ಬೆಂಗಳೂರು, ಡಿಸೆಂಬರ್ 6, 2023: ಹೊಸ ಬಗೆಯ ಮತ್ತು ಕೈಗೆಟುಕುವ ದ್ವಿಚಕ್ರ ವಾಹನ ಮತ್ತು ಆಟೊರಿಕ್ಷಾ ಸೇವೆಗಳಿಗೆ ಹೆಸರುವಾಸಿಯಾದ ಭಾರತದ ಪ್ರಮುಖ ಬಾಡಿಗೆ ಸೇವೆಗಳ ಪ್ರಯಾಣ ಅಪ್ಲಿಕೇಷನ್ ರ‍್ಯಾಪಿಡೊ, ಈಗ ಟ್ಯಾಕ್ಷಿ ಸೇವೆ ಆರಂಭಿಸುವುದಾಗಿ ಪ್ರಕಟಿಸಿದೆ.
ಬಾಡಿಗೆ ಟ್ಯಾಕ್ಸಿ ಸೇವೆ ಆರಂಭಿಸಿರುವುದು ನಗರ ಸಂಚಾರ ಸೌಲಭ್ಯದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಮತ್ತು ಎಲ್ಲಾ ಬಗೆಯ ಪ್ರಯಾಣದ ಅಗತ್ಯಗಳಿಗಾಗಿ ನಗರಗಳ ಮಧ್ಯೆ ಕೈಗೆಟುಕುವ ದರದಲ್ಲಿ ಬಾಡಿಗೆ ಟ್ಯಾಕ್ಸಿ ಸೇವೆ ಆರಂಭಿಸಿರುವುದು ರ‍್ಯಾಪಿಡೊದ ಹೊಸ ಹೆಜ್ಜೆಯಾಗಿದೆ. ತನ್ನ ಕೊಡುಗೆಗಳನ್ನು ವೈವಿಧ್ಯಗೊಳಿಸುವ ಮೂಲಕ, ರ‍್ಯಾಪಿಡೊ ವಿಶಾಲ ಶ್ರೇಣಿಯ ಪ್ರಯಾಣದ ಅಗತ್ಯಗಳಿಗಾಗಿ ಪ್ರಯಾಣಿಕರ ಪಾಲಿಗೆ ಸುಲಭವಾಗಿ ಬಳಸುವ ಮತ್ತು ಕ್ಯಾಪ್ಟನ್‌ರಿಗೆ ಲಾಭದಾಯಕವಾಗಿರುವ ವೇದಿಕೆಯಾಗಿ ಬೆಳೆಯುವ ಗುರಿ ಹೊಂದಿದೆ.
ದೇಶದಾದ್ಯಂತ ಕಾರ್ಯನಿರ್ವಹಿಸುವ ಎಲ್ಲಾ ಕ್ಯಾಬ್ ಕ್ಯಾಪ್ಟನ್‌ರಿಗೆ ಇದು ಸುಲಭವಾಗಿ ದೊರೆಯಲಿದೆ. ಈ ಸೇವೆಗಳನ್ನು ಉದ್ಯಮಶೀಲತೆ ಉತ್ತೇಜಿಸಲು ವಿನ್ಯಾಸಗೊಳಿಸಲಾಗಿದೆ. ಚಾಲಕರಿಗೆ ಸುಸ್ಥಿರ ಜೀವನೋಪಾಯವನ್ನೂ ಒದಗಿಸಲಿದೆ. ಚಾಲಕರನ್ನು ಸಬಲೀಕರಣಗೊಳಿಸುವುದರ ಹೊರತಾಗಿ, ಗ್ರಾಹಕರಿಗೆ ಕೈಗೆಟುಕುವ ಬೆಲೆಗೆ ಸೇವೆ ಒದಗಿಸಲು ಗಮನ ಕೇಂದ್ರೀಕರಿಸಲಿದೆ. ಪ್ರತಿಯೊಬ್ಬರಿಗೂ ಬಾಡಿಗೆ ಟ್ಯಾಕ್ಸಿ ಸೇವೆಯು ಸುಲಭವಾಗಿ ಕಡಿಮೆ ಬೆಲೆಗೆ ದೊರೆಯುವಂತೆಯೂ ಮಾಡಲಿದೆ.
ಬೈಕ್ ಟ್ಯಾಕ್ಸಿಗಳಲ್ಲಿ ಶೇ 60ರರಷ್ಟು ಮಾರುಕಟ್ಟೆ ಪಾಲು ಹೊಂದಿರುವ ರ‍್ಯಾಪಿಡೊ, ರ‍್ಯಾಪಿಡೊ ಕ್ಯಾಬ್ಸ್ ಸೇವೆಯನ್ನು ದೇಶದಾದ್ಯಂತ ಆರಂಭಿಸಲು 1 ಲಕ್ಷ ವಾಹನಗಳನ್ನು ಪರಿಚಯಿಸುವುದರೊಂದಿಗೆ ತನ್ನ ಸೇವೆ ವಿಸ್ತರಿಸುತ್ತಿದೆ.
ಈ ಸಾಧನೆಯ ಹೊಸ ಮೈಲುಗಲ್ಲಿನ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿರುವ ರ‍್ಯಾಪಿಡೊದ ಸಹ-ಸಂಸ್ಥಾಪಕ ಪವನ್ ಗುಂತುಪಲ್ಲಿ ಅವರು, “ದೇಶದಾದ್ಯಂತ ನಮ್ಮ ಬೈಕ್ ಟ್ಯಾಕ್ಸಿ ಮತ್ತು ಆಟೊ ಸೇವೆಗಳ ಅಗಾಧ ಯಶಸ್ಸಿನ ನಂತರ ರ‍್ಯಾಪಿಡೊ ಕ್ಯಾಬ್ಸ್ (Rapido Cabs ) ಸೇವೆ ಅನ್ನು ದೇಶದಾದ್ಯಂತ ಪರಿಚಯಿಸಲು ನಾವು ತುಂಬ ಉತ್ಸುಕರಾಗಿದ್ದೇವೆ. ನಮ್ಮ ನವೀನ ಎಸ್‌ಎಎಎಸ್ (SaaS) ಆಧಾರಿತ ವೇದಿಕೆಯು ಚಾಲಕರಿಗೆ ಅನ್ವಯವಾಗುವ ಸಾಂಪ್ರದಾಯಿಕ ಕಮಿಷನ್ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರಲಿದೆ.
ಬಾಡಿಗೆ ಟ್ಯಾಕ್ಸಿ ಸೇವೆಗಳನ್ನು ಸಂಘಟಿತ ರೂಪದಲ್ಲಿ ಒದಗಿಸುವ ಕಂಪನಿಗಳ ಜೊತೆಗೆ ಕಮಿಷನ್ ಹಂಚಿಕೆಯ ಸವಾಲನ್ನು ಇದು ಸೂಕ್ತವಾಗಿ ನಿಭಾಯಿಸಲಿದೆ. ಈ ಪಾರದರ್ಶಕ ವಿಧಾನವು ಚಾಲಕರು ಕನಿಷ್ಠ ಸಾಫ್ಟ್‌ವೇರ್ ಬಳಕೆಯ ಶುಲ್ಕವನ್ನು ಮಾತ್ರ ಪಾವತಿಸುವುದನ್ನು ಖಚಿತಪಡಿಸಲಿದೆ. ಇದು ಉದ್ಯಮದಲ್ಲಿನ ಗಮನಾರ್ಹ ಬದಲಾವಣೆಯನ್ನು ಗುರುತಿಸುತ್ತದ” ಎಂದು ಹೇಳಿದ್ದಾರೆ.
“ಈ ಸೇವೆಯು ಕಡಿಮೆ ಬೆಲೆಯ ಖಾತರಿಯನ್ನು ಖಾತ್ರಿಪಡಿಸುವ ಮೂಲಕ ಗ್ರಾಹಕರಿಗೆ ಆದ್ಯತೆ ನೀಡಲಿದೆ. ನಮ್ಮ ಸೇವೆಗಳನ್ನು ಎಲ್ಲರಿಗೂ ಸುಲಭವಾಗಿ ಕೈಗೆಟುಕುವಂತೆ ಮಾಡಲಿದೆ” ಎಂದೂ ಅವರು ಹೇಳಿದ್ದಾರೆ.
ರ‍್ಯಾಪಿಡೊ ಕ್ಯಾಬ್ಸ್, ನವೀನ ಎಸ್‌ಎಎಎಸ್ (SaaS) ಆಧಾರಿತ ವೇದಿಕೆ ಮೂಲಕ ತನ್ನನ್ನು ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತದೆ. ಇದು ಕ್ಯಾಬ್ ಕ್ಯಾಪ್ಟನ್‌ರಿಗೆ ಅತ್ಯಾಧುನಿಕ, ಶೂನ್ಯ-ಕಮಿಷನ್ ಮಾದರಿ ಒದಗಿಸಲಿದೆ.
ಇದು ನಮ್ಮ ಸೇವೆಯ ಅತ್ಯುತ್ತಮ ಮಾನದಂಡವಾಗಿದೆ. ‘ಎಸ್‌ಎಎಎಸ್”-ಆಧಾರಿತ ವೇದಿಕೆಯು ತಡೆರಹಿತ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಲಿದೆ. ಚಾಲಕರು ಮತ್ತು ಗ್ರಾಹಕರನ್ನು ಪ್ರತ್ಯೇಕವಾಗಿ ಸಂಪರ್ಕಿಸಲಿದೆ. ರ‍್ಯಾಪಿಡೊದ ವ್ಯವಸ್ಥೆಯೊಳಗೆ, ಚಾಲಕರು ರ‍್ಯಾಪಿಡೊ ನಿಂದ ಯಾವುದೇ ಬಗೆಯ ಹಸ್ತಕ್ಷೇಪ ಇಲ್ಲದೆ ಗ್ರಾಹಕರಿಂದ ಬಾಡಿಗೆ ಹಣದ ನೇರ ಪಾವತಿ ಪಡೆಯಲಿದ್ದಾರೆ.
ಈ ಬಗೆಯ ಸೌಲಭ್ಯವನ್ನು ಉಳಿಸಿಕೊಳ್ಳಲು ಮತ್ತು ಅಸಾಧಾರಣ ಸೇವೆ ನೀಡುವುದನ್ನು ಮುಂದುವರಿಸಲು, ಚಾಲಕರು ಅತ್ಯಲ್ಪ ಮೊತ್ತದ ಚಂದಾದಾರಿಕೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಉದಾಹರಣೆಗೆ ಹೇಳುವುದಾದರೆ ಚಾಲಕರು ರ‍್ಯಾಪಿಡೊ ಅಪ್ಲಿಕೇಷನ್‌ನಿಂದ ಗಳಿಸಿದ ಆದಾಯದ ಮೊತ್ತವು ರೂ 10,000ಕ್ಕೆ ತಲುಪಿದರೆ ಅವರು ಸಾಧಾರಣ ಮೊತ್ತವಾದ ರೂ 500 ಚಂದಾದಾರಿಕೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಮೊದಲ ಬಾರಿಗೆ ಪರಿಚಯಿಸಿರುವ ಈ ವಿಧಾನವು ಚಾಲಕರು ತಮ್ಮ ಬಾಡಿಗೆಯ ಸಂಪೂರ್ಣ ಮೌಲ್ಯವನ್ನು ಪಡೆಯುವುದನ್ನು ಖಚಿತಪಡಿಸುತ್ತದೆ. ಜೊತೆಗೆ ಅವರ ಗಳಿಕೆಯ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕೂ ಅವರನ್ನು ಸಬಲೀಕರಣಗೊಳಿಸಲಿದೆ. ಪ್ರಯಾಣಿಕರು ಕೂಡ ಕ್ಯಾಬ್ ವಿಭಾಗದಲ್ಲಿ ಸ್ಪರ್ಧಾತ್ಮಕ ದರಗಳಿಂದ ಪ್ರಯೋಜನ ಪಡೆಯುತ್ತಾರೆ, ಎಲ್ಲವನ್ನು ಒಳಗೊಂಡಿರುವ ಎಸ್‌ಎಎಎಸ್-ಆಧಾರಿತ ವೇದಿಕೆಯು ವಿವಿಧ ಪ್ರಯಾಣ / ಸಂಚಾರದ ಸೇವೆಗಳನ್ನು ಒಂದೇ, ಬಳಕೆದಾರ ಸ್ನೇಹಿ ಅಪ್ಲಿಕೇಷನ್‌ನಲ್ಲಿ ಕ್ರೋಡೀಕರಿಸಲಿದೆ.
ವಹಿವಾಟಿನ ಬೆಳವಣಿಗೆ ಮತ್ತು ವಿಸ್ತರಣೆ ಮುಂದುವರೆಸುವುದರ ಜೊತೆಗೆ ಕ್ಯಾಬ್ ಸೇವೆಗಳಿಗೆ ರ‍್ಯಾಪಿಡೊ ವಿಸ್ತರಣೆ ಮಾಡಿರುವುದು, ತನ್ನ ನಿರಂತರವಾಗಿ ಬೆಳೆಯುತ್ತಿರುವ ಬಳಕೆದಾರರ ವೈವಿಧ್ಯಮಯ ಪ್ರಯಾಣದ ಅಗತ್ಯಗಳನ್ನು ಪೂರೈಸುವ ಕಾರ‍್ಯತಂತ್ರದ ಕ್ರಮವಾಗಿದೆ.