Monday, November 25, 2024
Homeರಾಜ್ಯವೀರ ಅರ್ಜುನನ ನೆನಪಿನಲ್ಲಿ ಸ್ಮಾರಕ ನಿರ್ಮಾಣ

ವೀರ ಅರ್ಜುನನ ನೆನಪಿನಲ್ಲಿ ಸ್ಮಾರಕ ನಿರ್ಮಾಣ

ಬೆಳಗಾವಿ, ಡಿ.5-ಐತಿಹಾಸಿಕ ಮೈಸೂರು ದಸರಾದ ಕೇಂದ್ರ ಬಿಂದುವಾಗಿದ್ದ ಗಜರಾಜ ವೀರ ಅರ್ಜುನ ನೆನಪಿನಲ್ಲಿ ಸರ್ಕಾರ ಸ್ಮಾರಕವೊಂದನ್ನು ನಿರ್ಮಾಣ ಮಾಡುವುದಾಗಿ ಪ್ರಕಟಿಸಿದೆ. ವಿಧಾನ ಪರಿಷತ್ತಿನ ಎರಡನೇ ದಿನ ಕಲಾಪ ಆರಂಭದಲ್ಲಿ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಹಾಗೂ ವೀರ ಯೋಧರು ಮತ್ತು ಐತಿಹಾಸಿಕ ಮೈಸೂರು ದಸರಾ ವೈಭವದ ಕೇಂದ್ರ ಬಿಂದುವಾಗಿದ್ದ ಗಜರಾಜ ಅರ್ಜುನ ನಿಧನಕ್ಕೆ ಸದನದಲ್ಲಿ ಸಂತಾಪ ಸೂಚಿಸಲಾಯಿತು.

ಈ ವೇಳೆ ಸಭಾ ನಾಯಕ ಎನ್.ಎಸ್.ಭೋಸರಾಜು ಪ್ರಸ್ತಾಪಿಸಿ, ಬಲಶಾಲಿ ಮಾಸ್ಟರ್ ಹಾಗೂ ಹಿರಿಯ ಎಂಬ ಹೆಸರುಗಳಿಂದ ಖ್ಯಾತನಾಗಿದ್ದ ಅರ್ಜುನನನ್ನು 1968ರಲ್ಲಿ ಖೆಡ್ಡಾ ವಿಧಾನದಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿದ್ದು, 22ವರ್ಷಗಳಿಂದ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿತ್ತು.

2012ರಿಂದ 2019ರವರೆಗೆ 8 ಬಾರಿ ನಾಡಹಬ್ಬದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತು ತನ್ನ ರಾಜಗಾಂಭೀರ್ಯದ ನಡಿಗೆಯ ಮೂಲಕ ದಸರೆಯ ಮೆರುಗಿಗೆ ಕೇಂದ್ರ ಬಿಂದುವಾಗಿ ನಾಡಿನ ಜನತೆಯ ಪ್ರೀತಿಗೆ ಪಾತ್ರವಾಗಿತ್ತು.ಇದರ ನೆನಪು ಸದಾ ಉಳಿಸುವ ನಿಟ್ಟಿನಲ್ಲಿ ಸ್ಮಾರಕವೊಂದು ನಿರ್ಮಿಸಲಾಗುವುದು ಎಂದು ಹೇಳಿದರು.

ಇದಕ್ಕೂ ಮುನ್ನ ಸಭಾಪತಿ ಬಸವರಾಜ ಹೊರಟ್ಟಿ ಅವರು, 60 ವರ್ಷದ ನಂತರ ಚಿನ್ನದ ಅಂಬಾರಿ ಹೊರುವ ಕೆಲಸದಿಂದ ನಿವೃತ್ತಿ ಹೊಂದಿ ಈ ಬಾರಿ ದಸರಾ ಮೆರವಣಿಗೆಯಲ್ಲಿ ದಿಕ್ಕು ತೋರುವ ನಿಶಾನೆ ಆನೆ¿ ಯಾಗಿ ಸಾಗಿದ್ದ ಅರ್ಜುನ ನಾಡಿನ ಜನತೆಯ ಮನಸೂರೆಗೊಂಡಿತ್ತು. ಸಕಲೇಶಪುರ ತಾಲ್ಲೂಕಿನ ಯಸಳೂರಿನಲ್ಲಿ ಕಾಡಾನೆಯನ್ನು ಹಿಡಿಯುವ ಕಾರ್ಯಾಚರಣೆ ವೇಳೆಯಲ್ಲಿ ಆಕಸ್ಮಿಕವಾಗಿ ಗಾಯಗೊಂಡು ಮೃತಪಟ್ಟಿರುತ್ತದೆ.

ನ್ಯುಮೋನಿಯಾ ಹೆಚ್ಚಳದ ಬಗ್ಗೆ ಭಯ ಪಡುವ ಅವಶ್ಯಕತೆ ಇಲ್ಲ : ಗುಂಡೂರಾವ್

ಮೈಸೂರು ದಸರಾ ಅಂಬಾರಿ ಹೊರುವ ಕಾಯಕವನ್ನು ಅತ್ಯಂತ ಠೀವಿಯಿಂದ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದ ಹೆಮ್ಮೆಯ ಅರ್ಜುನನ ನಿಧನದಿಂದಾಗಿ ರಾಜ್ಯವು ರಾಜಗಾಂಭೀರ್ಯದ ಗಜರಾಜನನ್ನು ಕಳೆದುಕೊಂಡು ಶೋಕದ ಮಡುವಿನಲ್ಲಿ ಮುಳುಗಿದೆ ಎಂದು ಹೇಳಿದರು.

ಅದೇ ರೀತಿ, ವೀರ ಯೋಧರುಗಳ ಹಾಗೂ ವೀರ ಅರ್ಜುನನ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತಾ, ವೀರ ಯೋಧರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಹಾಗೂ ವೀರ ಅರ್ಜುನನ ಅಪಾರ ಅಭಿಮಾನಿಗಳ ಬಳಗಕ್ಕೆ ಉಂಟಾಗಿರುವ ನೋವನ್ನು ಭರಿಸುವ ಶಕ್ತಿಯನ್ನು ಪರಮಾತ್ಮನು ಕರುಣಿಸಲೆಂದು ಪ್ರಾರ್ಥಿಸುತ್ತೇನೆ ಎಂದು ನುಡಿದರು.

ಎಂಎಲ್‌ಸಿ ಚೆನ್ನರಾಜ್ ಹಟ್ಟಿಹೊಳಿ ಬಂಧನಕ್ಕೆ ವಿಜಯೇಂದ್ರ ಒತ್ತಾಯ

ವಿಪಕ್ಷ ಸದಸ್ಯ ಭೋಜೇಗೌಡ ಮಾತನಾಡಿ, ಅರ್ಜುನ ಸಾವು ಆಕಸ್ಮಿಕವಾಗಿ ನಡೆದಿಲ್ಲ. ಈಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಕೋರಿದರು. ಆಗ ಸಭಾಪತಿ ಚರ್ಚೆಗೆ ಅವಕಾಶ ನೀಡುವುದಾಗಿ ಸಮ್ಮತಿ ಸೂಚಿಸಿದರು. ಕೋಟಾ ಶ್ರೀನಿವಾಸ ಪೂಜಾರಿ ಪ್ರಸ್ತಾಪಿಸಿ, ಜಮ್ಮು ಕಾಶ್ಮೀರದ ರಚೌರಿ ಜಿಲ್ಲೆಯಲ್ಲಿ ಸೇನಾಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕ್ಯಾಪ್ಟನ್ ಪ್ರಾಂಜಲ್ ಸೇರಿದಂತೆ ಕ್ಯಾಪ್ಟನ್ ಶುಭಂ ಗುಪ್ತಾ, ಹವಲ್ದಾರ ಅಬ್ದುಲ್ ಮಜಿಕ್, ಲಾನ್ಸ್ ನಾಯ್ ಸಂಜಯ್ ಬಿಸ್ಟ್ ಮತ್ತು ಸಚಿನ್ ಲಾರ್ ಈ ಐದು ವೀರ ಯೋಧರುಗಳು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ಹುತಾತ್ಮರಾಗಿದ್ದು, ಇವರ ದೇಶ ಸೇವೆ ಎಂದಿಗೂ ನೆನಪಿನಲ್ಲಿ ಉಳಿಸಿಕೊಳ್ಳಲಿದೆ ಎಂದರು.

RELATED ARTICLES

Latest News