ಯ ಮತ್ತು ನಾರಾಯಣ, ಟೈರ್ ಬದಲಾಯಿಸಲು ಬಳಸುವ ರಾಡ್‌ನಿಂದ ಕಿಟಕಿ ಗಾಜುಗಳನ್ನು ಒಡೆಯಲು ಪ್ರಾರಂಭಿಸಿದರು, ಇದರಿಂದಾಗಿ ಕೆಲವು ಪ್ರಯಾಣಿಕರು ಬೆಂಕಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿದೆ.
ಕೆಲವು ಪ್ರೇಕ್ಷಕರು ಇನ್ನೂ ಕೆಲವು ಕಿಟಕಿ ಗಾಜುಗಳನ್ನು ಒಡೆದರು, ಇನ್ನು ಕೆಲವರು ಗಾಬರಿಗೊಂಡು ತಪ್ಪಿಸಿಕೊಳ್ಳಲು ಧಾವಿಸಿದ ಪ್ರಯಾಣಿಕರಿಂದ ಒಳಗಿನಿಂದ ಮುರಿದಿದ್ದಾರೆ. ಆದಾಗ್ಯೂ ಬೆಂಕಿಯು ಉರಿಯುತ್ತಲೇ ಇತ್ತು ಮತ್ತು ಇಡೀ ಬಸ್ಸನ್ನು ಆವರಿಸಿತ್ತು. ಇದರಿಂದ ಭಯಭೀತರಾದ ಲಕ್ಷ್ಮಯ್ಯ ಸ್ಥಳದಿಂದ ಪರಾರಿಯಾಗಿದ್ದ.
ಪೊಲೀಸರು ಕರ್ನೂಲ್‌ನಿಂದ ಆತನನ್ನು ಬಂಧಿಸಿದ್ದಾರೆ. ಈತಮ ವಿರುದ್ಧ ನಿರ್ಲಕ್ಷ್ಯ ಮತ್ತು ಅತಿ ವೇಗದ ಚಾಲನೆಗಾಗಿ ಬಿಎನ್‌ಎಸ್ ಕಾಯ್ದೆಯ ಸೆಕ್ಷನ್ 125 (ಎ) (ಮಾನವ ಜೀವಕ್ಕೆ ಅಪಾಯವನ್ನುಂಟುಮಾಡುವುದು) ಮತ್ತು 106 (1) (ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗುವುದು) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ .
