ಟ್ಯಾಂಪಾ, ಅ.31– ಮೆಕ್ಸಿಕೋದಿಂದ ಬಂದ ಜೆಟ್‌ಬ್ಲೂ ವಿಮಾನ ಇಲ್ಲಿ ತುರ್ತು ಭೂಸ್ಪರ್ಶ ಮಾಡಿ ಹಠಾತ್ ಅಸ್ವಸ್ಥಗೊಂಡ ಹಲವು ಪ್ರಯಾಣಿಕರನ್ನು ಕೂಡಲೆ ಆಸ್ಪತ್ರೆಗೆ ಸಾಗಿಸಿದ ಘಟನೆ ನಡೆದಿದೆ.
ಕ್ಯಾನ್‌ಕನ್‌ನಿಂದ ಬಂದ ವಿಮಾನವು ನ್ಯೂಜೆರ್ಸಿಯ ನ್ಯೂವಾರ್ಕ್‌ಗೆ ಪ್ರಯಾಣಿಸುತ್ತಿದ್ದಾಗ ತಾಂತ್ರಿಕ ದೋಷದಿಂದ ಎತ್ತರದಿಂದ ದಿಢೀರ್ ಕುಸಿತ ಕಂಡಿದೆ ಎಂದು ಫೆಡರಲ್ ಏವಿಯೇಷನ್ ಅಡಿನಿಸ್ಟ್ರೇಷನ್ ಹೇಳಿಕೆಯಲ್ಲಿ ತಿಳಿಸಿದೆ.
ಎಫ್‌ಎಎ ಪ್ರಕಾರ, ಏರ್‌ಬಸ್ ಎ 320 ಅನ್ನು ಮಧ್ಯಾಹ್ನ 2 ಗಂಟೆ ಸುಮಾರಿಗೆ ಟ್ಯಾಂಪಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿ ಎಷ್ಟು ಜನರಿದ್ದರು ಮತ್ತು ಎಷ್ಟು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂಬುದು ತಕ್ಷಣ ಸ್ಪಷ್ಟವಾಗಿಲ್ಲ.
ಏರ್ ಟ್ರಾಫಿಕ್ ಆಡಿಯೋ ಗಾಯಗಳ ಬಗ್ಗೆ ವರದಿ ಮಾಡುವ ರೇಡಿಯೋ ಕರೆಯನ್ನು ಸೆರೆಹಿಡಿದಿದೆ: ಕನಿಷ್ಠ ಮೂರು ಜನರು ಗಾಯಗೊಂಡಿದ್ದಾರೆ. ಕೆಲವರನ್ನು ಆಸ್ಪತ್ರೆಗಳಿಗೆ ಕರೆದೊಯ್ಯುವ ಮೊದಲು ವೈದ್ಯಕೀಯ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿ ಸದಸ್ಯರನ್ನು ಪರಿಶೀಲಿಸಿದ್ದಾರೆ ಎಂದು ಜೆಟ್‌ಬ್ಲೂ ವರದಿ ಮಾಡಿದೆ.
ನಮ ತಂಡವು ವಿಮಾನವನ್ನು ತಪಾಸಣೆ ನಡೆಸುತ್ತಿದೆ, ಕಾರಣವನ್ನು ನಿರ್ಧರಿಸಲು ನಾವು ಸಂಪೂರ್ಣ ತನಿಖೆ ನಡೆಸುತ್ತೇವೆ ಎಂದು ಜೆಟ್‌ಬ್ಲೂ ಹೇಳಿಕೆ ತಿಳಿಸಿದೆ. ನಮ ಗ್ರಾಹಕರು ಮತ್ತು ಸಿಬ್ಬಂದಿ ಸದಸ್ಯರ ಸುರಕ್ಷತೆಯು ಯಾವಾಗಲೂ ನಮ ಮೊದಲ ಆದ್ಯತೆಯಾಗಿದೆ ಎಂದು ಹೇಳಿದೆ.

