ಬೆಳಗಾವಿ,ಅ.27- ಕೇವಲ 2000ರೂಗೆ ಸ್ನೇಹಿತನನ್ನೇ ಕೊಲೆ ಮಾಡಿದ ಆರೋಪಿ ಪೊಲೀಸ್ ಠಾಣೆ ಹೋಗಿ ಶರಣಾದ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗಿರಿಯಾಲ ಗ್ರಾಮದಲ್ಲಿ ಘಟನೆ ನಡೆದಿದೆ.ಗಿರಿಯಾಲ ಗ್ರಾಮದ ಮಂಜುನಾಥ ಗೌಡರ (30) ಕೊಲೆಯಾದ ದುರ್ದೈವಿಯಾಗಿದ್ದು ,ದಯಾನಂದ ಗುಂಡ್ಲೂರ ಬಂಧಿತವ ಆರೋಪಿ.
ಕಳೆದ ವಾರ ದಯಾನಂದ 2 ಸಾವಿರ ಹಣ ಸಾಲವನ್ನಾಗಿ ಸ್ನೇಹಿತ ಮಂಜುನಾಥ ಬಳಿ ಪಡೆದಿದ್ದ. ಒಂದು ವಾರದೊಳಗೆ ಹಣ ಮರಳಿಸುವುದಾಗಿ ಹೇಳಿದ್ದ. ಆದರೆ ಇದರ ಬಗ್ಗೆ ಮಾತನಾಡದೆ ದಯಾನಂದ ಸುಮನಾಗಿದ್ದ.
ನೆನ್ನೆ ರಾತ್ರಿ ಸಾಲದ ಹಣ ನೀಡುವಂತೆ ಮಂಜುನಾಥ ಕೇಳಿದ್ದ ಆದರೆ ದಯಾನಂದ ಜಗಳ ಆರಂಭಿಸಿದ್ದ. ವಾಗ್ವಾದ ನಡೆದು ಇಬ್ಬರ ಜಗಳ ವಿಕೋಪಕ್ಕೆ ತಿರುಗಿತ್ತು.ಇಬ್ಬರನ್ನು ಬಿಡಿಸಿ ಗ್ರಾಮಸ್ಥರು ಮನೆಗೆ ಕಳಿಸಿದ್ದರು.ಆದರೆ ರಾತ್ರಿ ನಡೆದ ಜಗಳದ ಸಿಟ್ಟಿನಲ್ಲೇ ಬೆಳಗಿನ ಜಾವ ಎದುರಾದ ಮಂಜುನಾಥನ ಮೇಲೆ ಕೊಡ್ಲಿಯಿಂದ ಹೊಡೆದು ದಯಾನಂದ ಪರಾರಿಯಾಗಿದ್ದಾನೆ. ತೀವ್ರ ಗಾಯಗೊಂಡ ಮಂಜುನಾಧ ರಕ್ತಸ್ರಾವದಿಂದ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಉಸಿರು ಚಲ್ಲಿದ್ದಾನೆ.
ಮೊಂಜುನಾಥ ಸಾವನ್ನಪ್ಪಿದ ವಿಷಯ ತಿಳಿಯುತ್ತಿದಂತೆ ಪೊಲೀಸ್ ಠಾಣೆಗೆ ಬಂದು ದಯಾನಂದ ಶರಣಾಗಿದ್ದಾನೆ. ಬೈಲಹೊಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
