Home ಇದೀಗ ಬಂದ ಸುದ್ದಿ ಸಿಐಡಿ ಖ್ಯಾತಿಯ ನಟ ದಿನೇಶ್ ಫಡ್ನಿಸ್ ವಿಧಿವಶ

ಸಿಐಡಿ ಖ್ಯಾತಿಯ ನಟ ದಿನೇಶ್ ಫಡ್ನಿಸ್ ವಿಧಿವಶ

0
ಸಿಐಡಿ ಖ್ಯಾತಿಯ ನಟ ದಿನೇಶ್ ಫಡ್ನಿಸ್ ವಿಧಿವಶ

ಮುಂಬೈ, ಡಿ.5- ಮೂತ್ರ ಪಿಂಡ ಹಾಗೂ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಸಿಐಡಿ ಧಾರಾವಾಹಿ ಖ್ಯಾತಿಯ ನಟ ದಿನೇಶ್ ಫಡ್ನಿಸ್ ಅವರು ವಿಧಿವಶರಾಗಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ ಎಂದು ನಟ ಆದಿತ್ಯ ಶ್ರೀವಾಸ್ತವ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ನಟ ದಿನೇಶ್ ಫಡ್ನಿಸ್ ಅವರಿಗೆ 57 ವರ್ಷ ವಯಸ್ಸಾಗಿತ್ತು. ಸಿಐಡಿ ಧಾರಾವಾಹಿಯ ಫ್ರೆಡೆರಿಕ್ಸ್ ಪಾತ್ರದ ಮೂಲಕ ಜನರ ಗಮನ ಸೆಳೆದಿದ್ದ ದಿನೇಶ್ ಫಡ್ನಿಸ್ ಅವರು ಮುಂಬೈನ ತುಂಗಾ ಆಸ್ಪತ್ರೆಯಲ್ಲಿ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಮಧ್ಯರಾತ್ರಿ12.08ರಲ್ಲಿ ಚಿಕಿತ್ಸೆ ಫಲಿಸದೆ ಇಹಲೋಕದ ಯಾತ್ರೆ ಮುಗಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ನಟ ಹಾಗೂ ಸ್ನೇಹಿತ ಆದಿತ್ಯ ಶ್ರೀವಾಸ್ತವ, `ದಿನೇಶ್ ಅವರು ಇಂದು ಮಧ್ಯರಾತ್ರಿ 12.08ರಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಅವರು ಕೆಲವು ದಿನಗಳಿಂದ ಮೂತ್ರಪಿಂಡ ಹಾಗೂ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದು ಕಳೆದ 3 ದಿನಗಳಿಂದ ಅವರ ಆರೋಗ್ಯ ವಿಷಮ ಸ್ಥಿತಿ ತಲುಪಿತ್ತು’ ಎಂದು ಹೇಳಿದ್ದಾರೆ.

ಮೆಕ್ಕೆಜೋಳ ಗೋದಾಮು ದುರಂತದಲ್ಲಿ ಮತೃಪಟ್ಟ ಕಾರ್ಮಿಕರ ಸಂಖ್ಯೆ 7ಕ್ಕೆ ಏರಿಕೆ

ದಿನೇಶ್ ಫಡ್ನಿಸ್ ಅವರು ಸಿಐಎಫ್, ಅದಾಲತ್, ತಾರಕ್ ಮೆಹ್ತಾ ಕಾ ಔಲಾತ್ ಚಸ್ಮಾ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದರಲ್ಲದೆ, ಶಾರ್ಫರೋಷ್, ಮೇಲಾ, ಆಫೀಸರ್ ಸಿನಿಮಾಗಳಲ್ಲಿ ನಟಿಸಿದ್ದರು. ದಿನೇಶ್ ಫಡ್ನಿಸ್ ಅವರ ನಿಧನಕ್ಕೆ ಹಿರಿ ಹಾಗೂ ಕಿರಿ ತೆರೆಯ ಕೆಲವು ಕಲಾವಿದರು ಹಾಗೂ ತಂತ್ರಜ್ಞರು ಸಂತಾಪ ಸೂಚಿಸಿದ್ದಾರೆ. ಅವರ ಅಂತಿಮ ಸಂಸ್ಕಾರವು ಇಂದು ಬೆಳಗ್ಗೆ ಬೊರಿವಲ್ಲಿಯಲ್ಲಿ ನೆರವೇರಿದೆ.