Thursday, November 6, 2025
Homeರಾಷ್ಟ್ರೀಯ | Nationalಬಿಹಾರ ಚುನಾವಣೆ : ಹಾಡಿನ ಮೂಲಕ ಮತದಾನಕ್ಕೆ ಪ್ರೇರಿಪಿಸುತ್ತಿರುವ ಐಎಎಸ್‌‍ ಅಧಿಕಾರಿ

ಬಿಹಾರ ಚುನಾವಣೆ : ಹಾಡಿನ ಮೂಲಕ ಮತದಾನಕ್ಕೆ ಪ್ರೇರಿಪಿಸುತ್ತಿರುವ ಐಎಎಸ್‌‍ ಅಧಿಕಾರಿ

Bihar polls: Vaishali DM urges people to take part in 'festival of democracy' through her song

ಹಾಜಿಪುರ, ನ. 6 (ಪಿಟಿಐ) ವೈಶಾಲಿ ಜನರೇ ನನ್ನ ಕರೆಯನ್ನು ಆಲಿಸಿ, ದಯವಿಟ್ಟು ಮೊದಲು ನಿಮ ಮತ ಚಲಾಯಿಸಿ ನಂತರ ಉಪಹಾರ ಸೇವಿಸಿ ಎಂದು ಸ್ವರಬದ್ಧವಾಗಿ ಹಾಡುವ ಮೂಲಕ ಜನರನ್ನು ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುವ ಮೂಲಕ ಯುವ ಐಎಎಸ್‌‍ ಅಧಿಕಾರಿಯೊಬ್ಬರು ಜನರ ಮನಗೆದ್ದಿದ್ದಾರೆ.

ಬಿಹಾರದಲ್ಲಿ ನಡೆಯುತ್ತಿರುವ ಮೊದಲ ಹಂತದ ಚುನಾವಣೆ ಸಂದರ್ಭದಲ್ಲಿ ವೈಶಾಲಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ವರ್ಷಾ ಸಿಂಗ್‌ ಅವರು ಸ್ಥಳೀಯ ಬಜ್ಜಿಕಾ ಉಪಭಾಷೆಯಲ್ಲಿ ಹಾಡುವ ಮೂಲಕ ತಮ್ಮ ಜಿಲ್ಲೆಯ ಮತದಾರರನ್ನು ಹೊರಬಂದು ತಮ್ಮ ಅಮೂಲ್ಯವಾದ ಮತಗಳನ್ನು ಚಲಾಯಿಸುವಂತೆ ಒತ್ತಾಯಿಸುತ್ತಿದ್ದಾರೆ.

ವೈಶಾಲಿ ಕಿ ಜನತಾ ಸುನಿಹಾ ಹಮ್ರೋ ಪುಕಾರ್‌, ಪಹಿಲೇ ಕರಿಹಾ ಮತ್‌ಡಾನ್‌ ಫಿರ್‌ ಜಲ್ಪನ್‌ ಕರಿಹಾ (ವೈಶಾಲಿಯ ಜನರೇ, ನನ್ನ ಕರೆಯನ್ನು ಆಲಿಸಿ, ದಯವಿಟ್ಟು ಮೊದಲು ನಿಮ್ಮ ಮತ ಚಲಾಯಿಸಿ, ನಂತರ ಉಪಾಹಾರ ಸೇವಿಸಿ), ಎಂದು 2016 ರ ಬ್ಯಾಚ್‌ನ ಬಿಹಾರ ಕೇಡರ್‌ನ ಐಎಎಸ್‌‍ ಅಧಿಕಾರಿಯೊಬ್ಬರು ತಾವು ರಚಿಸಿದ ಹಾಡಿನ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ವೈಶಾಲಿಯಲ್ಲಿ ಮತದಾನ ಶೇ. 58 ರಷ್ಟಿತ್ತು. ನನ್ನನ್ನು ವೈಶಾಲಿಗೆ ವರ್ಗಾಯಿಸಿದಾಗ, ಈ ಚುನಾವಣೆಯಲ್ಲಿ ಹೆಚ್ಚಿನ ಜನರು ಭಾಗವಹಿಸುವಂತೆ ಪ್ರೇರೇಪಿಸಲು ನಾನು ನಿರ್ಧರಿಸಿದೆ. ಇದು ಪ್ರಜಾಪ್ರಭುತ್ವದ ಹಬ್ಬ… ಜನರು ತಮ್ಮ ಮತಗಳ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕು.ಮತದಾರರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಲು ನಿರ್ಧರಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ವಿಶೇಷವಾಗಿ ಮಹಿಳೆಯರನ್ನು ಮತದಾನದತ್ತ ಆಕರ್ಷಿಸಲು ಒಬ್ಬ ಸಮುದಾಯದ ಭಾಗವಾಗಿರುವ ಅವರ ಭಾವನೆಯನ್ನು ಮತ್ತು ಮತದಾರರ ಭಾಗವಹಿಸುವಿಕೆಯ ಮೂಲಕ ಅರ್ಥಪೂರ್ಣ ಬದಲಾವಣೆಯನ್ನು ತರುವ ಸಾಮರ್ಥ್ಯವನ್ನು ಬಲಪಡಿಸುವ ಅಗತ್ಯವಿತ್ತು. ಇದನ್ನು ಅವರ ಸ್ಥಳೀಯ ಭಾಷೆಯಲ್ಲಿ ಹಾಡುವ ಮೂಲಕ ಮಾಡಬಹುದು ಎಂದು ನಾನು ಅರಿತುಕೊಂಡೆ. ಆದ್ದರಿಂದ ನಾನು ಅದನ್ನು ಮಾಡಿದೆ ಎಂದು ಅವರು ಹೇಳಿದರು.

ನನಗೆ ಹಾಡುವುದರಲ್ಲಿ ಯಾವುದೇ ಔಪಚಾರಿಕ ತರಬೇತಿ ಇಲ್ಲ, ಆದರೆ ನಾನು ಚೆನ್ನಾಗಿ ಹಾಡುತ್ತೇನೆ. ನನ್ನ ಉಪಕ್ರಮಕ್ಕಾಗಿ ನನ್ನನ್ನು ಪ್ರಶಂಸಿಸಲಾಗಿದೆ. ಸ್ಥಳೀಯ ಭಾಷೆಯಲ್ಲಿ ಹಾಡುಗಳ ಮೂಲಕ ಜನರು ಮತ ಚಲಾಯಿಸಲು ಪ್ರೋತ್ಸಾಹಿಸುವುದು ಮತದಾರರಿಗೆ ಶಕ್ತಿ ತುಂಬುತ್ತದೆ ಎಂದು ನಾನು ಅರಿತುಕೊಂಡೆ. ಈ ಬಾರಿ ವೈಶಾಲಿಯಲ್ಲಿ ಮತದಾನದ ಶೇಕಡಾವಾರು ಹೆಚ್ಚಾಗುತ್ತದೆ ಎಂದು ನನಗೆ ಸಾಕಷ್ಟು ಭರವಸೆ ಇದೆ ಎಂದು ಅವರು ಹೇಳಿದರು.

ವೈಶಾಲಿಯ ಐತಿಹಾಸಿಕ ಮಹತ್ವದ ಕುರಿತು ಮಾತನಾಡುತ್ತಾ, ಸಿಂಗ್‌ ಈ ಪ್ರದೇಶವನ್ನು ಕ್ರಿ.ಪೂ 600 ರಲ್ಲಿ ಪ್ರಜಾಪ್ರಭುತ್ವದ ಆರಂಭಿಕ ರೂಪವು ಹುಟ್ಟಿಕೊಂಡ ಸ್ಥಳವೆಂದು ಕರೆಯಲಾಗುತ್ತದೆ ಎಂದು ಹೇಳಿದರು.ವೈಶಾಲಿಯ ಬಗ್ಗೆ ಅನೇಕ ಉಲ್ಲೇಖಗಳು ಜೈನ ಧರ್ಮ ಮತ್ತು ಬೌದ್ಧ ಧರ್ಮ ಎರಡರ ಪ್ರಾಚೀನ ಗ್ರಂಥಗಳಲ್ಲಿ ಕಂಡುಬರುತ್ತವೆ, ಇದು ವೈಶಾಲಿ ಮತ್ತು ಪ್ರಾಚೀನ ಭಾರತದ ಇತರ ಮಹಾ ಜನಪದಗಳ (ಮಹಾ ಸಾಮ್ರಾಜ್ಯಗಳು) ಬಗ್ಗೆ ಅಮೂಲ್ಯವಾದ ಮಾಹಿತಿಯನ್ನು ಸಂರಕ್ಷಿಸುತ್ತದೆ.

ಈ ಗ್ರಂಥಗಳ ಪ್ರಕಾರ, ವೈಶಾಲಿಯನ್ನು ಕ್ರಿ.ಪೂ 6 ನೇ ಶತಮಾನದ ವೇಳೆಗೆ ಗಣರಾಜ್ಯವಾಗಿ ಸ್ಥಾಪಿಸಲಾಯಿತು, ಕ್ರಿ.ಪೂ 563 ರಲ್ಲಿ ಗೌತಮ ಬುದ್ಧನ ಜನನಕ್ಕೂ ಮುಂಚೆಯೇ, ಇದು ಸರಿಯಾಗಿ ಚುನಾಯಿತವಾದ ಸಭೆ ಮತ್ತು ದಕ್ಷ ಆಡಳಿತವನ್ನು ಹೊಂದಿರುವ ವಿಶ್ವದ ಮೊದಲ ಗಣರಾಜ್ಯವಾಗಿದೆ. ಕೊನೆಯ ಜೈನ ತೀರ್ಥಂಕರನಾದ ಭಗವಾನ್‌ ಮಹಾವೀರನ ಜನ್ಮಸ್ಥಳವಾಗಿ ವೈಶಾಲಿ ವಿಶೇಷ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಗೌತಮ ಬುದ್ಧನು ತನ್ನ ಕೊನೆಯ ಧರ್ಮೋಪದೇಶವನ್ನು ನೀಡಿದ ಮತ್ತು ತನ್ನ ಪರಿನಿರ್ವಾಣವನ್ನು (ಅಂತಿಮ ಜ್ಞಾನೋದಯ) ಘೋಷಿಸಿದ ಸ್ಥಳವೂ ಇದಾಗಿದೆ ಎಂದು ಸಿಂಗ್‌ ಹೇಳಿದರು.

RELATED ARTICLES

Latest News