ಇಂಫಾಲ,ಸೆ.29- ಮಣಿಪುರದಲ್ಲಿ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದು, ಕಫ್ರ್ಯೂ ಉಲ್ಲಂಘನೆ ಮಾಡಿ ಸಿಎಂ ಮನೆ ಮೇಲೆ ದಾಳಿಗೆ ಗುಂಪೊಂದು ಯತ್ನಿಸಿದೆ. ಆದರೆ,ಭದ್ರತಾ ಪಡೆಗಳು ಈ ಯತ್ನವನ್ನು ವಿಫಲಗೊಳಿಸಿವೆ.ಇಂಫಾಲದಲ್ಲಿರುವ ಸಿಎಂ ಬಿರೇನ್ ಸಿಂಗ್ ಅವರ ಪೂರ್ವಜರ ಮನೆ ಮೇಲೆ ದಾಳಿ ಯತ್ನ ನಡೆದಿದ್ದು, ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಅಧಿಕಾರಿಗಳು ಯತ್ನವನ್ನು ವಿಫಲಗೊಳಿಸಿದ್ದಾರೆ.
ಘಟನೆ ನಡೆದಾಗ ಸಿಎಂ ತಮ್ಮ ಗೃಹ ಕಚೇರಿಯಲ್ಲಿದ್ದರು. ಮನೆಯಿಂದ 100-150 ಮೀಟರ್ ದೂರದಲ್ಲೇ ಭದ್ರತಾ ಪಡೆಗಳು ಗುಂಪನ್ನು ತಡೆದಿದೆ. ಗುಂಪನ್ನು ಚದುರಿಸಲು ರಾಜ್ಯ ಪೊಲೀಸ್ ಸಿಬ್ಬಂದಿ ಹಾಗೂ ಆರ್ ಎಫ್ ಅಶ್ರುವಾಯುವನ್ನು ಪ್ರಯೋಗಿಸಿದ್ದಾರೆ.
ಏಷ್ಯನ್ ಕ್ರೀಡಾಕೂಟದಲ್ಲಿ ಭಾರತೀಯರ ಪದಕಗಳ ಬೇಟಿಯಾಡಿದ ಶೂಟರ್‌ಗಳು
ಅಧಿಕಾರಿಗಳು ಇಡೀ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿದ್ದರು. ಮನೆಯ ಬಳಿ ಹಿಂದಿನ ಬ್ಯಾರಿಕೇಡ್ಗಳಿಗೆ ಹೆಚ್ಚಿನ ಬ್ಯಾರಿಕೇಡ್‍ಗಳನ್ನು ನಿಯೋಜಿಸಲಾಯಿತು. ಪ್ರತಿಭಟನಾಕಾರರು ರಸ್ತೆಯ ಮಧ್ಯದಲ್ಲಿ ಟೈರ್‍ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಮಣಿಪುರದಲ್ಲಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಸಿದಂತೆ ಮಣಿಪುರದಲ್ಲಿ ಪ್ರತಿಭಟನೆಗಳು ತೋವ್ರಗೊಂಡಿದೆ. ಇದಕ್ಕೂ ಮುನ್ನ ಇಂಫಾಲದ ಪಶ್ಚಿಮ ಜಿಲ್ಲೆಯಲ್ಲಿ ಡಿಸಿ ಕಚೇರಿಯನ್ನು ಪ್ರತಿಭಟನಾನಿರತರು ಧ್ವಂಸಗೊಳಿಸಿ, ವಾಹನಗಳಿಗೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು.