Friday, November 22, 2024
Homeರಾಜ್ಯಸಹಕಾರ ಸಂಘಗಳ ಅವ್ಯವಹಾರ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ

ಸಹಕಾರ ಸಂಘಗಳ ಅವ್ಯವಹಾರ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ

ಬೆಳಗಾವಿ,ಡಿ.5- ಸಹಕಾರ ಸಂಘಗಳಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ನಿಯಂತ್ರಣ ಮಾಡಲು ಹಾಲಿ ಇರುವ ಕಾಯ್ದೆಗೆ ತಿದ್ದುಪಡಿ ಮಾಡಲು ಹಿರಿಯ ತಜ್ಞರ ಸಮಿತಿಯನ್ನು ರಚನೆ ಮಾಡಲಾಗಿದ್ದು, ಮುಂದಿನ ಅವೇಶನದಲ್ಲಿ ವರದು ಮಂಡಿಸುತ್ತೇವೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ವಿಧಾನಪರಿಷತ್‍ಗೆ ತಿಳಿಸಿದ್ದಾರೆ.

ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸಹಕಾರ ಸಂಘಗಳಲ್ಲಿ ಹಲವಾರು ವರ್ಷಗಳಿಂದ ವ್ಯಾಪಕವಾದ ಭ್ರಷ್ಟಾಚಾರ ಮತ್ತು ಹಗರಣಗಳು ನಡೆಯುತ್ತಿವೆ ಎಂಬ ಆರೋಪಗಳು ಕೇಳಿಬಂದಿವೆ. ಇದನ್ನು ನಿಯಂತ್ರಿಸಲು ಈಗಿರುವ ಕಾಯ್ದೆಗೆ ತಿದ್ದುಪಡಿ ತರಲು ಹಿರಿಯ ತಜ್ಞರ ಸಮಿತಿಯನ್ನು ರಚಿಸಲಾಗಿದೆ. ಮುಂದಿನ ಅಧಿವೇಶನದೊಳಗೆ ವರದಿಯು ಸರ್ಕಾರದ ಕೈ ಸೇರಲಿದ್ದು, ಬಳಿಕ ಮಂಡನೆ ಮಾಡುತ್ತೇವೆ ಎಂದು ತಿಳಿಸಿದರು.

ಸೋಮವಾರವಷ್ಟೇ ಸಮಿತಿ ತಜ್ಞರ ಜೊತೆ ಸಭೆ ನಡೆಸಿದ್ದೇನೆ. ಪ್ರಸ್ತುತ ಬೆಳಗಾವಿ ಅಧಿವೇಶನದಲ್ಲಿ ಇದನ್ನು ಮಂಡಿಸುವ ಉದ್ದೇಶವಿತ್ತು. ಅಮೂಲಾಗ್ರ ಬದಲಾವಣೆಗೆ ಸಮಯಾವಕಾಶ ಬೇಕು ಎಂದು ಕೇಳಿಕೊಂಡಿದ್ದಾರೆ. ಇನ್ನು ಮುಂದೆ ಸಹಕಾರಿ ಸಂಘಗಳಲ್ಲಿ ಅವ್ಯವಹಾರ, ಹಗರಣಗಳು, ಸಹಕಾರಿಗಳು ಒಪ್ಪದ ಯಾವುದೇ ವ್ಯವಹಾರಗಳು ನಡೆಯುವುದಿಲ್ಲ. ಈಗ ನಮ್ಮ ಸರ್ಕಾರ ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ ಎಂದು ಹೇಳಿದರು.

ಸಹಕಾರ ಸಂಘಗಳ ಸ್ಥಿತಿಗತಿಗಳನ್ನು ಕಲಂ 63ರಡಿ ಪ್ರತಿ ಸಹಕಾರಿ ಸಂಘದ ಲೆಕ್ಕ ಪರಿಶೋಧನೆಯನ್ನು ಸೆಪ್ಟಂಬರ್ 1ನೇ ತಾರೀಖಿನೊಳಗೆ ಮುಕ್ತಾಯಗೊಳಿಸಬೇಕೆಂಬ ನಿಯಮವಿದೆ. ಚಾರ್ಟರ್ಡ್ ಅಕೌಂಟೆಂಟ್‍ಗಳಿಗೆ ಹೆಚ್ಚಿನ ವೆಚ್ಚ ತಗಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ತಿದ್ದುಪಡಿಯಲ್ಲಿ ಇದು ಕೂಡ ಪ್ರಸ್ತಾವನೆಯಾಗಲಿದೆ ಎಂದು ತಿಳಿಸಿದರು.

ನ್ಯುಮೋನಿಯಾ ಹೆಚ್ಚಳದ ಬಗ್ಗೆ ಭಯ ಪಡುವ ಅವಶ್ಯಕತೆ ಇಲ್ಲ : ಗುಂಡೂರಾವ್

ಸಹಕಾರ ಸಂಘಗಳ ಲೆಕ್ಕ ಪರಿಶೋಧನೆಯನ ತಜ್ಞರು, ಲೆಕ್ಕ ಪರಿಶೋಧಕರು ಹಾಗೂ ಇಲಾಖೆಯ ಲೆಕ್ಕ ಪರಿಶೋಧಕರು ನಿರ್ವಹಿಸುತ್ತಾರೆ. ರಾಜ್ಯ ಸಹಕಾರಿ ಬ್ಯಾಂಕ್ ಹಾಗೂ ಕೇಂದ್ರ ಸಹಕಾರಿ ಬ್ಯಾಂಕ್‍ಗಳು ರಾಷ್ಟ್ರೀಯ ಬ್ಯಾಂಕ್‍ನಿಂದ ಅನುಮೋದನೆಗೊಂಡ ಆಯ್ಕೆಯಾದ ಲೆಕ್ಕಿಗರು ಲೆಕ್ಕ ಪರಿಶೋಧನೆ ಮಾಡುತ್ತಾರೆ. ಸಹಕಾರಿ ಸಂಘಗಳ ಸ್ಥಿತಿಗತಿಗಳನ್ನು ಅವಲೋಕಿಸಿ ಸುಧಾರಣೆ ಕೈಗೊಳ್ಳುವ ವ್ಯವಸ್ಥೆ ರೂಪಿಸಲಾಗಿದೆ ಎಂದು ರಾಜಣ್ಣ ಹೇಳಿದರು.

ಸಹಕಾರಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಸಮಯ, ಸಂದರ್ಭ ಹಾಗು ಆರ್ಥಿಕ ಸ್ಥಿತಿಗತಿ ನೋಡಿಕೊಂಡು ಭರ್ತಿ ಮಾಡಲು ಅವಕಾಶವಿದೆ. ಖಾಲಿ ಹುದ್ದೆಗಳನ್ನು ಆಡಳಿತ ಮಂಡಳಿಯವರೇ ಭರ್ತಿ ಮಾಡಿಕೊಳ್ಳುತ್ತಾರೆ ಎಂದು ಅವರು ಹೇಳೀದರು.

RELATED ARTICLES

Latest News