Wednesday, November 5, 2025
Homeರಾಜ್ಯನವೆಂಬರ್‌ ಕ್ರಾಂತಿಯ ಚರ್ಚೆ ಬೆನ್ನಲ್ಲೇ ಸಿದ್ದು ಬಲ ಪ್ರದರ್ಶನಕ್ಕೆ ಅಹಿಂದ ಸಮಾವೇಶ

ನವೆಂಬರ್‌ ಕ್ರಾಂತಿಯ ಚರ್ಚೆ ಬೆನ್ನಲ್ಲೇ ಸಿದ್ದು ಬಲ ಪ್ರದರ್ಶನಕ್ಕೆ ಅಹಿಂದ ಸಮಾವೇಶ

AHINDA groups to bat for full-term for Karnataka CM Siddaramaiah

ಬೆಂಗಳೂರು, ನ.5– ನವೆಂಬರ್‌ ಕ್ರಾಂತಿಯ ಸದ್ದಿನ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗರು ಅಹಿಂದ ಸಮಾ ವೇಶಕ್ಕೆ ತಯಾರಿ ಆರಂಭಿಸಿದ್ದಾರೆ.ಈ ಮೊದಲು 2023, 2024ರಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಅಹಿಂದ ಸಮಾವೇಶಗಳನ್ನು ಆಯೋಜಿಸಲಾಗಿತ್ತು 2025ರಲ್ಲಿ ಇದೇ ಮಾದರಿಯ ಸಮಾವೇಶಗಳನ್ನು ನಡೆಸಲು ಪ್ರಯತ್ನಿಸಿದಾಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅಡ್ಡಗಾಲು ಹಾಕಿದರು. ಕಾಂಗ್ರೆಸ್‌‍ ಪಕ್ಷದ ಮುಖಂಡರು ಮತ್ತು ಸರ್ಕಾರದ ಸಂಪನೂಲ ಬಳಸಿ ನಡೆಸಲಾಗುವ ಈ ಕಾರ್ಯಕ್ರಮವನ್ನು ಪಕ್ಷೇತರವಾಗಿ ಬಿಂಬಿಸುವ ಬದಲಾಗಿ ಕಾಂಗ್ರೆಸ್ಸಿನ ವೇದಿಕೆಯಲ್ಲೇ ಮಾಡಬೇಕೆಂದು ಪಟ್ಟು ಹಿಡಿದರು.

ಹೀಗಾಗಿ ಹಾಸನದಲ್ಲಿನ ಸಮಾವೇಶ ಕಾಂಗ್ರೆಸ್‌‍ ಕಾರ್ಯಕ್ರಮವಾಗಿ ಪರಿವರ್ತನೆಯಾಯಿತು. ಅಲ್ಲಿಂದಾಚೆಗೆ ಅಹಿಂದ ಸಮಾವೇಶಗಳು ಕಾಂಗ್ರೆಸ್‌‍ ಕಾರ್ಯಕ್ರಮಗಳಾಗಿ ಬದಲಾಗಿವೆ. ಸಿದ್ದರಾಮಯ್ಯ ಅವರಿಗೆ ರಾಜಕೀಯ ಅಸ್ಥಿರತೆ ಕಾಡಿದಾಗಲೆಲ್ಲ ಅಹಿಂದ ಸಮಾವೇಶಗಳ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದಾರೆ.

- Advertisement -

ಅದರ ಬೆನ್ನಲ್ಲೇ ಸಿದ್ದರಾಮಯ್ಯ ಅವರಿಗೆ ಎದುರಾದ ಅಡೆ-ತಡೆಗಳು ನಿವಾರಣೆಯಾಗಿವೆ. ಈಗ ನವೆಂಬರ್‌ ಕ್ರಾಂತಿಯ ನೆಪದಲ್ಲಿ ಸಿದ್ದರಾಮಯ್ಯ ಅವರ ಬಲ ಕುಗ್ಗಿಸುವ ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನಗಳಾಗುತ್ತಿವೆ. ಹೀಗಾಗಿ ಮತ್ತೊಮೆ ಅಹಿಂದ ವರ್ಗ ಮೈಕೊಡವಿ ನಿಂತಿದೆ. ವರ್ಷಾಂತ್ಯಕ್ಕೆ ಬೃಹತ್‌ ಅಹಿಂದ ಸಮಾವೇಶ ನಡೆಸುವ ಚರ್ಚೆಗಳಾಗಿವೆ. ಅದಕ್ಕೆ ಈ ತಿಂಗಳ ಕೊನೆಯಲ್ಲಿ ಪೂರ್ವಭಾವಿ ಸಭೆ ನಡೆಸುವ ಚರ್ಚೆಯಾಗಿದೆ. ಈ ಬಾರಿಯ ಅಹಿಂದ ಸಮಾವೇಶವನ್ನು ಪಕ್ಷತೀತವಾಗಿ ಮಾಡಬೇಕೆಬುದು ಸಿದ್ದರಾಮಯ್ಯ ಅವರ ಬೆಂಬಲಿಗರ ಆಶಯವಾಗಿದೆ.

ಹೀಗಾಗಿ ಡಿ.ಕೆ.ಶಿವಕುಮಾರ್‌ ಅವರ ಒತ್ತಡಕ್ಕೆ ಮಣಿಯದೇ ಸಮಾವೇಶ ನಡೆಸಲು ಪ್ರತ್ಯೇಕ ತಂತ್ರಗಾರಿಕೆಗಳು ನಡೆಯುತ್ತಿವೆ. ಕಾಂಗ್ರೆಸ್‌‍, ಜೆಡಿಎಸ್‌‍, ಬಿಜೆಪಿ ಎಲ್ಲಾ ಪಕ್ಷಗಳಲ್ಲಿರುವ ಅಹಿಂದ ನಾಯಕರನ್ನು ಒಂದೇ ವೇದಿಕೆಗೆ ಕರೆ ತರುವ ಚಿಂತನೆ ಇದೆ. ರಾಷ್ಟ್ರೀಯ ಮಟ್ಟದಲ್ಲಿ ಅಹಿಂದ ನಾಯಕರಾಗಿ ಗುರುತಿಸಿಕೊಂಡಿರುವ ಪ್ರಭಾವಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವ ಸಾಧ್ಯತೆ ಇದೆ. ಪಕ್ಷ ಅಥವಾ ಸರ್ಕಾರದ ಕಾರ್ಯಕ್ರಮವಾಗಿಸದೆ ಪ್ರತ್ಯೇಕ ಸಮಾವೇಶ ಮಾಡಿ, ಅಹಿಂದ ವರ್ಗದ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸುವುದು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಒಕ್ಕೊರಲ ಬೆಂಬಲ ವ್ಯಕ್ತಪಡಿಸುವ ಮೂಲ ಆಶಯ ವ್ಯಕ್ತವಾಗಿದೆ ಎನ್ನಲಾಗುತ್ತಿದೆ.

ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರೆ ಅಹಿಂದ ವರ್ಗ ತಿರುಗಿ ಬೀಳಲಿದೆ ಎಂಬ ಸಂದೇಶವನ್ನು ರವಾನಿಸುವುದು ಕಾರ್ಯಕ್ರಮದ ಮೂಲ ಉದ್ದೇಶ. ಆದರೆ ಅಹಿಂದ ಬೇಡಿಕೆಗಳನ್ನು ಆಧಾರವಾಗಿಟ್ಟುಕೊಂಡು ರಾಷ್ಟ್ರ ಮಟ್ಟದ ಚರ್ಚೆಗೆ ವೇದಿಕೆ ಕಲ್ಪಿಸುವುದಾಗಿ ಸಂಘಟಕರು ಸಮರ್ಥಿಸಿಕೊಳ್ಳುತ್ತಿದ್ದಾರೆ.

- Advertisement -
RELATED ARTICLES

Latest News