ಆರ್ಟಿಕಲ್ 262 ಪ್ರಕಾರ ಎರಡು ರಾಜ್ಯಗಳ ನಡುವಿನ ಜಲ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಮ್ ಕೊರ್ಟ ನೀಡುವ ತೀರ್ಪು ಅಂತಿಮವಲ್ಲ. ಮೇಲ್ಮನೆ ಸಲ್ಲಿಸುವ ಅಧಿಕಾರವಿದೆ.ಇದನ್ನ ಗಮನಿಸಿ ಸರ್ಕಾರ ಕೂಡಲೆ ಸುಪ್ರೀಮ್ ಕೋರ್ಟಗೆ ಮೇಲ್ಮನೆ ಸಲ್ಲಿಸಬೇಕು ಎಂದು ನಟ ವಿನೋದ್ ರಾಜ್ ಆಗ್ರಹಿಸಿದರು.
ನೆಲಮಂಗಲದಲ್ಲಿ ಕಾವೇರಿ ಕುರಿತ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಇವರು, ನಮ್ಮನ್ನ ಆಳಿದ ಎಲ್ಲ ಸರ್ಕಾರಗಳ ವೈಫಲ್ಲದಿಂದ ಕಾವೇರಿ ನೀರಿನ ವಿಷಯದಲ್ಲಿ ಅನ್ಯಾಯವಾಗುತ್ತಿದೆ.
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (29-09-2023)
ನಮಗೆ ಕೇವಲ 34 ಭಾಗ ತಮಿಳುನಾಡಿಗೆ ಉಳಿದ ಭಾಗವೆಂದರೆ ಅದು ನಮಗೆ ಮಾಡಿದ ಅನ್ಯಾಯ.ಇನೇನು ಉಳಿದಿದೆ ನಮಗೆ, ಸಾಯಬೇಕಷ್ಟೆ.ಇಲ್ಲಿಯ ತನಕ ಕರ್ನಾಟಕದ ಪರ ವಾದ ಮಾಡಿದ ವಕೀಲರ ವೈಫಲ್ಯ ಎದ್ದು ಕಾಣುತ್ತಿದೆ.
ಸರ್ಕಾರ ಕಾನೂನಿನ ತಿದ್ದುಪಡಿ ತರಬೇಕು.ನೀರಿನ ವಿಷಯ ಬಂದಾಗ ಎಲ್ಲಾ ಪಕ್ಷಗಳು ಒಂದಾಗಬೇಕು.ಸರ್ವಪಕ್ಷ ಕರೆದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಸಂಸದರು ಮಾತನಾಡಬೇಕು ಎಂದು ಕರೆ ನೀಡಿದರು.