ಬೆಂಗಳೂರು,ನ.2– ಒಂದು ವೇಳೆ ಕೇಂದ್ರ ಸಾರಿಗೆ ಮತ್ತು ಭೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಬೆಂಗಳೂರಿನಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಟನಲ್ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂದರೆ ಸರ್ಕಾರ ಇದರಿಂದ ಹಿಂದೆ ಸರಿಯಲಿದೆಯೇ ಎಂದು ಸಂಸದ ತೇಜಸ್ವಿ ಸೂರ್ಯ ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರು ರಕ್ಷಿಸಿ- ಸುರಂಗ ರಸ್ತೆ ನಿಲ್ಲಿಸಿ ಎಂಬ ಘೋಷಣೆಯೊಂದಿಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್, , ಶಾಸಕ ಸಿ.ಕೆ ರಾಮಮೂರ್ತಿ ಸೇರಿದಂತೆ ಮತ್ತಿತರರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಟನಲ್ ಯೋಜನೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅನುಮತಿ ಕೊಟ್ಟಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ ಎಂದರು.
ನಾನು ಈ ಯೋಜನೆ ಕುರಿತು ಖುದ್ದು ಗಡ್ಕರಿ ಅವರಿಗೆ ಮಾಹಿತಿ ನೀಡಿದಾಗ ಇದಕ್ಕೆ ಅವರು ಆಶ್ಚರ್ಯ ವ್ಯಕ್ತಪಡಿಸಿದರು. ಆದರೆ ನಮ ಡಿಸಿಎಂ ಶಿವಕುಮಾರ್ ಅವರು ಯೋಜನೆಗೆ ಅನುಮತಿ ನೀಡಲಾಗಿದೆ ಎಂದು ಹೇಳುತ್ತಿದ್ದಾರೆ. ಒಂದು ವೇಳೆ ಅವರು ಅನುಮತಿ ನೀಡದಿದ್ದರೆ ನೀವು ಹಿಂದೆ ಸರಿಯುತ್ತೀರಾ ಎಂದು ಮರುಪ್ರಶ್ನೆ ಹಾಕಿದರು.
ಇದೇ ವೇಳೆ ತೇಜಸ್ವಿ ಸೂರ್ಯ ಅವರು ಗಡ್ಕರಿ ಜೊತೆ ಮಾತುಕತೆ ನಡೆಸಿದ ವಿಡಿಯೋವನ್ನು ಸಹ ಸಾರ್ವಜನಿಕರ ಮುಂದೆ ಪ್ರದರ್ಶನ ಮಾಡಿದರು. ಟನಲ್ ರಸ್ತೆಯ ವಿರುದ್ಧ ನಾವು ವಿರೋಧ ಮಾಡಿದ್ದೇವೆ. ಈ ರಸ್ತೆ ಶ್ರೀಮಂತರಿಗೋಸ್ಕರ ಮಾಡಿರುವುದು. ಬೆಂಗಳೂರಿನಲ್ಲಿ ಶೇ.12ರಷ್ಟು ಜನರ ಬಳಿ ಮಾತ್ರ ಕಾರು ಇದೆ. ಟನಲ್ ರಸ್ತೆಯ ಪ್ರವೇಶ, ನಿರ್ಗಮನ ಲಾಲ್‌ಬಾಗ್‌ನ ಎಡೆ ಇದ್ದ ಹಾಗೆ. ಯಾವ ಇಲಾಖೆಯಿಂದಲೂ ಅನುಮತಿ ಪಡೆದಿಲ್ಲ. ಈ ಯೋಜನೆ ಮಾಡಿ ಬೆಂಗಳೂರಿನ ಆರ್ಥಿಕ ಪರಿಸ್ಥಿತಿಯನ್ನು ಪಾತಾಳಕ್ಕೆ ಇಳಿಸಲು ಹೊರಟ್ಟಿದ್ದಾರೆ ಎಂದು ದೂರಿದರು.
ಇದು ತೇಜಸ್ವಿ ಸೂರ್ಯ ವಿರೊಧ ಮಾಡುತ್ತಿರುವುದಷ್ಟೇ ಅಲ್ಲ ಬೆಂಗಳೂರಿನ ಜನತೆಯೇ ವಿರೋಧ ಮಾಡುತ್ತಿದೆ. ನಾವು ಕೇಳುವ ಪ್ರಶ್ನೆಗಳಿಗೆ ಅಧಿಕಾರಿಗಳ ಬಳಿ ಉತ್ತರ ಇಲ್ಲ. ನ್ಯಾಯಾಲಯ ಕೇಳುವ ಪ್ರಶ್ನೆಗಳಿಗೆ ಅಧಿಕಾರಿಗಳು ಹೇಗೆ ಉತ್ತರ ಕೊಡುತ್ತಾರೆ ನೋಡಬೇಕು ಎಂದರು.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಬೇರೆ ಯೋಜನೆ ಬಗ್ಗೆ ಮಾತಾಡಿರುವ ವಿಡಿಯೋವನ್ನು ಹಿಂದೆಮುಂದೆ ಮಾಡಿ ಗಡ್ಕರಿ ಅವರೇ ಹೇಳಿದ್ದಾರೆಎಂದು ವದಂತಿ ಹಬ್ಬಿಸುತ್ತಿದ್ದಾರೆ. ಈ ಯೋಜನೆ ಬಗ್ಗೆ ಗಡ್ಕರಿ ಅವರಿಗೆ ನಾನು ತಿಳಿಸಿದಾಗ ಗಾಬರಿಯಾದರು. ಈಗ ಗಡ್ಕರಿ ಗೆಡ್ಕರಿ ಅವರು ವಿರೋಧ ಮಾಡಿದರೆ ಯೋಜನೆ ನಿಲ್ಲಿಸುತ್ತಾರೆಯೇ ಎಂದು ತೇಜಸ್ವಿ ಮರು ಪ್ರಶ್ನೆ ಮಾಡಿದರು.
