Thursday, October 30, 2025
Homeರಾಜ್ಯವಿದ್ಯಾರ್ಥಿಗಳ ಉತ್ತೀರ್ಣ ಕನಿಷ್ಠ ಅಂಕ ಇಳಿಕೆ ಬೇಡ : ಸಭಾಪತಿ ಬಸವರಾಜ ಹೊರಟ್ಟಿ

ವಿದ್ಯಾರ್ಥಿಗಳ ಉತ್ತೀರ್ಣ ಕನಿಷ್ಠ ಅಂಕ ಇಳಿಕೆ ಬೇಡ : ಸಭಾಪತಿ ಬಸವರಾಜ ಹೊರಟ್ಟಿ

should not reduce the minimum passing marks: Speaker Basavaraj Horatti

ಬೆಂಗಳೂರು,ಅ.30- ಶಾಲಾ ವಿದ್ಯಾರ್ಥಿಗಳಿಗೆ ಕನಿಷ್ಠ ಉತ್ತೀರ್ಣ ಅಂಕಗಳನ್ನು 35ಕ್ಕೆ ತರುವಂತೆ ರಾಜ್ಯ ಸರ್ಕಾರಕ್ಕೆ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿಯವರು ಆಗ್ರಹಿಸಿದ್ದಾರೆ.
33 ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಉತ್ತೀರ್ಣರೆಂದು ಪರಿಗಣಿಸಲಾಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ಅವರು ಈ ಹಿಂದೆ ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿರುವ ಹೊರಟ್ಟಿಯವರು 33 ಅಂಕದ ಬದಲಿಗೆ 35 ಅಂಕಗಳನ್ನೇ ನಿಗದಿಪಡಿಸಬೇಕು. ವಿದ್ಯಾರ್ಥಿಗಳ ಭವಿಷ್ಯತ್ತಿನ ದೃಷ್ಟಿಯಿಂದ ಹಿಂದಿದ್ದ ನಿಯಮವೇ ಉತ್ತಮ ಎಂದು ಅವರು ಹೇಳಿದ್ದಾರೆ. ಜೊತೆಗೆ, ಪ್ರೌಢಶಾಲೆಗಳು, ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಶಿಕ್ಷಕರ ಹ್ದುೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

- Advertisement -

ಬಂಗಾರಪ್ಪ ಅವರ ನಿರ್ಧಾರ ದುರದೃಷ್ಟಕರ.ಸ್ಪರ್ಧಾತಕ ಜಗತ್ತಿನಲ್ಲಿ ಯಾವುದೇ ವಿದ್ಯಾರ್ಥಿ ಪರೀಕ್ಷೆಗಳನ್ನು ಎದುರಿಸುವುದು ಮುಖ್ಯ. ಅಂಕಗಳನ್ನು ಗಳಿಸುವುದು ಪರೀಕ್ಷೆಗಳ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದ್ದರೂ, ಇದು ವಿದ್ಯಾರ್ಥಿಯು ತನ್ನ ಗಮನ, ಧೈರ್ಯ, ಸರಣಶಕ್ತಿ, ಕಲಿಕಾ ಸಾಮರ್ಥ್ಯ ಮತ್ತು ಇತರ ಸಮಗ್ರ ಬೆಳವಣಿಗೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.ವಿದ್ಯಾರ್ಥಿಯ ಪ್ರತಿಭೆಯನ್ನು ಹೊರತರಲು ಸಹಾಯ ಮಾಡುತ್ತದೆ. ಇದು ಅವರ ಭವಿಷ್ಯಕ್ಕೆ ಸಹಾಯ ಮಾಡುತ್ತದೆ. ಈ ನಿಟ್ಟಿನಲ್ಲಿ, 35 ಅಂಕಗಳನ್ನು ಬಹಳ ಹಿಂದಿನಿಂದಲೂ ನಿಗದಿಪಡಿಸಲಾಗಿದೆ. ಇದು ವೈಜ್ಞಾನಿಕ ಮಾನದಂಡವಾಗಿದೆ. ಅದನ್ನು 33 ಅಂಕಗಳಿಗೆ ಇಳಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಬೆಂಗಳೂರು: ಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಇದ್ದ ಕನಿಷ್ಠ ಅಂಕಗಳನ್ನು 33ಕ್ಕೆ ಇಳಿಸುವ ಪ್ರಸ್ತಾವನೆಯನ್ನು ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ರಾಜ್ಯ ಸರ್ಕಾರದ ಮುಂದಿಟ್ಟಿದ್ದಾರೆ. ಆದರೆ, ಈ ಪ್ರಸ್ತಾವನೆಗೆ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿಯವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವುದರಿಂದ ನಾನಾ ರೀತಿಯ ವಿಚಾರಗಳನ್ನು ಕಲಿಯುತ್ತಾರೆ. ಅಲ್ಲಿ ಅವರ ಅಧ್ಯಯಶೀಲತೆ, ಕಲಿಕಾ ಕೌಶಲ್ಯ, ಏಕಾಗ್ರತೆ, ಧೈರ್ಯ, ಜ್ಞಾಪಕ ಶಕ್ತಿ, ತಿಳಿದುಕೊಂಡಿರುವ ವಿಷಯಗಳನ್ನು ಸ್ಫೋಟವಾಗಿ – ಪರಿಣಾಮಕಾರಿಯಾಗಿ ಬರೆಯುವುದು – ಇಂಥ ಎಲ್ಲಾ ವಿಷಯಗಳು ವಿದ್ಯಾರ್ಥಿಗಳ ಮುಂದಿನ ಜೀವನಕ್ಕೆ ಉತ್ತಮ ಕಾಣಿಕೆಯನ್ನು ನೀಡುತ್ತದೆ.

ಹೀಗಿರುವಾಗ ನಾವು ಅಂಕಗಳನ್ನು ಇಳಿಕೆ ಮಾಡಿ ಅವರಿಗೆ ಪರೀಕ್ಷೆಯೆಂದರೆ ಅಸಡ್ಡೆ ಎಂಬಂಥ ಭಾವನೆಯನ್ನು ತರಬಾರದು. ಪಾಸಿಂಗ್‌ ಅಂಕಗಳು ಹೆಚ್ಚಿದ್ದಾಗ ಅವರು ಹೆಚ್ಚೆಚ್ಚು ಏಕಾಗ್ರತೆಯಿಂದ ಕಲಿತು ಶ್ರದ್ಧೆಯಿಂದ ಬರುತ್ತಾರೆ. ಪರೀಕ್ಷೆಗಳ ಬಗ್ಗೆ ಒಂದು ಶಿಸ್ತು ಮೂಡುತ್ತದೆ. ಹಾಗಾಗಿ, ಅಂಕಗಳನ್ನು ಇಳಿಕೆ ಮಾಡಬಾರದು ಎಂದು ಹೊರಟ್ಟಿಯವರು ಪತ್ರದಲ್ಲಿ ಕೋರಿದ್ದಾರೆ.

ಹ್ದುೆ ಭರ್ತಿ ಮಾಡಿ:
ಇದೇ ವೇಳೆ, ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಶಿಕ್ಷಕರ ಹ್ದುೆಗಳನ್ನು ಭರ್ತಿ ಮಾಡುವಂತೆ ಪತ್ರದಲ್ಲಿ ಆಗ್ರಹಿಸಿರುವ ಹೊರಟ್ಟಿಯವರು, ಹಿಂದೆ ನಾನು ಶಿಕ್ಷಣ ಸಚಿವನಾಗಿದ್ದಾಗ ಶಿಕ್ಷಕರ ನೇಮಕಾತಿ ಮಾಡ್ದೆಿ. ಈಗ ಸಾವಿರಾರು ಸಂಖ್ಯೆಯಲ್ಲಿ ಶಿಕ್ಷಕರ ನೇಮಕಾತಿ ಆಗಬೇಕಿದೆ. ವಿದ್ಯಾರ್ಥಿಗ ಸಂಖ್ಯೆ ಹೆಚ್ಚಿರುವುದರಿಂದ ಅದಕ್ಕೆ ಸೂಕ್ತವಾದ ಸಂಖ್ಯೆಯಲ್ಲಿ ಶಿಕ್ಷಕರು ಬೇಕು. ಹಾಗಾಗಿ, ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಬೇಗನೇ ಆರಂಭಿಸಬೇಕು ಎಂದು ಮಧು ಬಂಗಾರಪ್ಪನವರನ್ನು ಕೋರಿದ್ದಾರೆ.

- Advertisement -
RELATED ARTICLES

Latest News