ನವದೆಹಲಿ, ನ. 5– ಟೀಮ್ ಇಂಡಿಯಾದ ಮಾಜಿ ನಾಯಕ, ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಅವರು ಇಂದು ತಮ 37ನೇ ಜನದಿನದ ಸಂಭ್ರಮವನ್ನು ಪತ್ನಿ ಅನುಷ್ಕಾ ಶರ್ಮಾ ಹಾಗೂ ಸ್ನೇಹಿತರೊಂದಿಗೆ ಆಚರಿಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಅವರ ಹುಟ್ಟುಹಬ್ಬಕ್ಕೆ ಮಾಜಿ ಆಟಗಾರರಾದ ಎಬಿಡಿ ವಿಲಿಯರ್ಸ್, ಸುರೇಶ್‌ರೈನಾ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ, ಆಟಗಾರರು ಸೇರಿದಂತೆ ಹಲವು ದಿಗ್ಗಜರು ಶುಭ ಕೋರಿದ್ದಾರೆ. ಅಂಡರ್ 18 ವಿಶ್ವಕಪ್ ಗೆದ್ದ ನಂತರ ಇಡೀ ವಿಶ್ವವೇ ತಮತ್ತ ತಿರುಗಿ ನೋಡುವಂತೆ ಮಾಡಿದ ವಿರಾಟ್ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲೂ ಟೀಮ್ ಇಂಡಿಯಾ ಏಕದಿನ ಹಾಗೂ ಟ್ವೆಂಟಿ-20 ವಿಶ್ವಕಪ್ ಗೆಲ್ಲುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ.
ಕ್ರಿಕೆಟ್ ಜಗತ್ತಿನಲ್ಲಿ ದಾಖಲೆಯ ಸರದಾರನೆಂದೇ ಬಿಂಬಿಸಿಕೊಂಡಿರುವ ವಿರಾಟ್ ಕೊಹ್ಲಿ ಕೆಲವು ಅಚ್ಚಳಿಯದೆ ಇರುವ ದಾಖಲೆಗಳನ್ನು ತಮ ಕ್ರಿಕೆಟ್ ಬತ್ತಳಿಕೆಗೆ ಸೇರಿಸಿಕೊಂಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 51 ಶತಕಗಳಿಸಿದ ಏಕೈಕ ಆಟಗಾರ ಎಂಬ ದಾಖಲೆಗೆ ಭಾಜರಾಗಿರುವ ಕಿಂಗ್ ಕೊಹ್ಲಿ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (49) ಅವರ ದಾಖಲೆಯನ್ನು ಮುರಿದು ಗಮನ ಸೆಳೆದಿದ್ದಾರೆ.
ಚೇಸಿಂಗ್ ಮಾಸ್ಟರ್ ಎನಿಸಿಕೊಂಡಿರುವ ಕೊಹ್ಲಿ ಚೇಸಿಂಗ್ ವೇಳೆ 14,234 ರನ್ ಗಳಿಸಿದ್ದು, ಕುಮಾರಸಂಗಾಕ್ಕರ (18,426 ರನ್) ನಂತರದ ಸ್ಥಾನದಲ್ಲಿದ್ದರೆ, 2023ರ ಏಕದಿನ ವಿಶ್ವಕಪ್ 765 ರನ್ ಗಳಿಸಿರುವುದು ಗರಿಷ್ಠ ರನ್ ಆಗಿದ್ದು, ಇನ್ನೂ ಹಲವು ದಾಖಲೆಗಳಿಗೆ ಕೊಹ್ಲಿಯೇ ಸರದಾರನಾಗಿದ್ದಾನೆ.
