ಗದಗ,ನ.4- ಮುಂದಿನ ಬೆಳಗಾವಿ ಚಳಿಗಾಲ ಅಧಿವೇಶನ ವೇಳೆಗೆ ಹೊಸ ಸಿಎಂ ಬರುತ್ತಾರೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಭವಿಷ್ಯ ನುಡಿದಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಹೊಸ ಸಿಎಂ ಇರುತ್ತಾರೆ ಅದರಲ್ಲಿ ಮಲ್ಲಿಕಾರ್ಜುನ ಖರ್ಗೆ ಬಂದರೂ ಅಚ್ಚರಿ ಇಲ್ಲ ಎಂದಿದ್ದಾರೆ.
ಸಿದ್ದು-ಡಿಕೆಶಿ ಕುರ್ಚಿ ಜಗಳದಲ್ಲಿ ಮೂರನೇಯವರಿಗೆ ಲಾಭ ಎಂಬಂತೆ ಕೊನೆಗಳಿಗೆಯಲ್ಲಿ ನಾನೇ ಸಿಎಂ ಆಗುತ್ತೇನೆ ಎಂದು ಖರ್ಗೆ ಬಂದರೂ ಬರಬಹುದು ಎಂದು ಹೇಳಿದ್ದಾರೆ.ಶಿವಕುಮಾರ್ ಮಾತು ಒಂದೊಂದು ರೀತಿ ಇವೆ. ಅವರ ಇವತ್ತಿನ ಮಾತು ಕೇಳಿದರೆ ಸನ್ಯಾಸಿ ಆಗ್ತಾರೇನೋ ಅನಿಸುತ್ತೆ. ಅವರು ಜಿಗುಪ್ಸೆಗೊಂಡಿದ್ದಾರೆ ಎಂದರು.
ನನಗೆ ಬಂದಿರುವ ಮಾಹಿತಿ ಪ್ರಕಾರ ಖರ್ಗೆ ಅವರೇ ಬರಬಹುದು. ಬೆಳಗಾವಿ ಅಧಿವೇಶನದಲ್ಲಿ ಹೊಸ ಸಿಎಂ ಇರುತ್ತಾರೆ,ಇನ್ನು ಕಾಂಗ್ರೆಸ್‌ನಲ್ಲಿ ಸಚಿವರಾಗಬೇಕು ಅಂದ್ರೆ ಕಪ್ಪು ಹಣ ಕೊಡಬೇಕು ಎಂದು ಆರೋಪಿಸಿದ್ದಾರೆ.
ಮಂತ್ರಿಗಳು ಹಣಕೊಡಲು ಆಗಲ್ಲ ಅಂದ್ರೆ ಗೇಟ್ ಪಾಸ್ ಕೊಟ್ಟು ಕಳುಹಿಸುತ್ತಾರೆ, ಎಲ್‌ಐಸಿ ಏಜೆಂಟರಿಗೆ ಟಾರ್ಗೆಟ್ ನೀಡುವಂತೆ ಕಲೆಕ್ಷನ್ ಟಾರ್ಗೆಟ್ ಕೊಡುತ್ತಿದ್ದಾರೆ ಆರೋಪಿಸಿದರು.
