Tuesday, April 21, 2026
Homeರಾಷ್ಟ್ರೀಯಮಧ್ಯಪ್ರಾಚ್ಯದಲ್ಲಿ ಯುದ್ಧ : ಹಲವು ದೇಶಗಳಲ್ಲಿ ವಿಮಾನ ಸೇವೆ ವ್ಯತ್ಯಯ, ಪ್ರಯಾಣಿಕರ ಪರದಾಟ

ಮಧ್ಯಪ್ರಾಚ್ಯದಲ್ಲಿ ಯುದ್ಧ : ಹಲವು ದೇಶಗಳಲ್ಲಿ ವಿಮಾನ ಸೇವೆ ವ್ಯತ್ಯಯ, ಪ್ರಯಾಣಿಕರ ಪರದಾಟ

Iran-Israel war: Air India, IndiGo and multiple other airlines suspend flights

ಬೆಂಗಳೂರು,ಮಾ.1- ಇರಾನ್‌-ಇಸ್ರೇಲ್‌ ನಡುವಿನ ಉದ್ವಿಗ್ನ ಪರಿಸ್ಥಿತಿ ಮತ್ತು ಅಮೆರಿಕಾ-ಇಸ್ರೇಲ್‌ ಸಂಯುಕ್ತ ದಾಳಿಗಳ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದ ವಾಯುಪ್ರದೇಶಗಳು (ಇರಾನ್‌, ಇರಾಕ್‌, ಇಸ್ರೇಲ್‌, ಜೋರ್ಡಾನ್‌, ಕುವೈತ್‌, ಬಹ್ರೈನ್‌, ಯುಎಇ ಇತ್ಯಾದಿ) ತಾತ್ಕಾಲಿಕವಾಗಿ ಮುಚ್ಚಿವೆ. ಇದರಿಂದಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗಲ್ಫ್ ದೇಶಗಳಿಗೆ (ದುಬೈ, ದೋಹಾ, ಅಬುಧಾಬಿ, ದಮಾಮ್‌, ಕುವೈತ್‌) ಹೊರಡುವ ಹಲವು ವಿಮಾನಗಳ ಸೇವೆಯಲ್ಲಿ ವ್ಯತ್ಯಯವಾಗಿದೆ.

ಕೆಲವು ವಿಮಾನಗಳು ರದ್ದಾಗಿವೆ, ಕೆಲವು ಟೇಕಾಫ್‌ ಬಳಿಕ ಮರಳಿ ಬಂದಿವೆ ಅಥವಾ ಬೇರೆಡೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ. ನಿಗದಿಯಾಗಿದ್ದ ಏರ್‌ ಇಂಡಿಯಾ, ಇಂಡಿಗೋ ವಿಮಾನಗಳ ಹಾರಾಟವನ್ನು ಹಠಾತ್‌ ರದ್ದುಗೊಳಿಸಲಾಗಿದೆ.ಪ್ರಮುಖವಾಗಿ ದುಬೈಗೆ ತೆರಳುವ ವಿಮಾನಗಳ ಹಾರಾಟ ಸ್ಥಗಿತಗೊಂಡಿದ್ದು ಪ್ರಯಾಣಿಕರು ಪರದಾಡುವಂತಾಗಿದೆ.

ವಿದೇಶಕ್ಕೆ ಪ್ರಯಾಣ ಮಾಡುವ ಪ್ರಯಾಣಿಕರು ಆಯಾ ವಿಮಾನ ಸಂಸ್ಥೆಗಳು ಖಚಿತಪಡಿಸಿದ ಬಳಿಕವಷ್ಟೇ ವಿಮಾನ ನಿಲ್ದಾಣಕ್ಕೆ ಆಗಮಿಸಿ ಎಂದು ವಿಮಾನ ನಿಲ್ದಾಣ ಪ್ರಾಧಿಕಾರಿಗಳು ಮನವಿ ಮಾಡಿವೆ.

ಇರಾನ್‌ ವಾಯು ಮಾರ್ಗದಲ್ಲಿ ವಿಮಾನ ಹಾರಾಟ ನಿಷೇಧ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿದೆ. ಗಲ್‌್ಪ ರಾಷ್ಟ್ರಗಳಿಗೆ ತೆರಳುವ ಎಲ್ಲ ಏರ್‌ ಇಂಡಿಯಾ ಎಕ್ಸ್ಪ್ರೆಸ್‌‍ ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ. ಪ್ರಯಾಣಿಕರಿಗೆ ಮಾಹಿತಿ ನೀಡಿದ್ದು, ಹೆಚ್ಚಿನ ವಿವರಗಳಿಗಾಗಿ ಸಂಸ್ಥೆಯ ವೆಬ್ಸೈಟ್‌ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ರದ್ದಾದ ವಿಮಾನಗಳು
9.25 ರ ಮಂಗಳೂರು – ಮಸ್ಕತ್‌ ಏರ್‌ ಇಂಡಿಯಾ ಮಧ್ಯಾಹ್ನ 1.20 ರ ಮಂಗಳೂರು- ದುಬೈ ಏರ್‌ ಇಂಡಿಯಾ ರಾತ್ರಿ 7.15ರ ಮಂಗಳೂರು – ದುಬೈ ಇಂಡಿಗೊ
ರಾತ್ರಿ 8.15ರ ಮಂಗಳೂರು – ದುಬೈ ಏರ್‌ ಇಂಡಿಯಾ ಎಕ್ಸ್ಪ್ರೆಸ್‌‍
ರಾತ್ರಿ 8.55ರ ಮಂಗಳೂರು- ಬಹರೇನ್‌ ಏರ್‌ ಇಂಡಿಯಾ
ರಾತ್ರಿ 9.05ರ ಮಂಗಳೂರು -ಅಬುಧಾಬಿ ಇಂಡಿಗೊ

RELATED ARTICLES

Latest News