ಕೋಲ್ಕತ್ತಾ, ನ 3– ನಿವಾಸಕ್ಕೆ ನುಗ್ಗಿ ಪಶ್ಚಿಮ ಬಂಗಾಳದ ಮಾಜಿ ಸಚಿವ ಹಾಗು ಹಬ್ರಾ ಕ್ಷೇತದ ತೃಣಮೂಲ ಕಾಂಗ್ರೆಸ್ ಶಾಸಕ ಜ್ಯೋತಿಪ್ರಿಯೋ ಮಲ್ಲಿಕ್ ಅವರ ಮೇಲೆ ಯುವಕನೊಬ್ಬ ಹಲ್ಲೆ ನಡೆಸಿದ್ದಾನೆ.
ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಆರೋಪಿ ಶಾಸಕರ ನಿವಾಸಕ್ಕೆ ನುಗ್ಗಿ ಇದ್ದಕ್ಕಿದ್ದಂತೆ ಶಾಸಕರ ಮೇಲೆ ದಾಳಿ ಮಾಡಿ ಹೊಟ್ಟೆಯ ಕೆಳಭಾಗಕ್ಕೆ ಗುದ್ದಿದ್ದಾನೆ. ಏಕಾಏಕಿ ಹಲ್ಲೆಯಿಂದ ಮಲ್ಲಿಕ್ ದಿಗ್ಭ್ರಮೆಗೊಂಡ ಕಿರುಚಿಕೊಂಡಿದ್ದಾರೆ.ಗಲಾಟೆ ಸದಸು ಕೇಲುತ್ತಿದ್ದಂಭದ್ರತಾ ಸಿಬ್ಬಂದಿ ಧಾವಿಸಿ ಯುವಕನನ್ನು ತಡೆದಿದ್ದಾರೆ.
ನಂತರ ಅತನನ್ನು ಬಿಧಾನ್ನಗರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.ಆರೋಪಿ ಉತ್ತರ 24 ಪರಗಣ ಜಿಲ್ಲೆಯ ಶಾಸಕರು ಪ್ರತಿನಿಧಿಸುವ ಹಬ್ರಾ ಪ್ರದೇಶದ ನಿವಾಸಿಯಾಗಿದ್ದು, ಕೆಲಸ ಕೇಳಲು ಬಂದಿರುವುದಾಗಿ ಹೇಳಿದ್ದಾನೆ.
ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮನೋವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು ಮತ್ತು ಹಿಂದಿನ ದಿನ ಮಲ್ಲಿಕ್ ಅವರ ಮನೆಯ ಸುತ್ತ ಒಡಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಯುವಕ ಇತರ ಸಂದರ್ಶಕರಂತೆ ಅವರನ್ನು ಭೇಟಿಯಾಗಲು ಬಯಸುತ್ತಿದ್ದಾರೆ ಎಂದು ಭಾವಿಸಿ,ಆದರೆ ಇದ್ದಕ್ಕಿದ್ದಂತೆ ಮುಂದಕ್ಕೆ ಹಾರಿ ಹೊಡೆದಾಗ ಆಶ್ಚರ್ಯಚಕಿತನಾದೆ ಎಂದು ಶಅಸಕರು ಹೇಳಿದ್ದಾರೆ.
ಆತ ಕುಡಿದ ಅಮಲಿನಲ್ಲಿದ್ದರೋ ಇಲ್ಲವೋ ಎಂದು ನನಗೆ ಖಚಿತವಿಲ್ಲ. ನಾನು ಅವರನ್ನು ಹಿಂದೆಂದೂ ನೋಡಿರಲಿಲ್ಲ. ಹಬ್ರಾದ ಯಾರಾದರೂ ನನ್ನ ಮೇಲೆ ಹಲ್ಲೆ ಮಾಡುತ್ತಾರೆ ಎಂದು ಊಹಿಸಲೂ ಸಾಧ್ಯವಿಲ್ಲ ಎಂದು ಆಡಳಿತ ಪಕ್ಷದ ಶಾಸಕರು ಹೇಳಿದರು.
ಮಲ್ಲಿಕ್ ಅವರನ್ನು ಸುಮಾರು ಎರಡು ವರ್ಷಗಳ ಹಿಂದೆ,ಅರಣ್ಯ ಸಚಿವರಾಗಿದ್ದಾಗ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಂಸ್ಥೆಗಳು ಬಂಧಿಸಿದ್ದವು. ಈ ಪ್ರಕರಣವು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿ ಅವರ ಹಿಂದಿನ ಅವಧಿಗೆ ಸಂಬಂಧಿಸಿದೆ. ಬಂಧನದ ನಂತರ, ಮಲ್ಲಿಕ್ ಅವರನ್ನು ಅವರ ಹುದ್ದೆಯಿಂದ ತೆಗೆದುಹಾಕಲಾಯಿತು.
