ಹಾಸನ, ಡಿ.5- ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿಯೊಂದಿಗೆ 28 ಕ್ಷೇತ್ರದಲ್ಲಿಯೂ ಸ್ಪರ್ಧೆ ಮಾಡುವ ಮೂಲಕ ಐಕ್ಯತೆ ಪ್ರದರ್ಶನ ಮಾಡಲಿದ್ದೇವೆ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ತಿಳಿಸಿದರು.
ನಗರದ ಸಂಸದರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿಯ ನಂತರ ಸೀಟು ಹಂಚಿಕೆ ವಿಚಾರವಾಗಿ ಮುಂದಿನ ವಾರ ಶಾ, ಮೋದಿಯವರು ಮಾತುಕತೆಗೆ ಕರೆಯಬಹುದು, ಮಾತುಕತೆಯ ನಂತರ ಸೀಟು ಹಂಚಿಕೆ ಬಗ್ಗೆ ತೀರ್ಮಾನ ಅಂತಿಮವಾಗಲಿದೆ ಎಂದರು.
ನಾನು ಕೇವಲ ಅಹಂಕಾರದಲ್ಲಿ ಮಾತನಾಡುತ್ತಿಲ್ಲ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರತ್ಯುತ್ತರ ಕೊಡುವಂತಹ ಸಾಮಥ್ರ್ಯ ಶಕ್ತಿ ಜೆಡಿಎಸ್ ಹಾಗೂ ಬಿಜೆಪಿಗೆ ಇದೆ. ಮೋದಿ ಅವರ ನಾಯಕತ್ವದಲ್ಲಿ ಮುನ್ನಡೆಯಲ್ಲಿದ್ದೇವೆ ಎಂದು ತಿಳಿಸಿದರು.
ಸರ್ಕಾರಿ ಹುದ್ದೆಗಳ ನೇಮಕಾತಿ ಅಕ್ರಮ ತಡೆಗೆ ಕಠಿಣ ಕಾನೂನು
ಜನತಾ ಪರಿವಾರ ಪ್ರಾರಂಭವಾದ ದಿನದಿಂದ ರೈತರು, ಹಿಂದುಳಿದ ವರ್ಗದ ಜನರ ಪರವಾಗಿ ಕೆಲಸ ಮಾಡಿದ್ದೇವೆ. ಇದಕ್ಕೆ ಹಲವು ನಿದರ್ಶನಗಳು ಇದೆ. ನಾಯಕ ಸಮಾಜಕ್ಕೆ, ಮಹಿಳೆಯರಿಗೆ, ಮುಸ್ಲಿಮರಿಗೆ ಮೀಸಲಾತಿ ದೊರಕಿಸಿ ಕೊಟ್ಟಿರುವ ಕೀರ್ತಿ ಜೆಡಿಎಸ್‍ಗೆ ಇದೆ ಎಂದು ಅವರು ಹೇಳಿದರು.
ರೈತರ ಸಂಕಷ್ಟಕ್ಕೆ ಸ್ಪಂದನೆ:
ರಾಜ್ಯದ ರೈತರ ಸಂಕಷ್ಟದ ಸಮಯದಲ್ಲಿ ಜೆಡಿಎಸ್ ಹೋರಾಟ ನಡೆಸಿದ್ದು, 3000 ಮಂದಿ ರೈತರೊಂದಿಗೆ ದೆಹಲಿಯಲ್ಲಿ ಪ್ರತಿಭಟನೆ ಮಾಡಿದ ಉದಾಹರಣೆಗಳು ಇದೆ. ಕಾಫಿ ಬೆಳೆಗಾರರ ಸಂಕಷ್ಟಕ್ಕೂ ಸಹ ಜೆಡಿಎಸ್ ಸ್ಪಂದಿಸಿದೆ. ಇಂತಹ ಪಕ್ಷವನ್ನು ಮುಗಿಸಿಬಿಡುತ್ತೇವೆ ಎಂದು ಬಂದಾಗ ಮೋದಿ ಅವರು ನಮಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಬರುವ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ನಮ್ಮ ಪಕ್ಷದ ಮುಖಂಡರು ಚರ್ಚೆ ನಡೆಸಲಿದ್ದು ಲೋಕಸಭೆ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಹೊರಟ ಮಾಡಲಿದ್ದೇವೆ ಎಂದರು.
ಮುಖಂಡರೊಂದಿಗೆ ಚರ್ಚಿಸಿ ತೀರ್ಮಾನ:
ಪ್ರಧಾನ ಮಂತ್ರಿ ಮೋದಿ, ಗೃಹ ಮಂತ್ರಿ ಅಮಿತ್ ಶಾ, ಪಕ್ಷದ ಅಧ್ಯಕ್ಷರಾದ ನಡ್ದಾ, ರಾಜ್ಯ ಘಟಕದ ಅಧ್ಯಕ್ಷರಾದ ವಿಜಯೇಂದ್ರ , ವಿರೋಧ ಪಕ್ಷದ ನಾಯಕರಾದ ಅಶೋಕ್, ಹಿರಿಯ ಮುಖಂಡರಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜೆಡಿಎಸ್‍ನ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಹಾಗೂ ಕೇಂದ್ರದ ಮುಖಂಡರೊಂದಿಗೆ ಸಮಾಲೋಚನೆ ಮಾಡುವ ಮೂಲಕ ಮುಂಬರುವ ಲೋಕಸಭೆ ಚುನಾವಣೆಗೆ ಮೈತ್ರಿ ಅಭ್ಯರ್ಥಿಗಳ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದರು.
ನಾವು ರಾಜ್ಯದಲ್ಲಿ 28ಕ್ಕೆ 28 ಸ್ಥಾನವನ್ನು ಗೆಲ್ಲಲಿದ್ದೇವೆ ಈ ವಿಚಾರದಲ್ಲಿ ಐಕ್ಯತೆಯನ್ನು ಪ್ರದರ್ಶನ ಮಾಡಲಿದ್ದು ಯಾವುದೇ ಸಂಕೋಚ ಇಲ್ಲ ,ಲೋಕಾ ಚುನಾವಣೆ ಸಂದರ್ಭದಲ್ಲಿನ ಮೈತ್ರಿ ಸ್ಥಳೀಯ ಚುನಾವಣೆ ಗಳಲ್ಲಿಯೂ ಮುಂದುವರೆಯಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು ಸ್ಥಳೀಯ ಸಂಸ್ಥೆಯ ಚುನಾವಣೆ ರಾಷ್ಟ್ರೀಯ ಚುನಾವಣೆಗೆ ಬೆರೆಸುವುದು ಬೇಡ ಎರಡು ಚುನಾವಣೆಗಳಿಗೆ ಅನವಶ್ಯಕ ಹೊಂದಾಣಿಕೆ ಮಾಡುವುದು ಸರಿಯಲ್ಲ ಎಂದರು.
ಕಲ್ಯಾಣ ಕರ್ನಾಟಕ ಭಾಗದ ಖಾಲಿ ಹುದ್ದೆಗಳ ಶೀಘ್ರ ನೇಮಕ
ರಾಜ್ಯದಲ್ಲಿ ಜೆಡಿಎಸ್ ಪ್ರಾದೇಶಿಕ ಪಕ್ಷ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಮೊನ್ನೆ ಕೂಡ ಕಾಂಗ್ರೆಸ್ ನಾಯಕರು ಲಘುವಾಗಿ ಮಾತನಾಡಿದ್ದಾರೆ. ಇದು ಒಂದೆಡೆಯಾದರೆ ಮೋದಿ ಪ್ರಧಾನಿ ಆಗಿ ನನ್ನ ಬಗ್ಗೆ ವೈಯಕ್ತಿಕ ಗೌರವ ಇಟ್ಟುಕೊಂಡಿದ್ದು, ಕಾಂಗ್ರೆಸ್ ನಡವಳಿಕೆಗೆ ಸೂಕ್ಷ್ಮವಾಗಿ ಗಮನಿಸಿ ಮೋದಿ ಮತ್ತು ಷಾ ಅವರು ನಮ್ಮನ್ನು ಸ್ವಾಗತ ಮಾಡಿದ್ದಾರೆ. ಮುಂದಿನ ರಾಜಕೀಯ ಬೆಳವಣಿಗೆ ಮೋದಿ, ಶಾ ಅವರ ಜೊತೆ ಕರ್ನಾಟಕದಲ್ಲಿ ಕಾಂಗ್ರೆಸ್ ವಿರುದ್ಧ ಹೋರಾಡುವುದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ ಎಂದರು.
ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ 130ಕ್ಕೂ ಹೆಚ್ಚು ಸ್ಥಾನ ಗೆದ್ದಿದ್ದೇವೆ ಎಂದು ಬೀಗುತ್ತಿರುವ ಕಾಂಗ್ರೆಸ್ ನಾಯಕರಿಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಮ್ಮ ಶಕ್ತಿ ಏನು ಎಂದು ತೋರಿಸಲಿದ್ದೇವೆ ಎಂದು ತಿಳಿಸಿದರು.