ಬೆಂಗಳೂರು, ಅ.31- ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ, ವಿಧಾನಪರಿಷತ್ ಸದಸ್ಯ ಯತೀಂದ್ರ ಲಂಚ ಪಡೆದುಕೊಂಡ ಕೆಲಸ ಮಾಡಿಕೊಡುತ್ತಿದ್ದಾರೆ. ಸಿಎಂ ಮನೆಯನ್ನೇ ಭ್ರಷ್ಟಾಚಾರ ಅವರ ಮೂಗಿನ ನೇರಕ್ಕೆ ನಡೆಯುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.
ಮಗಳ ಶವ ಪರೀಕ್ಷೆಗೂ ಲಂಚ ಪಡೆದ ಪ್ರಕರಣದಿಂದ ಕರ್ನಾಟಕದ ಮಾನ ರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ. ರಾಜ್ಯದಲ್ಲಿ ಚಾವತಾರ ತಾಂಡವವಾಡುತ್ತಿದೆ. ಅಧಿಕಾರಿಗಳು ಹಣ ಕೊಟ್ಟು ಪೋಸ್ಟಿಂಗ್ ಮಾಡಿಕೊಳ್ಳುತ್ತಿದ್ದಾರೆ. ಲಂಚವಿಲ್ಲದೆ ಈ ಸರ್ಕಾರದಲ್ಲಿ ಏನೂ ನಡೆಯುವುದಿಲ್ಲ ಎಂದು ದೂರಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ಮತ್ತು ಲಂಚಿ ಸಿದ್ದರಾಮಯ್ಯನವರ ಮೂಗಿನ ನೇರಕ್ಕೆ ನಡೆಯುತ್ತಿದೆ. ಇಂದು ಸಿಎಂ ಮನೆಗೆ ನೀವು ಹಣವಿಲ್ಲದೆ ಹೋದರೆ ಯಾವ ಕೆಲಸವೂ ನಡೆಯುವುದಿಲ್ಲ. ಅವರ ಮಗ ಲಂಚ ಪಡೆದುಕೊಂಡು ಯಾವ ಕೆಲಸವನ್ನಾದರೂ ಮಾಡಿಕೊಡುತ್ತಾರೆ. ಇದು ಲಂಚಾವತಾರ ಸರ್ಕಾರ ಎಂದು ಆರೋಪ ಮಾಡಿದರು.
ಸಹಾರ ವಿಧಾನಸಭಾ ಚುನಾವಣೆಗೆ ರಾಜ್ಯದ ಜನರಿಂದ ಲೂಟಿ ಮಾಡುವ ಕೆಲಸವಾಗುತ್ತಿದೆ. ಇದರ ಬಗ್ಗೆ ನಾವು ಮಾತನಾಡಿದರೆ ಕೆಲವರು ನಮ್ಮ ಮೇಲೆ ವ್ಯಂಗ್ಯವಾಗಿ ಮಾತನಾಡುತ್ತಾರೆ. ಇದ್ದುದ್ದನ್ನು ಇದ್ದಂಗೆ ಹೇಳಿದರೆ ಇವರಿಗೇಕೆ ಕಷ್ಟ ಎಂದು ಪ್ರಶ್ನೆ ಮಾಡಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಗೃಹ ಸಚಿವರು ಇದ್ದಾರೋ ಇಲ್ಲವೋ ಗೊತ್ತಿಲ್ಲ ಅವರಿಗೆ ಏನೇ ಕೇಳಿದರೂ ಗೊತ್ತಿಲ್ಲ. ಗೊತ್ತಿಲ್ಲ ಅನ್ನೋ ಅವರ ಸಿದ್ದ ಉತ್ತರ ನೀಡುತ್ತಾರೆ. ಪೊಲೀಸರ ಟೋಪಿ ಬದಲಾಯಿಸುವ ಯೋಚನೆ ಮಾಡುತ್ತಾರೆ. ಕಾನೂನು ಕಾಪಾಡುವ ಯೋಚನೆ ಇಲ್ಲ ಎಂದು ಕಿಡಿಕಾರಿದರು.
ಸಿಎಂ ಆಕಾಶದಲ್ಲಿ ಓಡಾಡುತ್ತಿದ್ದಾಎರೆ, ನೆಲದಲ್ಲಿ ಏನಾಗುತ್ತಿದೆ ಎಂಬುದು ಅವರಿಗೂ ಗೊತ್ತಿಲ್ಲ. ಇದರ ಪರಿಣಾಮ ಹೆಣ್ಣುಮಕ್ಕಳ ಅತ್ಯಾಚಾರ, ಕೊಲೆ ಹೆಚ್ಚಾಗಿದೆ. ಅಧಿಕಾರಿಗಳು ವರ್ಗಾವಣೆಗೆ ಹಣ ಕೊಡುತ್ತಿದ್ದಾರೆ. ಹಣ ಎಲ್ಲಿ ಸಿಗುತ್ತದೆ ಟ್ರಾನ್ಸ್ಫರ್ ಮಾಡಲು ಎಂದು
ಪ್ರಶ್ನಿಸಿದರು.
ಸಿಎಂ ಅವರ ತವರು ಜಿಲ್ಲೆ ಮೈಸೂರಿನಲ್ಲೇ ಬಾಲಕಿ ಅತ್ಯಾಚಾರ, ಹುಬ್ಬಳ್ಳಿಯಲ್ಲಿ ನೇಹಾ ಕೊಲೆ ಆಗಿದೆ. ಬೆಳಗಾವಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿ ದೌರ್ಜನ್ಯ ನಡೆಸಲಾಗಿದೆ. ಉಪನ್ಯಾಸಕರು ಅತಿಥಿ ಉಪನ್ಯಾಸಕಿ ಮೇಲೆ ಅತ್ಯಾಚಾರ ಮಾಡುತ್ತಾರೆ. ಮಲತಂದೆ ಮಗಳ ಮೇಲೆಯೇ ಅತ್ಯಾಚಾರ ಮಾಡುತ್ತಾನೆ, ಬಿಹಾರದ ಕುಟುಂಬ, ಒರಿಸ್ಸಾದ ಕುಟುಂಬಗಳ ಮಕ್ಕಳನ್ನು ಎತ್ತಿಕೊಂಡು ಹೋಗಿ ಅತ್ಯಾಚಾರ ಮಾಡುತ್ತಾರೆ. ದುರುಳರಿಗೆ ಇಷ್ಟು ಧೈರ್ಯ ಹೇಗೆ ಬಂತು ಅಲ್ಲಿನ ಸರ್ಕಾರ ಸತ್ತಿದೆ, ಅದಕ್ಕೆ ಅತ್ಯಾಚಾರಿಗಳಿಗೆ ಅಷ್ಟೊಂದು ಧೈರ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳ ಆತ್ಮಹತ್ಯೆ ನಡೆಯುತ್ತಿದೆ. ಗುತ್ತಿಗೆದಾರರು ಕಮೀಷನ್ ಆರೋಪ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಹೆಣ್ಣುಮಕ್ಕಳ ಪ್ರಾಣ, ಮಾನಕ್ಕೆ ಗ್ಯಾರಂಟಿ.ಯಾರು ಇಷ್ಟು ದುರ್ಬಲ ಗೃಹಮಂತ್ರಿ ಇಟ್ಟುಕೊಂಡು ಹೇಗೆ ರಾಜ್ಯ ನಡೆಸುತ್ತಿದ್ದಾರೆ ಎಂದು ಗುಡುಗಿದರು.
ಬಜರಂಗದಳದ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಆಯಿತು. ಎನ್ ಐಎ ವರದಿ ಬಂದಿದೆ. ಧರ್ಮ, ಜಾತಿ ಹೆಸರಲ್ಲಿ ಕೊಲೆಗಡುಕರ ರಕ್ಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಮಹಿಳೆಯರಿಗೆ ರಕ್ಷಣೆ ಕೊಡಿ. ನಿಮ್ಮ ಕುರ್ಚಿ ಕಲಹ ದೂರ ಇಡಿ. ಯಾರನ್ನು ಸಿಎಂ ಮಾಡುತ್ತೀರೋ ನಮಗೆ ಗೊತ್ತಿಲ್ಲ. ಯಾರಾದರೂ ಸಿಎಂ ಆಗಿ ಮೊದಲು ಮಹಿಳೆಯರಿಗೆ ರಕ್ಷಣೆ ಕೊಡಿ ಎಂದು ಕರಂದ್ಲಾಜೆ ಆಗ್ರಹಿಸಿದರು.

