Tuesday, February 27, 2024
Homeರಾಜ್ಯಮೆಕ್ಕೆಜೋಳ ಗೋದಾಮು ದುರಂತದಲ್ಲಿ ಮತೃಪಟ್ಟ ಕಾರ್ಮಿಕರ ಸಂಖ್ಯೆ 7ಕ್ಕೆ ಏರಿಕೆ

ಮೆಕ್ಕೆಜೋಳ ಗೋದಾಮು ದುರಂತದಲ್ಲಿ ಮತೃಪಟ್ಟ ಕಾರ್ಮಿಕರ ಸಂಖ್ಯೆ 7ಕ್ಕೆ ಏರಿಕೆ

ವಿಜಯಪುರ, ಡಿ.5- ಕೈಗಾರಿಕ ಪ್ರದೇಶದಲ್ಲಿರುವ ಗೋದಾಮಿನಲ್ಲಿ ಮೆಕ್ಕೆಜೋಳದ ಮೂಟೆಗಳು ಕಾರ್ಮಿಕರ ಮೇಲೆ ಉರುಳಿ ಬಿದ್ದು, ಅದರಡಿಯಲ್ಲಿ ಸಿಲುಕಿದ್ದ ಕಾರ್ಮಿಕರ ಪೈಕಿ ಏಳು ಮಂದಿ ಮೃತಪಟ್ಟಿದ್ದು, ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ಹೊರ ತೆಗೆದಿದ್ದಾರೆ.ಬಿಹಾರ ಮೂಲದ ಕಾರ್ಮಿಕರಾದ ರಾಜೇಶ್ ಮುಖಿಯಾ(25), ರಾಮಬ್ರೀಜ್ ಮುಖಿಯಾ(29), ಶಂಭು ಮುಖಿಯಾ(26), ಲುಕೋ ಜಾಧವ್(45), ರಾಮ್ ಬಾಲಕ್(52), ಕೃಷ್ಣಕುಮಾರ್(22), ಗುರುಲಾಲ್ ಚಂದ್(50) ಮೃತಪಟ್ಟ ದುರ್ದೈವಿಗಳು.

ಬಿಜೆಪಿ-ಜೆಡಿಎಸ್ ಮೋದಿ ನಾಯಕತ್ವದಲ್ಲಿ ಮುನ್ನಡೆಯಲಿದೆ : ದೇವೇಗೌಡರು

ವಿಜಯಪುರ ನಗರದ ಹೊರ ವಲಯದಲ್ಲಿ ರಾಜಗುರು ಇಂಡಸ್ಟ್ರೀಸ್ ಎಂಬ ಗೋದಾಮು ಇದ್ದು, ಈ ಗೋದಾಮಿನಲ್ಲಿ ಮೆಕ್ಕೆಜೋಳದ ಮೂಟೆಗಳನ್ನು ಸಂಗ್ರಹಿಸಿಡಲಾಗಿದೆ. ಹಲವು ವರ್ಷಗಳಿಂದ ಬಿಹಾರ ಮೂಲದ ಕಾರ್ಮಿಕರು ಈ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದಾರೆ. ನಿನ್ನೆ ಸಂಜೆ ಕಾರ್ಮಿಕರು ಕೆಲಸದಲ್ಲಿ ತೊಡಗಿದ್ದಾಗ ಏಕಾಏಕಿ ಮೆಕ್ಕೆಜೋಳದ ಮೂಟೆಗಳು ಅವರ ಮೇಲೆ ಉರುಳಿ ಬಿದ್ದಿವೆ. ತಕ್ಷಣ ನಾಲ್ಕು ಜೆಸಿಬಿಗಳ ಮೂಲಕ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತ್ತಾದರೂ ಕಾರ್ಮಿಕರನ್ನು ಆ ಸಂದರ್ಭದಲ್ಲಿ ರಕ್ಷಿಸಲು ಸಾಧ್ಯವಾಗಿಲ್ಲ.

ಸ್ಥಳಕ್ಕೆ ಬೆಳಗಾವಿ ಹಾಗೂ ಕಲಬುರಗಿಯಿಂದ ಎಸ್‍ಡಿಆರ್‍ಎಫ್ ಸಿಬ್ಬಂದಿ, ಅಗ್ನಿಶಾಮಕ ದಳದ ಸಿಬ್ಬಂದಿಯೂ ಸಹ ರಕ್ಷಣಾ ತಂಡದ ಜೊತೆ ಕೈಜೋಡಿಸಿ ಕಾರ್ಮಿಕರ ಮೇಲೆ ಬಿದ್ದಿರುವ ಮೂಟೆಗಳನ್ನು ತೆರವು ಮಾಡುವ ಕಾರ್ಯಾಚರಣೆ ಬರದಿಂದ ಸಾಗಿತ್ತು. ಸಂಜೆಯಿಂದ ನಿರಂತರವಾಗಿ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದರಾದರೂ ಮೂಟೆಗಳಡಿ ಸಿಲುಕಿ ಉಸಿರುಗಟ್ಟಿ ಕಾರ್ಮಿಕರು ಮೃತಪಟ್ಟಿದ್ದು, ಇದುವರೆಗೂ ಏಳು ಮಂದಿ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.

ಸಚಿವರ ಭೇಟಿ:
ಬೆಳಗಾವಿಯ ವಿಧಾನಮಂಡಲದ ಅಧಿವೇಶನದಲ್ಲಿದ್ದ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಅಲ್ಲಿಂದ ವಾಪಸ್ ಆಗಿದ್ದು, ರಾಜಗುರು ಮೆಕ್ಕೆಜೋಳ ಸಂಸ್ಕರಣ ಘಟಕಕ್ಕೆ ಆಗಮಿಸಿ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಸ್ಥಳದಲ್ಲಿದ್ದ ಕಾರ್ಮಿಕರಿಗೆ ಸಾಂತ್ವನ ಹೇಳಿದರು.

ಭೀಕರ ದುರಂತ:
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಭೀಕರ ದುರಂತ ನಡೆದು ಹೋಗಿದೆ. ಉದ್ಯೋಗ ಅರಸಿಕೊಂಡು ಬೇರೆ ರಾಜ್ಯದಿಂದ ಇಲ್ಲಿಗೆ ಬಂದು ಕೆಲಸ ಮಾಡುತ್ತಿರುವಾಗ ಇಂತಹ ಅನಾಹುತ ಸಂಭವಿಸಿರುವುದು ವಿಷಾದಕರ. ನಮ್ಮ ಪ್ರಥಮ ಆದ್ಯತೆ ಕಾರ್ಮಿಕರ ರಕ್ಷಣೆಯಾಗಿದೆ ಎಂದರು.ಕಾರ್ಮಿಕರ ಮೃತದೇಹಗಳನ್ನು ಅವರ ಮನೆಗಳಿಗೆ ತಲುಪಿಸುವಂತಹ ಕಾರ್ಯ ಮಾಡಲಾಗುತ್ತದೆ. ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡಿ ಮಾಹಿತಿ ಪಡೆದುಕೊಂಡು ಮುಖ್ಯಮಂತ್ರಿಗಳಿಗೂ ಸಹ ಈ ಬಗ್ಗೆ ವಿವರಿಸಿದ್ದೇನೆ. ಗಾಯಾಳುಗಳಿಗೆ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.

ಮೃತರ ಕುಟುಂಬಕ್ಕೆ ಪರಿಹಾರ:
ಮೃತ ಕಾರ್ಮಿಕರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದ ಸಚಿವರು, ಗೋದಾಮು ಮಾಲೀಕರಿಂದಲೂ ಸಹ ಕಾರ್ಮಿಕರ ಕುಟುಂಬಕ್ಕೆ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇನೆ ಎಂದರು.ಗೋದಾಮಿನಲ್ಲಿ ಸಂಪೂರ್ಣ ಕಾರ್ಯಾಚರಣೆ ಮುಗಿದ ನಂತರ ಹೆಚ್ಚಿನ ಮಾಹಿತಿ ದೊರೆಯಲಿದೆ. ಕಾರ್ಮಿಕರು ಮತ್ತು ಕುಟುಂಬಸ್ಥರು ದುಃಖದಲ್ಲಿದ್ದಾರೆ ಎಂದರು.

ಬಿಗುವಿನ ವಾತಾವರಣ:
ರಕ್ಷಣ ಕಾರ್ಯಾಚರಣೆ ವೇಳೆ ಗೋದಾಮಿನ ಬಳಿ ಬಿಗುವಿನ ವಾತಾವರಣ ಉಂಟಾಗಿತ್ತು. ರಕ್ಷಣಾ ಸಿಬ್ಬಂದಿ, ಅಗ್ನಿಶಾಮಕ ಸಿಬ್ಬಂದಿ, ಗ್ಯಾಸ್ ಕಟರ್ ಮೂಲಕ ಕಬ್ಬಿಣದ ರಾಡುಗಳನ್ನು ಕತ್ತರಿಸಿ ಕಾರ್ಮಿಕರ ಶವಗಳನ್ನು ಹೊರತೆಗೆದು ಮೃತದೇಹಗಳನ್ನು ಅಂಬ್ಯುಲೆನ್ಸ್‍ನಲ್ಲಿ ಆಸ್ಪತ್ರೆಗೆ ಕೊಂಡೊಯ್ಯಲು ದಾರಿ ಬಿಡದೆ ಪ್ರತಿಭಟನೆಗೆ ಮುಂದಾದರು. ಅಂಬ್ಯಲೆನ್ಸ್‍ನ್ನು ಅಡ್ಡ ಹಾಕಿ ಮೊದಲು ಪರಿಹಾರ ಘೋಷಿಸಿ ನಂತರ ಮೃತದೇಹಗಳನ್ನು ಕೊಂಡೊಯ್ಯಿರಿ ಎಂದು ಪಟ್ಟು ಹಿಡಿದರು. ಆ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಸಚಿವರು ಕಾರ್ಮಿಕರ ಮನವೊಲಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಮುಸ್ಲಿಮರಿಗೆ ಸಂಪತ್ತು ಹಂಚುತ್ತೇನೆ ಎಂದ ಸಿಎಂಗೆ ತಿರುಗೇಟು ಕೊಟ್ಟ ಅಶೋಕ್

ಕಾರ್ಮಿಕರ ರಕ್ಷಣೆ:
ಮೆಕ್ಕೆಜೋಳ ಮೂಟೆಗಳಡಿ 11 ಕಾರ್ಮಿಕರು ಸಿಲುಕಿರುವ ಸಾಧ್ಯತೆ ಇದ್ದು, ಮೂವರನ್ನು ರಕ್ಷಿಸಲಾಗಿದೆ. ಏಳು ಮಂದಿಯ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಸಿಲುಕಿರುವ ಕಾರ್ಮಿಕರ ರಕ್ಷಣೆಗಾಗಿ ಪೂನಾದಿಂದ 30ಕ್ಕೂ ಅಧಿಕ ಸಿಬ್ಬಂದಿ ಇರುವ ಎನ್‍ಡಿ ಆರೆಸ್ಟ್ ತಂಡ ಕಾರ್ಯಾಚರಣೆಯಲ್ಲಿ ತೊಡಗಿದೆ.

RELATED ARTICLES

Latest News