ನೆಲಮಂಗಲ,ನ.4- ನಿನ್ನೆಯಷ್ಟೇ ಖರೀದಿಸಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಡ್ಯಾನ್ಸರ್ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಪೆಮನಹಳ್ಳಿ ಬಳಿ ನಡೆದಿದೆ.
ತ್ಯಾಮಗೊಂಡ್ಲು ನಿವಾಸಿ ಸುಧೀಂದ್ರ ಮೃತಪಟ್ಟ ಡ್ಯಾನ್ಸರ್. ಇವರು ನಿನ್ನೆಯಷ್ಟೇ ಹೊಸ ಕಾರನ್ನು ಖರೀದಿಸಿ ತ್ಯಾಮಗೊಂಡ್ಲುಗೆ ಹೋಗುತ್ತಿದ್ದಾಗ ರಸ್ತೆಯಲ್ಲಿ ಏಕಾಏಕಿ ಕಾರಿನ ಇಂಜಿನ್ ಆಫ್ ಆಗಿದೆ.
ಕೂಡಲೇ ಕೆಳಗಿಳಿದು ಪರೀಕ್ಷಿಸುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುಧೀಂದ್ರ ವಿವಿಧ ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು.
ಹೊಸ ಕಾರನ್ನು ಖರೀದಿಸಿ ಸಂಭ್ರಮದಲ್ಲಿದ್ದರು. ಆದರೆ ಲಾರಿ ರೂಪದಲ್ಲಿ ಜವರಾಯ ಬಲಿ ತೆಗೆದುಕೊಂಡಿದೆ. ಘಟನೆ ಸಂಬಂಧ ದಾಬಸ್ಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
