ಬೆಂಗಳೂರು : ಒಂದು ಕಡೆ ದಿನನಿತ್ಯದ ವಸ್ತುಗಳ ಬೆಲೆಏರಿಕೆಯಿಂದ ಜನರು ಏದುಸಿರು ಬೀಡುತ್ತೀರುವ ಸಂದರ್ಭದಲ್ಲೇ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿಯೂ ನಂದಿನ ತುಪ್ಪದ ಏಕಾಏಕಿ 90 ರೂ. ಏರಿಕೆ ಮಾಡಿದೆ.
ನಂದಿನಿ ತುಪ್ಪದ ದರ ಪ್ರತಿ ಕೆಜಿಗೆ 90 ರೂ. ಏರಿಕೆ ಮಾಡಿ ಆದೇಶ ಹೊರಡಿಸಿದ್ದು, ಇಂದಿನಿಂದಲೇ ನೂತನ ದರ ಜಾರಿಗೆ ಬರಲಿದೆ ಎಂದು ತಿಳಿಸಿದೆ.ಈ ಹಿಂದೆ 1 ಕೆಜಿ ತುಪ್ಪಕ್ಕೆ 610 ರೂ. ಇತ್ತು, ಸದ್ಯ 90 ರೂ. ಏರಿಕೆಯಿಂದ 700 ರೂ.ಗೆ ಏರಿಕೆಯಾಗಿದೆ. ತುಪ್ಪ ಹೊರತುಪಡಿಸಿ ಇತರೇ ನಂದಿನಿ ಉತ್ಪನ್ನಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಕೆಎಂಎಫ್ ತುಪ್ಪಕ್ಕೆ ಹೊರ ರಾಜ್ಯಗಳಿಂದಲೂ ಭಾರೀ ಬೇಡಿಕೆ ಇರುವ ಕಾರಣ ಬೆಲೆ ಹೆಚ್ಚಳ ಮಾಡಲಾಗಿದೆ. ಒಂದು ಲೀಟರ್ ತುಪ್ಪದ ದರ 90 ರೂ. ಏರಿಕೆಯಾಗಿದೆ. ಇದೀಗ ಒಂದು ಲೀಟರ್? ಏಒಈ ತುಪ್ಪ 700 ರೂ. ನಿಗಧಿ ಮಾಡಲಾಗಿದೆ.
ಈ ಮೊದಲು 610 ರೂಗೆ ಒಂದು ಲೀಟರ್ ತುಪ್ಪ ಮಾರಾಟ ಮಾಡಲಾಗುತ್ತಿತ್ತು. ಜಿಎಸ್‍ಟಿ ಸ್ಲ್ಯಾಬ್ ಸುಧಾರಣೆ ಮುನ್ನ 650 ರೂ. ಇತ್ತು ಜಿಎಸ್?ಟಿ ಸುಧಾರಣೆ ಬಳಿಕ 40 ರೂಪಾಯಿ ಇಳಿಕೆ ಮಾಡಲಾಗಿತ್ತು. ಜಿಎಸ್‍ಟಿ ಸುಧಾರಣೆ ಮುನ್ನ ದರ ಏರಿಸಲು ಕೆಎಂಎಫ್ ನಿರ್ಧರಿಸಿತ್ತು. ವಿಶ್ವ ಮಾರುಕಟ್ಟೆಯಲ್ಲಿ ತುಪ್ಪದ ದರ ಏರಿಕೆ ಹಿನ್ನೆಲೆ ಅನಿವಾರ್ಯ ಅಗಿ ತುಪ್ಪದ ದರ ಏರಿಕೆ ಮಾಡಲಾಗಿದೆ ಎಂದು ಕೆಎಂಎಫ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
