Thursday, January 15, 2026
Homeರಾಜ್ಯಸಿಎಂ-ಡಿಸಿಎಂ ದೆಹಲಿ ಭೇಟಿ ಸದ್ಯಕ್ಕಿಲ್ಲ

ಸಿಎಂ-ಡಿಸಿಎಂ ದೆಹಲಿ ಭೇಟಿ ಸದ್ಯಕ್ಕಿಲ್ಲ

CM-DCM's Delhi visit not scheduled for now

ಬೆಂಗಳೂರು, ನ.29- ಸದ್ಯಕ್ಕೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ದೆಹಲಿಗೆ ಭೇಟಿ ನೀಡುವ ಸಾಧ್ಯತೆಗಳಿಲ್ಲ. ಬೆಳಗಾವಿ ಅಧಿವೇಶನಕ್ಕೆ ತೆರಳಲಿದ್ದಾರೆ ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಎ.ಎಸ್‌‍. ಪೊನ್ನಣ್ಣ ಹೇಳಿದ್ದಾರೆ.

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರ ನಡುವೆ ಉಪಾಹಾರ ಕೂಟದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಕೆಪಿಸಿಸಿ ಸಂಸದೆಯ ಸಭೆಗಳು ಅಥವಾ ಇನ್ಯಾವುದೇ ರೀತಿಯ ಚಟುವಟಿಕೆಗಳಿದ್ದರೆ ಅದರಲ್ಲಿಭಾಗವಹಿಸಲು ಹೋಗಬಹುದು. ಆದರೆ ರಾಜ್ಯ ರಾಜಕಾರಣದ ಚರ್ಚೆ ಕುರಿತಂತೆ ದೆಹಲಿಗೆ ಹೋಗುವುದಿಲ್ಲ ಎಂದು ತಿಳಿಸಿದರು.
ಇಬ್ಬರೂ ನಾಯಕರು ಉಪಾಹಾರ ಸೇವಿಸುವಾಗ ಸೌಜನ್ಯಕ್ಕಾಗಿ ನಾನು ಜೊತೆಯಲ್ಲಿದ್ದೆ.

ಅವರಿಬ್ಬರ ನಡುವೆ ಚರ್ಚೆಗಳಾಗುವಾಗ ನಾನು ಇರಲಿಲ್ಲ. ಯಾವ ರೀತಿಯ ಮಾತುಕತೆಗಳಾದವು ಎಂದು ನನಗೆ ಗೊತ್ತಿಲ್ಲ. ಇಬ್ಬರ ನಡುವಿನ ಚರ್ಚೆಯ ಬಗ್ಗೆ ಹೈಕಮಾಂಡ್‌ ನಾಯಕರಿಗೆ ದೂರವಾಣಿಯಲ್ಲಿ ಮಾಹಿತಿ ನೀಡಲಾಗಿದೆ. ಬಳಿಕ ಮುಖ್ಯಮಂತ್ರಿ ಅವರು ಆರೋಗ್ಯ ತಪಾಸಣೆಗಾಗಿ ವೈದ್ಯರ ಬಳಿ ಹೋದರು ಎಂದು ಪೊನ್ನಣ್ಣ ಸ್ಪಷ್ಟ ಪಡಿಸಿದರು.

ತಾವು ಸದಾಕಾಲ ಮುಖ್ಯಮಂತ್ರಿ ಅವರ ಜೊತೆ ಇರುವುದರಿಂದಾಗಿ ಎಐಸಿಸಿಯ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರು ತಮ ಮೊಬೈಲ್‌ಗೆ ಕರೆ ಮಾಡಿ, ಮುಖ್ಯಮಂತ್ರಿಯವರಿಗೆ ದೂರವಾಣಿ ನೀಡುವಂತೆ ಹೇಳಿದ್ದು, ಅದರ ಹೊರತಾಗಿ ಇಬ್ಬರೂ ನಾಯಕರ ಉಪಾಹಾರ ಕೂಟದಲ್ಲಿ ತಮ ಪಾತ್ರ ಇಲ್ಲ ಎಂದರು.

ಕೆಪಿಸಿಸಿಯ ಸಂವಿಧಾನ ದಿನಾಚರಣೆಯಲ್ಲಿ ಉಪಮುಖ್ಯಮಂತ್ರಿಯವರು ಮಾತನಾಡುವಾಗ ಪದ ಶಕ್ತಿ, ವಿಶ್ವ ಶಕ್ತಿ ಎಂಬ ನಾನುಡಿ ಇರುವ ಬಗ್ಗೆ ನನ್ನ ಜೊತೆ ಹೇಳಿದ್ದರು. ವೇದಿಕೆಯಲ್ಲಿ ಮಾತನಾಡುವಾಗಲೂ ಈ ರೀತಿಯ ನಾನುಡಿ ಇದೆಯೆಂದು ಪೊನ್ನಣ್ಣನಿಗೆ ತಿಳಿಸಿದ್ದೇನೆ ಎಂದಷ್ಟೇ ಹೆಳಿದ್ದಾರೆ. ಅದಕ್ಕೆ ಬೇರೆ ರೀತಿಯ ಅರ್ಥ ಕಲ್ಪಿಸುವುದು ಸರಿಯಲ್ಲ ಎಂದರು. ಹೈಕಮಾಂಡ್‌ ನಾಯಕರು ಇಬ್ಬರನ್ನು ಸದ್ಯಕ್ಕೆ ದೆಹಲಿಗೆ ಕರೆದಿಲ್ಲ, ಕರೆದಾಗ ಹೋಗಬಹುದು ಎಂದರು.

RELATED ARTICLES

Latest News