ಮಾಲೂರು,ಅ.27- ಮನೆಯ ಮುಂದೆ ಪತ್ನಿ, ಮಕ್ಕಳ ಎದುರೇ ಬಾರ್ ಕ್ಯಾಷಿಯರ್ನನ್ನುಭೀಕರವಾಗಿ ಕೊಲೆ ಮಾಡಿ ದುಷ್ಕರ್ಮಿ ಪರಾರಿಯಾಗಿರುವ ಘಟನೆ ತಾಲೂಕಿನ ಲಕ್ಕೂರು ಗ್ರಾಮದಲ್ಲಿ ರಾತ್ರಿ ನಡೆದಿದೆ.
ಹಾಸನ ಮೂಲದ ಕುಮಾರ್ (45) ಕೊಲೆಯಾದವರು. ಮಾಲೂರು ಪಟ್ಟಣದ ಅಶೋಕ ವೈನ್್ಸನಲ್ಲಿ ಕ್ಯಾಷಿಯರ್ರಾಗಿ ಕೆಲಸಮಾಡುತ್ತಿದ್ದರು. ಬಾರ್ಗೆ ಬಂದಿದ್ದವರೇ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ನಿನ್ನೆ ಸಂಜೆ ಕುಮಾರ್ ಅವರು ಕ್ಯಾಷಿಯರ್ ಕೌಂಟರ್ನಲ್ಲಿದ್ದರು. ಆ ವೇಳೆ ಬಾರ್ಗೆ ಬಂದ ಆರೋಪಿಗಳು ಮದ್ಯ ಪಡೆದಿದ್ದು, ಮಿಕ್ಸ್ಚರ್ ಕೊಡುವಂತೆ ಕುಮಾರ್ಗೆ ಧಮಕಿ ಹಾಕಿದ್ದರು. ದುಡ್ಡು ಕೊಡಿ ಎಂದು ಹೇಳಿದಾಗ ಕುಮಾರ್ ಜೊತೆ ಗಲಾಟೆ ನಡೆದು ಅಲ್ಲಿದ್ದವರು ಸಮಾಧಾನ ಮಾಡಿ ಜಗಳ ಬಿಡಿಸಿದ್ದರು.
ರಾತ್ರಿ ಸುಮಾರು 11 ಗಂಟೆಗೆ ಬಾರ್ಬಂದ್ ಮಾಡಿ ಮನೆಗೆ ತೆರಳುತ್ತಿದ್ದ ಕುಮಾರ್ನನ್ನು ಆರೋಪಿ ಸುಭಾಷ್ ಎಂಬಾತ ಹಿಂಬಾಲಿಸಿದ್ದ. ಕುಮಾರ್ ಅವರು ಮನೆ ಬಳಿ ಬಳಿ ಹೋಗುತ್ತಿದ್ದಂತೆ ಅವರ ಮೇಲೆರಗಿದ ಸುಭಾಷ್ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದಾನೆ.
ಇದನ್ನು ಗಮನಿಸಿದ ಕುಮಾರ್ ಅವರ ಪತ್ನಿ, ಮಕ್ಕಳು ಬಿಡಿಸಲು ಹೋದರೂ ಪ್ರಯೋಜನವಾಗಿಲ್ಲ. ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡು ರಕ್ತ ಸ್ರಾವವಾಗಿ ಮನೆ ಮುಂದೆಯೇ ಕೊನೆಯುಸಿರೆಳೆದಿದ್ದಾರೆ.
ಮಾಹಿತಿ ತಿಳಿದ ಮಾಲೂರು ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ ತನಿಖೆ ಕೈಗೊಂಡು, ಆರೋಪಿ ಸುಭಾಷ್ ಪತ್ತೆಗೆ ಹುಡುಕಾಟ ಆರಂಭಿಸಿದ್ದಾರೆ.
